ಸ್ಕೂಟರ್ ಓಡಿಸಲು ಎತ್ತರದ ಸಮಸ್ಯೆಯೇ? ಇಲ್ಲಿದೆ ಪರಿಹಾರ

By Nagaraja

ಬೈಕ್ ವಿಭಾಗಕ್ಕೆ ಹೋಲಿಸಿದಾಗ ದೇಶದ ಸ್ಕೂಟರ್ ಮಾರಾಟದಲ್ಲಿ ಶಿಪ್ರ ಗತಿಯಲ್ಲಿ ಏರಿಕೆಯುಂಟಾಗುತ್ತಿದ್ದು, ಕ್ರಾಂತಿಕಾರಿ ಬದಲಾವಣೆಗೆ ಸಾಕ್ಷಿಯಾಗುತ್ತದೆ. ಸುಲಭ ನಿರ್ವಹಣೆ, ಸುಲಭ ಚಾಲನೆ, ಅಗತ್ಯ ವಸ್ತುಗಳನ್ನು ಸಾಗಿಸಬಲ್ಲ ಸ್ಕೂಟರ್ ಗಳು ಅತ್ಯುತ್ತಮ ಇಂಧನ ಕ್ಷಮತೆಯನ್ನು ಕಾಪಾಡಿಕೊಂಡಿದೆ.

ಇಷ್ಟೆಲ್ಲ ಆದರೂ ಸ್ಕೂಟರ್ ಗಳಲ್ಲಿ ಕೆಲವು ಅನಾನುಕೂಲತೆಗಳಿವೆ. ಇವುಗಳಲ್ಲಿ ಮುಖ್ಯವಾಗಿಯೂ ಸವಾರರ ಎತ್ತರ ನಿರ್ಣಾಯಕ ಘಟಕವೆನಿಸುತ್ತದೆ. ಸೂಕ್ತ ಎತ್ತರದ ಸ್ಕೂಟರ್ ಆಯ್ಕೆ ಮಾಡದಿದ್ದಲ್ಲಿ ಆರಾಮದಾಯಕ ಚಾಲನೆಗೆ ತೊಂದರೆಯಾಗಲಿದೆ. ಪ್ರಸ್ತುತ ಲೇಖನದಲ್ಲಿ ಎತ್ತರದ ಪುರುಷರು ಹಾಗೂ ಮಹಿಳೆಯರು ಓಡಿಸಬಹುದಾದ ಆರು ಅತ್ಯುತ್ತಮ ಸ್ಕೂಟರ್ ಗಳ ಬಗ್ಗೆ ಪಟ್ಟಿ ಮಾಡಿಕೊಡಲಿದ್ದೇವೆ. ಇದರೊಂದಿಗೆ ನಿಮ್ಮ ಸಮಸ್ಯೆಗೆ ಪರಿಹಾರ ದೊರಕುವ ವಿಶ್ವಾಸ ನಮ್ಮದ್ದು.

ಹೋಂಡಾ ಆಕ್ಟಿವಾ

ಹೋಂಡಾ ಆಕ್ಟಿವಾ

ಬೈಕ್ ಮಾರಾಟವನ್ನೇ ಹಿಂದಿಕ್ಕಿರುವ ಹೋಂಡಾ ಆಕ್ಟಿವಾ ಪ್ರಸ್ತುತ ದೇಶದ ಅತ್ಯಂತ ಜನಪ್ರಿಯ ದ್ವಿಚಕ್ರ ವಾಹನವಾಗಿ ಮಾರ್ಪಾಟ್ಟಿದೆ. 760 ಎಂಎಂ ಸೀಟು ಎತ್ತರವನ್ನು ಹೊಂದಿರುವ ಹೋಂಡಾ ಆಕ್ಟಿವಾ ಏಕಕಾಲಕ್ಕೆ ಎತ್ತರದ ಹಾಗೂ ಕಡಿಮೆ ಎತ್ತರದ ಸವಾರರಿಗೆ ಅತ್ಯುತ್ತಮ ಚಾಲನಾ ಅನುಭವನವನ್ನು ಒದಗಿಸುತ್ತದೆ.

ಹೋಂಡಾ ಆಕ್ಟಿವಾ

ಹೋಂಡಾ ಆಕ್ಟಿವಾ

109 ಸಿಸಿ ಎಂಜಿನ್

8 ಅಶ್ವಶಕ್ತಿ, 8.7 ಎನ್ ಎಂ ತಿರುಗುಬಲ,

ಮೈಲೇಜ್: 66 ಕೀ.ಮೀ.

ಸೀಟು ಎತ್ತರ: 765

ಆನ್ ರೋಡ್ ಬೆಲೆ ಬೆಂಗಳೂರು: 60785 ರು.

