ಬೆನೆಲ್ಲಿ ಟಿಆನ್‌ಟಿ899 - ಕನಸಿನ ಬೈಕ್ ನೈಜತೆಯ ಸ್ಪರ್ಶ ಪಡೆದಾಗ!
ದಶಕದ ಇತಿಹಾಸವಿರುವ ಬೆನೆಲ್ಲಿ ಹೈ ಎಂಡ್ ಬೈಕ್‌ಗಳನ್ನು ದೇಶಕ್ಕೆ ತಲುಪಿಸುವ ಕೆಲಸವನ್ನು ಡಿಎಸ್‌ಕೆ ಮಾಡುತ್ತಿದೆ. ಇದರಂತೆ ಹೊಸ ಹೊಸ ಮಾದರಿಗಳನ್ನು ಭಾರತ ಮಾರುಕಟ್ಟೆಗೆ ಬಿಡುಗಡೆ ಮಾಡುವುದರಲ್ಲಿ ಬದ್ಧವಾಗಿರುವ ಡಿಎಸ್‌ಕೆ ಬೆನೆಲ್ಲಿ ಮಗಗೊಂದು ಆಕರ್ಷಕ ಟಿಆನ್‌ಟಿ 899 ಮೋಟಾರುಸೈಕಲನ್ನು ಸಜ್ಜುಗೊಳಿಸುತ್ತಿದೆ.
ಇವನ್ನೂ ಓದಿ: ಬೆನೆಲ್ಲಿ ಬಿಎನ್600ಐ; ಇಟಲಿಯ ಪವರ್ ಭಾರತಕ್ಕೆ
ಇಟಲಿಯ ಐಕಾನಿಕ್ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿರುವ ಬೆನೆಲ್ಲಿ ಭಾರತದಲ್ಲಿ ಹಂತ ಹಂತವಾಗಿ 300ಸಿಸಿಯಿಂದ ಆರಂಭವಾಗಿ 1190ಸಿಸಿ ಬೈಕ್‌ಗಳನ್ನು ಪರಿಚಯಿಸುವ ಯೋಜನೆ ಹೊಂದಿದೆ. ಈಗ 2015ರ ಹೊಸ ಸಾಲಿನಲ್ಲಿ ಟಿಎನ್‌ಟಿ899 ಪರಿಚಯಿಸಲಿದ್ದು, ಪ್ರೀಮಿಯಂ ಬೈಕ್ ಮಾರುಕಟ್ಟೆಯಲ್ಲಿ ಹೆಚ್ಚಿನ ನಿರೀಕ್ಷೆಗೆ ಕಾರಣವಾಗಿದೆ.

ಕೆಲವು ತಿಂಗಳುಗಳ ಹಿಂದೆಯಷ್ಟೇ ನಾವು ಬೆನೆಲ್ಲಿಯ ಜನಪ್ರಿಯ ಮಾದರಿಯಾಗಿರುವ ಬಿಎನ್600ಐ ಚಾಲನಾ ಅನುಭವವವನ್ನು ಪ್ರಕಟಿಸಿದ್ದೆವು. ಈಗ ಟಿಎನ್‌ಟಿ899 ಪರೀಕ್ಷೆ ನಡೆಸುವ ಅವಕಾಶ ನಮಗೆ ದೊರಕಿದ್ದು, ನಮ್ಮ ಎಕ್ಸ್ ಕ್ಲೂಸಿವ್ ಚಾಲನಾ ಅನುಭವವನ್ನು ನಾವಿಲ್ಲಿ ನಿಮ್ಮ ಜೊತೆಗೆ ಹಂಚಿಕೊಳ್ಳಲು ಇಚ್ಛಿಸಲಿದ್ದೇವೆ. ಪ್ರತಿಯೊಬ್ಬ ಬೈಕ್ ಪ್ರೇಮಿಯೂ ಬಹಳ ಕುತೂಹಲದಿಂದ ಈ ಬಗ್ಗೆ ನಮ್ಮ ಜೊತೆ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಭರವಸೆ ನಮ್ಮದ್ದು.

