ಮಹೀಂದ್ರ ಸ್ಕಾರ್ಪಿಯೊ 4 ಲಕ್ಷ ಮೈಲುಗಲ್ಲು; ಕಾರಣ ಬಲ್ಲೀರಾ?

By Nagaraja

ದೇಶದ ಕ್ರೀಡಾ ಬಳಕೆಯ ವಾಹನಗಳ ರಾಜ ಎಂದೇ ಪರಿಗಣಿಸಲ್ಪಟ್ಟಿರುವ ಮಹೀಂದ್ರ ಸ್ಕಾರ್ಪಿಯೊ, ಇತ್ತೀಚೆಗಷ್ಟೇ ನಾಲ್ಕು ಲಕ್ಷ ಸಂತುಷ್ಟ ಗ್ರಾಹಕರನ್ನು ಪಡೆದ ಖ್ಯಾತಿಗೆ ಪಾತ್ರವಾಗಿತ್ತು. ಅಷ್ಟಕ್ಕೂ ಕಳೆದೊಂದು ದಶಕದಲ್ಲಿ ಮಹೀಂದ್ರ ಸಾಧಿಸುತ್ತಿರುವ ಜನಪ್ರಿಯತೆಗೆ ಕಾರಣಗಳನ್ನು ಬಲ್ಲೀರಾ? ಇದನ್ನೇ ಹುಡುಕುವ ಸಾಹಸಕ್ಕೆ ಮುಂದಾಗಿರುವ ನಮ್ಮ ಡ್ರೈವ್ ಸ್ಪಾರ್ಕ್ ತಂಡಕ್ಕೆ ಹಲವಾರು ರೋಚಕ ಮಾಹಿತಿಗಳು ಲಭಿಸಿವೆ.

ಪ್ರಮುಖ ರಾಜಕಾರಣಿಗಳಿಂದ ಹಿಡಿದು ಜನಪ್ರಿಯ ಸಿನೆಮಾ ನಟ ನಟಿಯರು ಸಹ ಸ್ಕಾರ್ಪಿಯೊ ಪಯಣವನ್ನು ಇಷ್ಟಪಡುತ್ತಾರೆ. ಈ ಹಿಂದೆ ಟಾಟಾ ಸಫಾರಿ ನೆಚ್ಚಿಕೊಂಡಿದ್ದವರು ಇದೀಗ ಸ್ಕಾರ್ಪಿಯೊ ಮಹಿಮೆಗೆ ಮಾರು ಹೋಗಿದ್ದಾರೆ. ಈ ಮುಖಾಂತರ 2002ರಲ್ಲಿ ಮೊದಲ ಬಾರಿಗೆ ಪರಿಚಯಗೊಂಡಿದ್ದ ಸ್ಕಾರ್ಪಿಯೊ 10 ವರ್ಷ ದಾಟಿದರೂ ತನ್ನ ಬ್ರಾಂಡ್ ಮೌಲ್ಯ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಹಾಗಿದ್ದರೆ ಬನ್ನಿ ಸ್ಲೈಡರ್ ಮುಖಾಂತರ ಸ್ಕಾರ್ಪಿಯೊ ಯಶಸ್ಸಿನ ಹಿಂದಿರುವ ರಹಸ್ಯವನ್ನು ಅರಿಯೋಣವೇ...

ಇದರಲ್ಲಿ ಧಮ್ ಇದೆ...

ಇದರಲ್ಲಿ ಧಮ್ ಇದೆ...

ಇತರ ಎಸ್‌ಯವಿಗಳನ್ನು ಗಮನಿಸಿದಾಗ ಸ್ಕಾರ್ಪಿಯೊ ತನ್ನದೇ ವಿಶಿಷ್ಟ ವಿನ್ಯಾಸವನ್ನು ಪಡೆದುಕೊಂಡಿದೆ. ಇದು ಮೊದಲ ನೋಟದಲ್ಲೇ ಎಲ್ಲರ ಕಣ್ಮನ ಸಳೆಯುವಂತಹ ಶೈಲಿಯನ್ನು ಪೆಡೆದುಕೊಂಡಿದೆ. ಆಟೋ ವಿಶ್ಲೇಷಕರ ಪ್ರಕಾರ ಕಣ್ಣು ಸೊರೆಗೊಳ್ಳುವಂತಹ ಸ್ಕಾರ್ಪಿಯೊ ವಿನ್ಯಾಸ ಗ್ರಾಹಕರ ಮನ ಗೆಲ್ಲುವಲ್ಲಿ ನೂರಕ್ಕೆ ನೂರರಷ್ಟು ಯಶಸ್ಸನ್ನು ಕಂಡಿದೆ.