ಟಿವಿಎಸ್ ಜೂಪಿಟರ್

ಟಿವಿಎಸ್ ಜೂಪಿಟರ್

ಆಕ್ಟಿವಾ ಬಳಿಕ ಅತಿ ಹೆಚ್ಚು ಮಾರಾಟವನ್ನು ದಾಖಲಿಸುತ್ತಿರುವ ಸ್ಕೂಟರ್ ಇದಾಗಿದೆ. ಆಕ್ಟಿವಾಗೆ ನಿಕಟ ಪೈಪೋಟಿಯನ್ನು ನೀಡುತ್ತಿರುವ ಟಿವಿಎಸ್ ಜೂಪಿಟರ್ 765 ಎಂಎಂ ಸೀಟು ಎತ್ತರವನ್ನು ಕಾಪಾಡಿಕೊಂಡಿದೆ.

ಟಿವಿಎಸ್ ಜೂಪಿಟರ್

ಟಿವಿಎಸ್ ಜೂಪಿಟರ್

109 ಸಿಸಿ ಎಂಜಿನ್

7.8 ಅಶ್ವಶಕ್ತಿ, 8 ಎನ್ ಎಂ ತಿರುಗುಬಲ,

ಮೈಲೇಜ್: 62 ಕೀ.ಮೀ.

ಸೀಟು ಎತ್ತರ: 765 ಎಂಎಂ

ಬೆಂಗಳೂರು ಎಕ್ಸ್ ಶೋ ರೂಂ ಬೆಲೆ

ಜೂಪಿಟರ್: 51,909 ರು.

ಜೂಪಿಟರ್ ಝಡ್‌ಎಕ್ಸ್: 53,927 ರು.

ಮಹೀಂದ್ರ ಗಸ್ಟೊ

ಮಹೀಂದ್ರ ಗಸ್ಟೊ

ನಿಮಗೆ ಎತ್ತರ ಒಂದು ಸಮಸ್ಯೆ ಆಗಿದ್ದಲ್ಲಿ ಇದೇ ಸಮಸ್ಯೆಯನ್ನು ನೀಗಿಸುವ ನಿಟ್ಟಿನಲ್ಲಿ ಮಹೀಂದ್ರ ಇದೇ ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಗೆ ಎತ್ತರ ಹೊಂದಾಣಿಸಬಹುದಾದ ಸೀಟುಗಳ ಸ್ಕೂಟರನ್ನು ಪರಿಚಯಿಸುತ್ತಿದೆ. ಇದು ಉದ್ದನೆಯ ಹಾಗೂ ಕಡಿಮೆ ಎತ್ತರದವರಿಗೆ ಸುಲಭವಾಗಿ ನಿರ್ವಹಿಸಲು ಸಾಧ್ಯವಾಗಲಿದೆ.

ಮಹೀಂದ್ರ ಗಸ್ಟೊ

ಮಹೀಂದ್ರ ಗಸ್ಟೊ

109 ಸಿಸಿ ಎಂಜಿನ್

8 ಅಶ್ವಶಕ್ತಿ, 9 ಎನ್ ಎಂ ತಿರುಗುಬಲ,

ಮೈಲೇಜ್: 61 ಕೀ.ಮೀ.

ಸೀಟು ಎತ್ತರ: 770 ಎಂಎಂ (ಕಡಿಮೆ ಮಾಡಿದಾಗ 735 ಎಂಎಂ)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ಡಿಎಕ್ಸ್: 48,580 ರು.

ಎಚ್‌ಎಕ್ಸ್: 50,580 ರು.

ವಿಎಕ್ಸ್: 52,580 ರು.

ವಿಎಕ್ಸ್ ವಿಶೇಷ ಆವೃತ್ತಿ: 52,460 ರು.

ಹೀರೊ ಮ್ಯಾಸ್ಟ್ರೋ

ಹೀರೊ ಮ್ಯಾಸ್ಟ್ರೋ

ಮಹೀಂದ್ರ ಗಸ್ಟೊಗೆ ಪ್ರತಿಸ್ಪರ್ಧಿಯಾಗಿರುವ ಹೀರೊ ಮ್ಯಾಸ್ಟ್ರೋದಲ್ಲಿ 760 ಎಂಎಂ ಸೀಟು ಎತ್ತರ ಇರಲಿದೆ. ಅಲ್ಲದೆ ನಿರ್ವಹಣೆ, ಚಾಲನೆ ಮತ್ತು ಮೈಲೇಜ್ ವಿಚಾರದಲ್ಲಿ ಅತ್ಯುತ್ತಮ ಹೆಸರು ಕಾಪಾಡಿಕೊಂಡಿದೆ.