ಕಿರು ಪರಿಚಯ
ಪರೀಕ್ಷಾರ್ಥ ಮಾದರಿ: 2014 ಡಿಎಸ್‌ಕೆ ಬೆನೆಲ್ಲಿ ಟಿಎನ್‌ಟಿ899
ಎಂಜಿನ್: ಇನ್-ಲೈನ್ ತ್ರಿ, 899 ಸಿಸಿ
ಗೇರ್ ಬಾಕ್ಸ್: 6 ಸ್ಪೀಡ್
ಟೆಸ್ಟಿಂಗ್ ಪ್ರದೇಶ: ಪುಣೆ
ಬೆಲೆ: ತಿಳಿದು ಬಂದಿಲ್ಲ

ವಿನ್ಯಾಸ
ಬೆನೆಲ್ಲಿ ಟಿಎನ್‌ಟಿ899 ಆಕ್ರಮಣಕಾರಿ ವಿನ್ಯಾಸವನ್ನು ಹೊಂದಿದೆ. ಇದರ ಮಸಲರ್ ಫ್ರಂಟ್ ಲುಕ್ ಆಕರ್ಷಣೀಯವಾಗಿದೆ. ಅಲ್ಲದೆ ರೊಬೊಟ್‌ಗಳಿಂದ ಸ್ಪೂರ್ತಿ ಪಡೆದಂತಹ ಹೆಡ್ ಲೈಟ್ ಪಡೆದುಕೊಂಡಿದೆ. ಒಟ್ಟಿನಲ್ಲಿ ತನ್ನದೇ ಆದ ವಿಶಿಷ್ಟ ಕಾಪಾಡಿಕೊಳ್ಳಲು ಬೆನೆಲ್ಲಿ ಯಶಸ್ವಿಯಾಗಿದೆ.

ವಿನ್ಯಾಸ
ಬೆನೆಲ್ಲಿ ಐಕಾನಿಕ್ ಬೈಕ್ ಭಾರತೀಯ ಗ್ರಾಹಕರಿಗೆ ಹೊಸ ಅನುಭವ ನೀಡಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಬೈಕ್‌ಗೆ ಪ್ರೀಮಿಯಂ ಸ್ಪರ್ಶ ನೀಡುವ ಎಲ್ಲ ಕೆಲಸವನ್ನು ಸಂಸ್ಥೆಯು ಅಚ್ಚುಕಟ್ಟಾಗಿ ಮಾಡಿದೆ. ಬದಿಯಲ್ಲಿ ರೇಡಿಯೇಟರ್ ಹಾಗೂ ಕೂಲಿಂಗ್ ಫ್ಯಾನ್ ಲಗತ್ತಿಸಿರುವುದು ನಮ್ಮ ಮೆಚ್ಚುಗೆಗೆ ಪಾತ್ರವಾಗಿದೆ.

ವಿನ್ಯಾಸ
ಹಿಂದುಗಡೆ ದೊಡ್ಡದಾದ ಚಕ್ರ ನೀಡಲಾಗಿದ್ದು, ಹೆಚ್ಚು ಶಕ್ತಿಶಾಲಿ ಎನಿಸಿಕೊಂಡಿದೆ. ಹಾಗೆಯೇ ಸೀಟು ಕೆಳಗಡೆ ಒಂದರ ಒಳಗೆ ಮೂರು ಎಕ್ಸಾಸ್ಟ್ ವ್ಯವಸ್ಥೆಯನ್ನು ಕೊಡಲಾಗಿದೆ. ಇಲ್ಲಿ ಬ್ರೇಕ್ ಇಂಡಿಕೇಟರ್ ಅನ್ನು ವಿಭಜಿಸಿರುವ ಪರಿ ಮೆಚ್ಚುಗೆಗೆ ಪಾತ್ರವಾಗಿದೆ.

