ಪೆಟ್ರೋಲ್ ಬೈಕಿಗೆ ಗುಡ್ ಬೈ, ಐಬೈಕಿಗೆ ಹಾಯ್

IBike Electric Scooters – Cheap, Effective & Efficient
ಬೆ೦ಗಳೂರು, ಮೈಸೂರು, ಮಂಗಳೂರು, ಧಾರವಾಡ, ಹುಬ್ಬಳ್ಳಿ, ಗದಗ, ಬೆಳಗಾವಿ, ಬೀದರ್, ರಾಯಚೂರು, ಉಡುಪಿ, ಹಾಸನ, ಮ೦ಡ್ಯ, ಚಾಮರಾಜನಗರ, ಶಿವಮೊಗ್ಗ, ಚಿಕ್ಕಮಗಳೂರು, ಬಳ್ಳಾರಿ, ತುಮಕೂರು, ಕೋಲಾರ, ಚಿತ್ರದುರ್ಗ ಅಥವಾ ಕರ್ನಾಟಕದ ಯಾವುದಾದರೊಂದು ನಗರ, ಪಟ್ಟಣದಲ್ಲಿ ನೀವು ವಾಸಿಸುತ್ತಿರಬಹುದು.

ಮನೆಯ ಹತ್ತಿರದ ಅಥವಾ ಹತ್ತಿಪ್ಪತ್ತು ಕಿ.ಮೀ. ದೂರದ ಕಾಲೇಜಿಗೆ, ಕಚೇರಿಗೆ ನಿತ್ಯ ಪ್ರಯಾಣಿಸುವರು ನೀವಾಗಿರಬಹುದು. ನಿಮ್ಮಲ್ಲಿ ಒಂದು ಬೈಕ್ ಅಥವಾ ಸ್ಕೂಟರ್ ಇರಬಹುದು. ಅದರ ಹೊಟ್ಟೆಗೆ ದಿನನಿತ್ಯ ಪೆಟ್ರೋಲ್ ತುಂಬಿಸಿ ನಿಮ್ಮ ಹೊಟ್ಟೆ ಅಥವಾ ಕಿಸೆ ಬಡವಾಗಿರಬಹುದು.

ಹೆಚ್ಚು ಖರ್ಚೇ ಇಲ್ಲದ, ದಿನನಿತ್ಯ ಹತ್ತಿರದ ಪ್ರಯಾಣಕ್ಕೆ ಅಗ್ಗದ ಆದರೆ ಹೆಚ್ಚು ದಕ್ಷತೆಯ ವಾಹನ ಹುಡುಕುವರಿಗೆ "ಐಬೈಕ್" ಸೂಕ್ತ ಎಂದು ನಮ್ಮ ಅಭಿಪ್ರಾಯ. ಬೆಂಗಳೂರಿನ ಬ್ಯಾಟರಿ ಕಂಪನಿ ಹೈಪವರ್ ಹೊರತಂದ ಐಬೈಕ್ ಗೋ ಪ್ಲಸ್ ಒಮ್ಮೆ ರೈಡ್ ಮಾಡಿ ನೋಡಿದರೆ ನಿಮಗೆ ಇಷ್ಟವಾಗಬಹುದು. ನಮಗ್ಯಾಕೆ ಇಷ್ಟವಾಯಿತು ಎಂದರೆ?

ಇದರ ಗುಣಗಾನ ದರದಿಂದಲೇ ಆರಂಭಿಸಬಹುದು. ಇತರ ಬೈಕ್, ಸ್ಕೂಟರ್ ದರಕ್ಕೆ ಹೋಲಿಸಿದರೆ ಇದು ತುಂಬಾ ಅಗ್ಗ. ಇದರ ದರ ಸುಮಾರು 32,500 ರುಪಾಯಿ ಅಷ್ಟೇ. ಈ ಎಲೆಕ್ಟ್ರಿಕ್ ಬೈಕ್ ನೋಡಲು ಇತರ ಸ್ಕೂಟಿಗಳಂತೆ ಇದೆ. ಆದರೆ ಅವುಗಳಿಗೆ ಹೋಲಿಸಿದರೆ ಇದರ ರೈಡಿಂಗ್ ತೀರಾ ಭಿನ್ನ ಮತ್ತು ಆರಾಮದಾಯಕ.