ಉತ್ತೇಜಕ ಆವೃತ್ತಿಗಳು

ಉತ್ತೇಜಕ ಆವೃತ್ತಿಗಳು

2002ರಲ್ಲಿ ಲಾಂಚ್ ಆಗಿದ್ದ ಸ್ಕಾರ್ಪಿಯೊ, ನಿಂತರಾಳ ಅಂತರಾಳದಲ್ಲಿ ಫೇಸ್‌ಲಿಫ್ಟ್ ವರ್ಷನ್‌ಗಳನ್ನು ಪರಿಚಯಿಸಿತ್ತು. ಈ ಮೂಲಕ ಮಹೀಂದ್ರ ಸದಾ ಸುದ್ದಿಯಲ್ಲಿರುವ ಪ್ರಯತ್ನ ಮಾಡಿತ್ತು. 2006ರಲ್ಲಿ ಸ್ಕಾರ್ಪಿಯೊ ಫೇಸ್‌ಲಿಫ್ಟ್, 2007 ಪಿಕಪ್ ಟ್ರಕ್, 2008ರಲ್ಲಿ ಆಟೋಮ್ಯಾಟಿಕ್ ಮಾಡೆಲ್ ಸ್ಕಾರ್ಪಿಯೊಗೆ ಉತ್ತೇಜನ ತುಂಬುವಂತಾಗಿತ್ತು.

ಸ್ಕಾರ್ಪಿಯೊ ಎಂಜಿನ್

ಸ್ಕಾರ್ಪಿಯೊ ಎಂಜಿನ್

ಸ್ಕಾರ್ಪಿಯೊದಲ್ಲಿ 120 ಬಿಎಚ್‌ಪಿ ಉತ್ಪಾದಿಸುವ 2.2 ಲೀಟರ್ ಎಂಹಾಕ್ ಡೀಸೆಲ್ ಎಂಜಿನ್ ಆಳವಡಿಸಲಾಗಿದೆ. ಹಾಗೆಯೇ 75 ಬಿಎಚ್‌ಪಿ ಉತ್ಪಾದಿಸುವ 2.2 ಲೀಟರ್ ಹಾಗೂ 115 ಬಿಎಚ್‌ಪಿ ಉತ್ಪಾದಿಸುವ 2.6 ಡೀಸೆಲ್ ಎಂಜಿನ್ ಮಾಡೆಲ್‌ನಲ್ಲೂ ಲಭ್ಯವಿದೆ. ಇದರಲ್ಲಿ 5 ಸ್ಪೀಡ್ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್‌ ಟ್ರಾನ್ಸ್‌ಮಿಷನ್ ಆಳವಡಿಸಿದೆ.