ಎಂಜಿನ್
ಹೊಸ ಬೆನೆಲ್ಲಿ ಟಿಎನ್‌ಟಿ899 ಇನ್ ಲೈನ್ ತ್ರಿ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದ್ದು, 121 ಅಶ್ವಶಕ್ತಿ (88 ತಿರುಗುಬಲ) ಉತ್ಪಾದಿಸುತ್ತದೆ. ಅಂತೆಯೇ ಇಂಜೆಕ್ಷನ್ ತಂತ್ರಜ್ಞಾನದಲ್ಲಿ ಇಂಧನ ವಿತರಣೆಯಾಗುತ್ತಿದ್ದು ಆರು ಸ್ಪೀಡ್ ಗೇರ್ ಬಾಕ್ಸ್ ಸಹ ಪಡೆದುಕೊಂಡಿದೆ.

ಚಾಲನಾ ಅನುಭವ
ಬೆನೆಲ್ಲಿ ಟಿಎನ್‌ಟಿ899 ಭಾರವಾದ ಬೈಕ್‌ಗಳಲ್ಲಿ ಒಂದಾಗಿದ್ದು, ಸಣ್ಣ ಕಾಯದವರಿಗೆ ತಿರುವುಗಳಲ್ಲಿ ಸ್ವಲ್ಪ ಕಷ್ಟಕರವೆನಿಸಬಹುದು. ಇನ್ನು ಗರಿಷ್ಠ ಚಾಲನಾ ಅನುಭವದ ಬಗ್ಗೆ ಎರಡು ಮಾತಿಲ್ಲ. ಅಲ್ಲದೆ ಅತ್ಯುತ್ತಮ ಗ್ರಿಪ್ ಪ್ರದಾನ ಮಾಡುತ್ತಿದೆ.

ಚಾಲನಾ ಅನುಭವ
ಬೆನೆಲ್ಲಿ ಟಿಎನ್‌ಟಿ899 ರುಯಿಂ ರುಯಿಂ ಶಬ್ದವನ್ನುಂಟು ಮಾಡುತ್ತಿದ್ದು, ಯುವ ಗ್ರಾಹಕರನ್ನು ಬೇಗನೇ ಸೆಳೆಯಲಿದೆ. ಆದರೆ ಇದು ಕಿರಿಕಿರಿಯಾಗದಂತೆ ನೋಡಿಕೊಳ್ಳಬೇಕಾಗುತ್ತದೆ.

ಚಾಲನಾ ಅನುಭವ
ರೈಡಿಂಗ್ ಸ್ಥಾನ ಅತ್ಯುತ್ತಮವಾಗಿದ್ದು, ಸ್ಟ್ರೀಟ್ ಫೈಟರ್ ಅನುಭವ ನೀಡುತ್ತದೆ. ಬೆನೆಲ್ಲಿ ಟಿಎನ್‌ಟಿ899 ಪ್ರತಿ ಹಂತದಲ್ಲೂ ನಮ್ಮ ನಿಯಂತ್ರಿದಲ್ಲಿರುವಂತೆಯೇ ಭಾಸವಾಗುತ್ತದೆ.