ಇದರ ಮೋಟರ್ ಇತರ ಸ್ಕೂಟಿಗಳಂತೆ ಹೆಚ್ಚು ಸದ್ದು ಮಾಡುವುದಿಲ್ಲ. ಕೀಲಿಕೈ ಹಾಕಿದಾಗ ಇದು ಸ್ಟಾರ್ಟ್/ಸ್ಟಾಪ್ ಆದದ್ದೇ ಗೊತ್ತಾಗುವುದಿಲ್ಲ. ಆಕ್ಸಿಲರೇಟರ್ ಕೊಟ್ಟಾಗ ಮಾತ್ರ ಇದಕ್ಕೆ ಜೀವ ಇದೆಯೆಂದು ಗೊತ್ತಾಗುತ್ತದೆ.

ಸ್ವಲ್ಪ ಆಕ್ಸಿಲರೇಟರ್ ಕೊಟ್ಟಾಗ ಐಬೈಕಿಗೆ ಜೀವ ಬರುತ್ತದೆ. ಸ್ಕೂಟರ್ ಪ್ರಯಾಣ ಆರಂಭಿಸುವಾಗಲೇ ಅದರ ಪವರ್ ಅನುಭವವಾಗುತ್ತದೆ. ಆರಂಭದಿಂದಲೇ ಇದರ ಎಂಜಿನ್ ಪೂರ್ಣ ಟಾರ್ಕ್ ಪವರ್ ನೀಡುತ್ತದೆ. ಹಾಗಂತ ಈ ಐಬೈಕಿನಲ್ಲಿ ಅತ್ಯಧಿಕ ವೇಗದಲ್ಲಿ ಸಾಗಬಹುದೆಂದು ತಿಳಿಯಬೇಡಿ. ಇದರ ಗರಿಷ್ಠ ವೇಗ ಪ್ರತಿಗಂಟೆಗೆ 40 ಕಿ.ಮೀ. ಅಷ್ಟೇ!

ಇಷ್ಟೇನಾ ಇದರ ಗರಿಷ್ಠ ವೇಗವೆಂದು ಭಾವಿಸಬೇಡಿ. ಸಿಟಿ ರಸ್ತೆಯಲ್ಲಿ ಹತ್ತಿರದ ಪ್ರಯಾಣಕ್ಕೆ ಇದಕ್ಕಿಂತ ಹೆಚ್ಚಿನ ವೇಗದ ಅಗತ್ಯವೂ ಇರುವುದಿಲ್ಲ. ಇದರ ಗರಿಷ್ಠ ವೇಗ ಕಡಿಮೆ ಇರುವುದರಿಂದ ಸ್ಕೂಟರ್ ಮತ್ತು ಬ್ಯಾಟರಿ ಬಾಳಿಕೆಯೂ ಹೆಚ್ಚು.

ಇದರ ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್ ಆಗಲು 6 ಗಂಟೆ ಬೇಕು. ಒಮ್ಮೆ ಫುಲ್ ಚಾರ್ಜ್ ಆದರೆ 60 ಕಿ.ಮೀ. ಪ್ರಯಾಣಿಸಬಹುದು ಎಂದು ಕಂಪನಿ ಹೇಳಿದೆ. ಹೆಚ್ಚು ಹೆಡ್ ಲೈಟ್, ಇಂಡಿಕೇಟರ್ ಮತ್ತು ಹಾರ್ನ್ ಬಳಸಿದರೆ ಬ್ಯಾಟರಿ ಬಾಳಿಕೆ 50 ಕಿ.ಮೀ.ಗೆ ಕೊನೆಗೊಳ್ಳಬಹುದು ಎನ್ನುವುದು ನಮ್ಮ ಅನಿಸಿಕೆ.