ಮೈಲೇಜ್

ಮೈಲೇಜ್

ಸಾಮಾನ್ಯವಾಗಿ ಎಸ್‌ಯುವಿ ವಾಹನಗಳು ಪವರ್‌ಫುಲ್ ಎನಿಸಿಕೊಂಡರೂ ಉತ್ತಮ ಮೈಲೇಜ್ ನೀಡುವಲ್ಲಿ ವಿಫಲವಾಗುತ್ತದೆ. ಆದರೆ ಇವೆಲ್ಲದರಿಂದ ಹೊರತಾಗಿರುವ ಸ್ಕಾರ್ಪಿಯೊ ಶಕ್ತಿಶಾಲಿ ಎಂಜಿನ್ ಜತೆಗೆ ಉತ್ತಮ ಇಂಧನ ಕ್ಷಮತೆ ಕಾಪಾಡಿಕೊಳ್ಳುವಲ್ಲಿ ಯಶಸ್ಸನ್ನು ಕಂಡಿದೆ. ಮೈಲೇಜ್ ವಿಚಾರದಲ್ಲಿ ಯಾವುದೇ ರಾಜಿಗೆ ತಯಾರಾಗದ ಸ್ಕಾರ್ಪಿಯೊ ಮ್ಯಾನುವಲ್ ಗೇರ್ ಬಾಕ್ಸ್ ಮಾಡೆಲ್ ನಗರದಲ್ಲೇ ಪ್ರದೇಶದಲ್ಲಿ ಪ್ರತಿ ಲೀಟರ್‌ಗೆ 10.5 ಕೀ.ಮೀ. ಹಾಗೂ ಹೆದ್ದಾರಿಯಲ್ಲಿ 15.4 ಕೀ.ಮೀ. ಮೈಲೇಜ್ ನೀಡುತ್ತದೆ. ಅದೇ ರೀತಿ ಸ್ಕಾರ್ಪಿಯೊ ಆಟೋಮ್ಯಾಟಿಕ್ ವರ್ಷನ್ ಪ್ರತಿ ಲೀಟರ್‌ಗೆ ನಗರ ಪ್ರದೇಶದಲ್ಲಿ 9.6 ಕೀ.ಮೀ. ಹಾಗೂ ಹೆದ್ದಾರಿಯಲ್ಲಿ 13 ಕೀ.ಮೀ. ಮೈಲೇಜ್ ನೀಡುತ್ತದೆ.

ಆರಾಮದಾಯಕ ಪಯಣ

ಆರಾಮದಾಯಕ ಪಯಣ

ಇನ್ನು ಸೀಟು ವ್ಯವಸ್ಥೆ ನೋಡುವುದಾದರೆ ಸ್ಕಾರ್ಪಿಯೊ ಮೊದಲ ಸಾಲಿನಲ್ಲಿ ಉತ್ತಮ ಜಾಗವನ್ನು ಹೊಂದಿದೆ. ಆದರೆ ಎರಡನೇ ಸಾಲಿನಲ್ಲಿ ಲೆಗ್ ರೂಂ ಸ್ಪಲ್ವ ಕಡಿಮಯಾಗಿರುವುದು ಸ್ವಲ್ಪ ಹಿನ್ನಡೆಯಾಗಿ ಪರಿಣಮಿಸಿದೆ. ಹಾಗಿದ್ದರೂ ಇವೆಲ್ಲವನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿರುವ ಸ್ಕಾರ್ಪಿಯೊ ಆಕರ್ಷಕ ಒಳಮೈ ವಿನ್ಯಾಸವನ್ನು ಹೊಂದಿದೆ.

ವೆರಿಯಂಟ್ ಆಯ್ಕೆ

ವೆರಿಯಂಟ್ ಆಯ್ಕೆ

ಹಾಗೆಯೇ ಸ್ಕಾರ್ಪಿಯೊ 16 ವೆರಿಯಂಟ್‌ಗಳಲ್ಲಿ ಆಗಮನವಾಗಿರುವುದು ಗ್ರಾಹಕರಿಗೆ ಹೆಚ್ಚಿನ ಆಯ್ಕೆಯನ್ನು ಒದಗಿಸುತ್ತಿದೆ. ಹಾಗೆಯೇ ಇದರ 16 ಇಂಚು ಅಲಾಯ್ ವೀಲ್ ಸಹ ಆಕರ್ಷಣೆಗೆ ಕಾರಣವಾಗಿದೆ.

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

ಕ್ಲೈಮೇಟ್ ಕಂಟ್ರೋಲ್, ಎಸಿ, 2 ಡಿನ್ ಆಡಿಯೋ ಸಿಸ್ಟಂ, ಸನ್ ವೈಸರ್, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ರಿಯರ್ ವ್ಯೂ ಮಿರರ್ ಗಳಂತಹ ಆಕರ್ಷಕ ಫೀಚರುಗಳು ಸಹ ಸ್ಕಾರ್ಪಿಯೊ ಹಿರಿಮೆಯನ್ನು ವೃದ್ಧಿಸುವಲ್ಲಿ ನೆರವಾಗಿದೆ.