ಇನ್ಸ್ಟ್ರುಮೆಂಟ್ ಕನ್ಸಾಲ್
ಪ್ರತಿಯೊಂದು ಬೈಕ್‌ನಲ್ಲೂ ಇನ್ಸ್ರುಮೆಂಟ್ ಕ್ಲಸ್ಟರ್ ಪ್ರಮುಖ ಪಾತ್ರ ವಹಿಸುತ್ತದೆ. ಯಾಕೆಂದರೆ ಇದು ಚಾಲಕರಿಗೆ ಅಗತ್ಯ ಮಾಹಿತಿಗಳನ್ನು ರವಾನಿಸುತ್ತದೆ. ಅಂತೆಯೇ ಬೆನೆಲ್ಲಿ ಟಿಎನ್ಟಿ899 ಮಾದರಿಯಲ್ಲಿರುವ ಇನ್ಸ್ಟ್ರುಮೆಂಟ್ ಕನ್ಸಾಲ್ ಸರಳ ಹಾಗೂ ಶುಭ್ರವಾಗಿದೆ. ಹೆಚ್ಚಿನ ವೇಗದಲ್ಲಿ ಸಾಗುವಾಗಲೂ ಇದನ್ನು ರೀಡ್ ಮಾಡುವುದು ಬಹಳ ಸುಲಭವಾಗಿದೆ.

ಸ್ವಿಚ್
ಇನ್ನು ಬೈಕ್‌ಗಳ ಸ್ವಿಚ್‌ಗಳನ್ನು ಸೂಕ್ತವಾದ ಜಾಗದಲ್ಲಿ ಲಗತ್ತಿಸಲಾಗಿದ್ದು, ನಿರ್ವಹಣೆ ಬಹಳ ಸುಲಭವಾಗಿದೆ. ಹಾಗಿದ್ದರೂ ಸ್ವಿಚ್‌ಗಳು ಸ್ವಲ್ಪ ಗಟ್ಟಿಯಾಗಿರುವಂತೆ ಭಾಸುವಾಗುತ್ತದೆ. ಕ್ರಮೇಣ ಇದರ ಬಳಕೆ ಸರಿಹೋಗಲಿದೆ. ಅಂತೆಯೇ ಹ್ಯಾಂಡಲ್ ಬ್ಯಾರ್‌ನಲ್ಲಿರುವ ರಬ್ಬರ್ ಕೂಡಾ ನಯವಾಗಿದೆ.

ಪ್ಲಸ್ ಪಾಯಿಂಟ್ - ಸ್ಟೈಲಿಷ್ ಲುಕ್
ಮೊದಲ ನೋಟದಲ್ಲೇ ಕಣ್ಮಣ ಸೆಳೆಯುವ ಸ್ಟೈಲಿಷ್ ಲುಕ್ ಅನ್ನು ಬೆನೆಲ್ಲಿ ಹೊಂದಿದೆ. ಇದು ಎಲ್ಲೇ ಸಾಗಿದರೂ ಇಟಲಿಯ ಸಂಸ್ಕೃತಿಯನ್ನು ಎತಿ ಹಿಡಿಯಲಿದೆ ಎಂಬುದು ಸ್ಪಷ್ಟ.

ಪ್ಲಸ್ ಪಾಯಿಂಟ್ - ಬ್ರೇಕ್
ಬೆನೆಲ್ಲಿಯ ಬ್ರೆಂಬೊ ಫ್ರಂಟ್ ಬ್ರೇಕ್‌ಗಳು ಅತ್ಯಾದ್ಭುತವಾಗಿದೆ. ತುರಂತ್ ಆಗಿ ಬ್ರೇಕ್ ಅದುಮಿದರೂ ಬೆನೆಲ್ಲಿ ಉತ್ತಮ ಗ್ರಿಪ್ ಪ್ರದಾನ ಮಾಡಲಿದೆ.

ಪ್ಲಸ್ ಪಾಯಿಂಟ್ - ಸೈಡ್ ಪ್ಯಾನೆಲ್
ಜಪಾನ್ ಪ್ರತಿಸ್ಪರ್ಧಿಗಳಿಗೆ ಹೋಲಿಸಿದಾಗ ಬೆನೆಲ್ಲಿ ಟಿಎನ್‌ಟಿ899, ಹೊರಗಡೆ ಗಮನಸೆಳೆಯುವ ಸೈಡ್ ಪ್ಯಾನೆಲ್ ಹೊಂದಿರುವುದು ಮುನ್ನಡೆಗೆ ಕಾರಣವಾಗಿದೆ.