ಹೀರೊ ಮ್ಯಾಸ್ಟ್ರೋ

ಹೀರೊ ಮ್ಯಾಸ್ಟ್ರೋ

109 ಸಿಸಿ ಎಂಜಿನ್

8 ಅಶ್ವಶಕ್ತಿ, 9 ಎನ್ ಎಂ ತಿರುಗುಬಲ,

ಮೈಲೇಜ್: 68 ಕೀ.ಮೀ.

ಸೀಟು ಎತ್ತರ: 760 ಎಂಎಂ

ಎಕ್ಸ್ ಶೋ ರೂಂ ಬೆಲೆ (ಬೆಂಗಳೂರು): 49,995 ರು.

ಪಿಯಾಜಿಯೊ ವೆಸ್ಪಾ

ಪಿಯಾಜಿಯೊ ವೆಸ್ಪಾ

ಪ್ರೀಮಿಯಂ ಸ್ಕೂಟರ್ ಖರೀದಿಸಲು ಬಯಸುವ ಎತ್ತರದ ಮಹಿಳಾ ಸವಾರರಿಗೆ ಪಿಯಾಜಿಯೊ ವೆಸ್ಪಾ ಸೂಕ್ತ ಆಯ್ಕೆಯಾಗಿರಲಿದೆ. ಕ್ಲಾಸಿಕ್ ವಿನ್ಯಾಸ ಮತ್ತು ಅತ್ಯುತ್ತಮ ಶೈಲಿಯಿಂದ ತುಂಬಿ ತುಳುಕುತ್ತಿರುವ ವೆಸ್ಪಾ 770 ಎಂಎಂ ಸೀಟು ಎತ್ತರವನ್ನು ಕಾಯ್ದುಕೊಂಡಿರುವುದು ಗಮನಾರ್ಹ.

ಪಿಯಾಜಿಯೊ ವೆಸ್ಪಾ

ಪಿಯಾಜಿಯೊ ವೆಸ್ಪಾ

125 ಸಿಸಿ ಎಂಜಿನ್

10 ಅಶ್ವಶಕ್ತಿ, 11 ಎನ್ ಎಂ ತಿರುಗುಬಲ,

ಮೈಲೇಜ್: 55 ಕೀ.ಮೀ.

ಸೀಟು ಎತ್ತರ: 770 ಎಂಎಂ

ಹೋಂಡಾ ಎವಿಯೇಟರ್

ಹೋಂಡಾ ಎವಿಯೇಟರ್

ಹಾಗೊಂದು ಮೇಲೆ ಕೊಡಲಾಗಿರುವ ಎಲ್ಲ ಸ್ಕೂಟರ್ ಗಳು ಚಿಕ್ಕದೆಂದು ಅನಿಸಿದ್ದಲ್ಲಿ ನೀವು ನೇರಾವಿಗ ಹೋಂಡಾ ಎವಿಯೇಟರ್‌ನತ್ತ ಕಣ್ಣಾಯಿಸಬಹುದಾಗಿದೆ. ಏಕೆಂದರೆ ಹೋಂಡಾ ಎವಿಯೇಟರ್ ಅತಿ ಹೆಚ್ಚು ಅಂದರೆ 790 ಎಂಎಂ ಸೀಟು ಎತ್ತರವನ್ನು ಪಡೆದಿದೆ. ಇದಕ್ಕೂ ಮಿಗಿಲಾಗಿ ಎವಿಯೇಟರ್ ಟಾಪ್ ಎಂಡ್ ಡಿಎಲ್ ಎಕ್ಸ್ ವೆರಿಯಂಟ್ ನಲ್ಲಿ ಫ್ರಂಟ್ ಡಿಸ್ಕ್ ಬ್ರೇಕ್ ಮತ್ತು ಕಾಂಬಿ ಬ್ರೇಕ್ ಸಿಸ್ಟಂ ವ್ಯವಸ್ಥೆಯೂ ಇರುತ್ತದೆ.

ಹೋಂಡಾ ಎವಿಯೇಟರ್

ಹೋಂಡಾ ಎವಿಯೇಟರ್

109 ಸಿಸಿ ಎಂಜಿನ್

8 ಅಶ್ವಶಕ್ತಿ, 8.7 ಎನ್ ಎಂ ತಿರುಗುಬಲ,

ಮೈಲೇಜ್: 66 ಕೀ.ಮೀ.

ಸೀಟು ಎತ್ತರ: 790 ಎಂಎಂ

ಬೆಂಗಳೂರು ಆನ್ ರೋಡ್ ಬೆಲೆ

ಎವಿಯೇಟರ್ ಡಿಸ್ಕ್: 68,579 ರು.

ಎವಿಯೇಟರ್ ಡ್ರಮ್: 62,353 ರು.

More from DriveSpark

Article Published On: Monday, March 28, 2016, 14:11 [IST]
English summary
Best Scooters For Tall Riders (Ladies/ Men) In India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+