ಪೆಟ್ರೋಲ್, ಡೀಸೆಲ್ ಹಂಗಿಲ್ಲ. ರನ್ನಿಂಗ್ ವೆಚ್ಚ ತುಂಬಾ ಕಡಿಮೆ. ಈ ಐಬೈಕಿನ ದರವೇ ಇತರ ಬೈಕ್ ಗಳ ಅರ್ಧದಷ್ಟಿದೆ. ಇದು ಇತರ ಬೈಕಿನಂತೆ ಅಲ್ಲವಾದರೂ ಇದಕ್ಕೂ ರಿಜೆಸ್ಟ್ರೇಷನ್ ಶುಲ್ಕ ಕಟ್ಟಬೇಕು.

50 ಕಿ.ಮೀ. ಪ್ರಯಾಣಕ್ಕೆ ಇದರ ಕರೆಂಟ್ ಚಾರ್ಜಿಂಗ್ ದರ ಸುಮಾರು ಐದು-ಹತ್ತು ರೂಪಾಯಿ. ಪೆಟ್ರೋಲ್ ದರಕ್ಕೆ ಹೋಲಿಸಿದರೆ ಅತ್ಯಧಿಕ ಲಾಭ. ಒಂದು ಲೀಟರ್ ಪೆಟ್ರೋಲ್ ದರಕ್ಕೆ ನೀವು ಐಬೈಕಿನಲ್ಲಿ ಸುಮಾರು 750 ಕಿ.ಮೀ. ದೂರ ಪ್ರಯಾಣಿಸಬಹುದಾಗಿದೆ.

ಈ ಐಬೈಕ್ ಸುಮಾರು 150 ಕೆ.ಜಿ. ಭಾರ ಹೊರುವ ಸಾಮರ್ಥ್ಯ ಹೊಂದಿದೆ. ಇದಕ್ಕೆ ನಮ್ಮ ಮನೆಯಲ್ಲಿರುವ ಮಾಮೂಲು ಕರೆಂಟ್ ಚಾರ್ಜ್ ಪ್ಲಗ್ ಸಾಕು. ಕಂಪನಿಯು ಈ ಬೈಕಿಗೆ ಸುಮಾರು 15 ಸಾವಿರ ಕಿ.ಮೀ. ವಾರೆಂಟಿ ನೀಡಿದೆ. ಬ್ಯಾಟರಿಗೆ ಸುಮಾರು 18 ಸಾವಿರ ಕಿ.ಮೀ. ಪ್ರಯಾಣ ವಾರೆಂಟಿ ನೀಡಿದೆ.

ಪೆಟ್ರೋಲ್ ಬೈಕ್ ಗಳಿಗೆ ಹೋಲಿಸಿದರೆ ಐಬೈಕ್ ನಲ್ಲಿ ಪ್ರಯಾಣಿಸಿದರೆ ನೀವು ವರ್ಷಕ್ಕೆ ಸುಮಾರು 30 ಸಾವಿರ ರುಪಾಯಿ ಉಳಿಸಬಹುದೆಂದು ಕಂಪನಿಯ ಅಭಿಪ್ರಾಯ. ಹೈಪವರ್ ಕಂಪನಿಯನ್ನು ಸಂಪರ್ಕಿಸಿ ಐಬೈಕ್ ರೈಡ್ ಮಾಡಿನೋಡಿ. ನಿಮಗೆ ಇಷ್ಟವಾಗದಿದ್ದರೆ ಹೇಳಿ. ಐಬೈಕ್ ಇಲ್ಲಿ ಸಿಗುತ್ತದೆ.

More from DriveSpark

Article Published On: Monday, December 5, 2011, 15:08 [IST]
English summary
IBike is a Bangalore based electric scooter manufacturer. Its first product the IBike Go is a perfect urban vehicle. It has a range of 60 kilometres and it can run for 750 kilometres at the cost of one litre of petrol. Priced at Rs.32,500 the IBike costs half that of a conventional motorcycle.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+