ಮೈನಸ್ ಪಾಯಿಂಟ್ - ರಿಯರ್ ಬ್ರೇಕ್
ಬೆನೆಲ್ಲಿಯು ಹಿಂದುಗಡೆ ಬ್ರೇಕ್‌ಗಾಗಿ ರೊಟರ್ ಪೆಡಲ್ ನೀಡಿದ್ದು, ಕೆಲವು ಬಾರಿ ಇದು ಆತ್ಮವಿಶ್ವಾಸದ ಕೊರತೆಯನ್ನುಂಟು ಮಾಡುತ್ತದೆ. ನಮ್ಮ ದೇಶದ ಟ್ರಾಫಿಕ್ ಗಮನಿಸಿದಾಗ 600ಸಿಸಿಗಿಂತಲೂ ಮೇಲ್ಪಟ್ಟ ಎಲ್ಲ ಬೈಕ್‌ಗಳಲ್ಲೂ ಎಬಿಎಸ್ ಕಡ್ಡಾಯವಾಗಿ ಆಳವಡಿಸಬೇಕಾಗುತ್ತದೆ.

ಮೈನಸ್ ಪಾಯಿಂಟ್ - ಸಿಂಗಲ್ ಎಕ್ಸಾಸ್ಟ್
ದೂರದಿಂದ ನೋಡುವಾಗ ಸಿಂಗಲ್ ಎಕ್ಸಾಸ್ಟ್ ವ್ಯವಸ್ಥೆಯು ಉತ್ತಮವಾಗಿ ಗೋಚರಿಸಬಹುದು. ಆದರೆ ಸಹ ಸವಾರನಗಿದು ಅನನುಕೂಲವನ್ನುಂಟು ಮಾಡಲಿದೆ. ಇದನ್ನು ಸೀಟು ಕೆಳಗಡೆ ಲಗತ್ತಿಸಲಾಗಿರುವುದರಿಂದ ಬೇಗನೇ ಉಷ್ಣತೆ ಸೃಷ್ಟಿಯಾಗುವ ಸಾಧ್ಯೆತೆಯಿದ್ದು, ದೂರ ಪ್ರಯಾಣ ವೇಳೆ ಸಮಸ್ಯೆಗೆ ಕಾರಣವಾಗಲಿದೆ. ಇನ್ನು ಸೀಟು ಕೆಳಗಡೆ ಅಗತ್ಯ ಪ್ರಯಾಣ ಪತ್ರಗಳ ಹೊರತಾಗಿ ಇನ್ನೇನು ಶೇಖರಣೆ ಮಾಡುವಂತಿಲ್ಲ.

ಮೈನಸ್ ಪಾಯಿಂಟ್ - ಮಿರರ್
ತ್ರಿಕೋಣಕಾರದಲ್ಲಿರುವ ಬೆನೆಲ್ಲಿ ಟಿಎನ್‌ಟಿ899 ಮುಂಭಾಗದ ಕನ್ನಡಿ ಆಕರ್ಷಕವೆನಿಸಿದರೂ ಚಿಕ್ಕದಾಗಿದ್ದು ದೈನಂದಿನ ಪಯಣದ ವೇಳೆ ಗೋಚರತೆಯ ಸಮಸ್ಯೆ ಸೃಷ್ಟಿ ಮಾಡಲಿದೆ. ಹಾಗಿದ್ದರೂ ಇದನ್ನು ಚಾಲಕರ ಅಗತ್ಯಕ್ಕೆ ಅನುಗುಣವಾಗಿ ಹೊಂದಿಸಬಹುದಾಗಿದೆ.