ಸುರಕ್ಷತೆ

ಸುರಕ್ಷತೆ

ಹಾಗೆಯೇ ಎಬಿಎಸ್ ಬ್ರೇಕ್, ಡ್ಯುಯಲ್ ಏರ್ ಬ್ಯಾಗ್, ಪವರ್ ಫುಲ್ ಹೆಡ್ ಲೈಟ್‌ಗಳಂತಹ ಸುರಕ್ಷಾ ಮಾನದಂಡಗಳು ಸ್ಕಾರ್ಪಿಯೊ ಪಯಣವನ್ನು ಸುರಕ್ಷಿತಗೊಳಿಸಿದೆ. 2009ನೇ ಇಸವಿಯಲ್ಲಿ ಈ ಎಲ್ಲ ವೈಶಿಷ್ಟ್ಯಗಳನ್ನು ಆಳವಡಿಸಲಾಗಿತ್ತು.

ದಶಕ ಕಳೆದರೂ ಮಿಂಚಿಂಗ್

ದಶಕ ಕಳೆದರೂ ಮಿಂಚಿಂಗ್

ಈ ಮೂಲಕ ಎಲ್ಲ ಹಂತದಲ್ಲಿಯೂ ಒಂದು ದಶಕವನ್ನು ಪೂರ್ಣಗೊಂಡರೂ ದೇಶದ ರಸ್ತೆಗಳಲ್ಲಿ ಸದ್ದು ಮಾಡುತ್ತಿರುವ ಸ್ಕಾರ್ಪಿಯೊ, ತನ್ನ ನಿಕಟ ಸ್ಪರ್ಧಿಗಳಿಗೆ ಕಠಿಣ ಪೈಪೋಟಿ ಎಸಗುತ್ತಿದೆ. ರೆನೊ ಡಸ್ಟರ್ ಹಾಗೂ ಫೋರ್ಡ್ ಇಕೊಸ್ಪೋರ್ಟ್‌ಗಳಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿರುವ ಕಾರುಗಳು ಭಾರತ ರಸ್ತೆ ಪ್ರವೇಶ ಪಡೆದರೂ ಸಹ ಸ್ಕಾರ್ಪಿಯೊ ಮಾತ್ರ ಮಾರುಕಟ್ಟೆಯಲ್ಲಿ ತನ್ನ ಸ್ಥಿರತೆಯ ಪ್ರದರ್ಶನ ನೀಡುವುದರಿಂದ ವಿಚಲಿತವಾಗಿಲ್ಲವೆಂಬುದಂತೂ ಅಷ್ಟೇ ಸತ್ಯ.

2014 ಫೇಸ್‌ಲಿಫ್ಟ್ ಮಾಡೆಲ್

2014 ಫೇಸ್‌ಲಿಫ್ಟ್ ಮಾಡೆಲ್

ಈ ಎಲ್ಲದರ ನಡುವೆ ಸ್ಕಾರ್ಪಿಯೊ ಫೇಸ್‌ಲಿಫ್ಟ್ ವರ್ಷನ್ ಮುಂದಿನ ವರ್ಷ ಆಗಮನವಾಗಲಿದ್ದು, ವಾಹನ ಪ್ರಿಯರಲ್ಲಿ ಇನ್ನಷ್ಟು ಹೆಚ್ಚು ನಿರೀಕ್ಷೆ ಮೂಡಿಸಿದೆ. ಈಗಾಗಲೇ ಟೆಸ್ಟಿಂಗ್ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ 2014 ಸ್ಕಾರ್ಪಿಯೊ ಫೇಸ್‌ಲಿಫ್ಟ್ ವರ್ಷ ಸಂಪೂರ್ಣ ವಿಭಿನ್ನ ವಿನ್ಯಾಸವನ್ನು ಪಡೆದುಕೊಳ್ಳಿದೆ. ಅಂದರೆ ಮುಂಭಾಗ ಹಾಗೂ ಹೆಡ್ ಲೈಟ್ ವಿನ್ಯಾಸದಲ್ಲಿ ಭಾರಿ ಬದಲಾವಣೆ ಕಂಡುಬರಲಿದೆ ಎಂದು ಮೂಲಗಳು ತಿಳಿಸಿವೆ.

Most Read Articles

Kannada
English summary
The iconic and trend-setting Mahindra Scorpio has achieved yet another milestone with sales reaching the 4 lakh mark. Here is facts behind mahindra scorpio's grand success...
Story first published: Tuesday, September 17, 2013, 16:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X