ಹಿನ್ನಡೆ
- ಭಾರತಕ್ಕೆ ಪರಿಚಿತವಲ್ಲದ ಬ್ರಾಂಡ್,
- ಬೆಲೆ ತಿಳಿದು ಬಂದಿಲ್ಲ,
- ಮೆಕ್ಯಾನಿಕಲ್ ಸೌಡಿಂಗ್ ಎಂಜಿನ್,
- ಇಟಲಿಯ ಐಕಾನಿಕ್ ವಿನ್ಯಾಸ ತಂತ್ರಗಾರಿಕೆ,
- ಭಾರತದಲ್ಲೇ ಸ್ಥಳೀಯವಾಗಿ ಜೋಡಣೆ,
- ಬ್ರೆಂಬೊ ಬ್ರೇಕಿಂಗ್ ಸಿಸ್ಟಂ,
- ಸಂಪೂರ್ಣವಾಗಿ ಹೊಂದಾಣಿಸಬಹುದಾದ ಸಸ್ಪೆಷನ್ ಸಿಸ್ಟಂ

ಮುನ್ನಡೆ

ಟಿಎನ್ಟಿ899 ಸ್ಪರ್ಧಿಗಳು
ವಿಶೇಷವೆಂದರೆ ಮಾರುಕಟ್ಟೆಯಲ್ಲಿ ಟಿಎನ್‌ಟಿ899 ಮಾದರಿಗೆ ಯಾವುದೇ ನೇರ ಪ್ರತಿಸ್ಪರ್ಧಿಗಳಿಲ್ಲ. ಇದು ದೇಶದಲ್ಲಿರುವ ಕೆಲವೇ ಕೆಲವು ಇನ್ ಲೈನ್ ತ್ರಿ ಸಿಲಿಂಡರ್ ಎಂಜಿನ್ ಹೊಂದಿರುವ ಮೋಟಾರುಸೈಕಲ್‌ಗಳಲ್ಲಿ ಒಂದಾಗಿದೆ. ಇದಕ್ಕೆ ಸಮಾನವಾದ ತ್ರಿ ಸಿಲಿಂಡರ್ ಎಂಜಿನ್ ಅನ್ನು ಸ್ಟ್ರೀಟ್ ಟ್ರಿಪಲ್ ಹಾಗೂ ಸ್ಪೀಡ್ ಟ್ರಿಪಲ್ ರೂಪದಲ್ಲಿ ಟ್ರಯಂಪ್ ನೀಡುತ್ತದೆ.

ಬೆನೆಲ್ಲಿ ಬಗ್ಗೆ ಒಂದಿಷ್ಟು
ನಿಮ್ಮ ಮಾಹಿತಿಗಾಗಿ, 1911ನೇ ಇಸವಿಯಲ್ಲಿ ಅಸ್ಥಿತ್ವಕ್ಕೆ ಬಂದಿರುವ ಬೆನೆಲ್ಲಿ ಇಟಲಿಯ ಅತ್ಯಂತ ಪುರಾತನ ದ್ವಿಚಕ್ರ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದಾಗಿದೆ. 'ಬೆನೆಲ್ಲಿ ಗ್ಯಾರೇಜ್'ನಲ್ಲಿ ತಮ್ಮ ಪಯಣ ಆರಂಭಿಸಿದ್ದ ಆರು ಮಂದಿ ಸೋದರರು (Giuseppe, Giovanni, Francesco, Filippo, Domenico and Antonio (ಟೊನಿನೊ ಎಂದೇ ಕರೆಯಲ್ಪಡುವ) )ಒಟ್ಟಾಗಿ ಬಹಳ ಉತ್ಸಾಹದಿಂದ ಬೈಕ್ ರಿಪೇರಿ ಕೆಲಸವನ್ನು ಆರಂಭಿಸಿದ್ದರು.
ಬಳಿಕ 1921ರಲ್ಲಿ ಸೈಕಲ್ ಫ್ರೇಮ್‌ನಲ್ಲಿ 'ವೆಲೊಮೊಟೊರ್' ಸಿಂಗಲ್ ಸಿಲಿಂಡರ್ ಟು ಸ್ಟ್ರೋಕ್ 75 ಸಿಸಿ ಹಾಗೂ ಮುಂದಿನ ವರ್ಷ 98 ಸಿಸಿ ಮೊಟೊಲೆಗ್ಗೆರಾ ಮಾದರಿಗಳಿಗೆ ವ್ಯಾಪಕ ಪ್ರತಿಕ್ರಿಯೆ ಲಭಿಸಿತ್ತು. ತದಾ ನಂತರ ಇಟಲಿ ಹಾಗೂ ಯುರೋಪ್ ಚಾಂಪಿಯನ್‌ಶಿಪ್‌ನಲ್ಲಿ 1000ಕ್ಕೂ ಹೆಚ್ಚು ಚಾಂಪಿಯನ್‌ಶಿಪ್‌ಗಳಲ್ಲಿ ವಿಜಯ ಪತಾಕೆ ಹಾರಿಸಿರುವ ಬೆನೆಲ್ಲಿ 1950 ಹಾಗೂ 1969 ವಿಶ್ವ ಕಿರೀಟವನ್ನು ಗೆದ್ದುಕೊಂಡಿತ್ತು. ಅಲ್ಲದೆ ಅನೇಕ ದಿಗ್ಗಜ ರೇಸರುಗಳನ್ನು ಹುಟ್ಟುಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

ಬೆನೆಲ್ಲಿ ಬಗ್ಗೆ ಒಂದಿಷ್ಟು...
ಭಾರತದಲ್ಲಿ ಬೃಹತ್ ಯೋಜನೆ ಹೊಂದಿರುವ ಸಂಸ್ಥೆಯು ಟೊರ್ನಡೊ ನೇಕ್ಡ್ ಟ್ರಿ, ಟಿಎನ್‌ಟಿ ಸೂಪರ್ ಬೈಕ್, ಇನ್ ಲೈನ್, ಟು ಸಿಲಿಂಡರ್ ಟಿಎನ್‌ಟಿ 302, ಇನ್ ಲೈನ್ ಫೋರ್ ಸಿಲಿಂಡರ್ 600 ಸಿಸಿ ಟಿಎನ್‌ಟಿ ಐ, ಟಿಎನ್‌ಟಿ 600 ಜಿಟಿ, 898 ಸಿಸಿ, ಇನ್ ಲೈನ್, ತ್ರಿ ಸಿಲಿಂಡರ್ ಟಿಎನ್‌ಟಿ899 ಮತ್ತು 1131 ಸಿಸಿ ಜೊತೆ ಜೊತೆಗೆ ತ್ರಿ ಸಿಲಿಂಡರ್ ಎಂಜಿನ್ ನಿಯಂತ್ರಿತ ಟಿಎನ್‌ಟಿ1130ಆರ್ ಮತ್ತು 155 ಅಶ್ವಶಕ್ತಿಗಿಂತಲೂ ಮೇಲ್ಪಟ್ಟ ಮಾದರಿಗಳನ್ನು ಅನಾವರಣಗೊಳಿಸಿದೆ.
ಇಟಲಿ, ಜರ್ಮನಿ, ಫ್ರಾನ್ಸ್, ಚೀನಾ, ಬ್ರಿಟನ್, ಅಮೆರಿಕ, ಆಸ್ಟ್ರೇಲಿಯಾ ಹಾಗೂ ಸ್ಪೇನ್ ಸೇರಿದಂತೆ 30ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ತನ್ನ ಸಾನಿಧ್ಯ ಹೊಂದಿರುವ ಬೆನ್ನೆಲ್ಲಿ ಜಗತ್ತಿನ ಎರಡನೇ ಗರಿಷ್ಠ ನಿರ್ವಹಣೆಯ ಸೂಪರ್ ಬೈಕ್ ಸಂಸ್ಥೆಯಾಗಿದೆ.


Click it and Unblock the Notifications








