ಮಾರುತಿ ಎರ್ಟಿಗಾ: ಮೈಲೇಜ್, ಪವರ್ ಮತ್ತು ಪಿಕಪ್

ಮೈಲೇಜ್: ಮೈಲೇಜ್ ವಿಷಯದಲ್ಲಿ ಎರ್ಟಿಗಾ ಯಾರಿಗೂ ಬೇಜಾರು ಮಾಡೋದಿಲ್ಲ. ಪೆಟ್ರೋಲ್ ಆವೃತ್ತಿಯ ಮಾರುತಿ ಎರ್ಟಿಗಾ ಪ್ರತಿಲೀಟರಿಗೆ 16.02 ಕಿ.ಮೀ. ಮೈಲೇಜ್ ನೀಡುತ್ತದೆ. ಡೀಸೆಲ್ ಆವೃತ್ತಿಯ ಎರ್ಟಿಗಾ ಕಾರು ಪ್ರತಿಲೀಟರಿಗೆ 20.77 ಕಿ.ಮೀ. ಮೈಲೇಜ್ ನೀಡುತ್ತದೆ. ಇವೆಲ್ಲ ಸರಾಸರಿ ಮೈಲೇಜುಗಳಾಗಿವೆ.
ಪವರ್: ಮಾರುತಿ ಎರ್ಟಿಗಾ ಪೆಟ್ರೋಲ್ ಆವೃತ್ತಿ ಕೆ ಸರಣಿಯ 1.4 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 1322 ಸಿಸಿಯ ಎಂಜಿನಾಗಿದ್ದು 95 ಅಶ್ವಶಕ್ತಿ ಮತ್ತು 130 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ಎರ್ಟಿಗಾ ಡೀಸೆಲ್ ಆವೃತ್ತಿಯು 1.3 ಲೀಟರಿನ 1196ಸಿಸಿ ಡಿಡಿಐಎಸ್ ಸೂಪರ್ ಟರ್ಬೊ ಡೀಸೆಲ್ ಮೋಟರ್ ಎಂಜಿನ್ ಹೊಂದಿದೆ. ಇದು 90 ಅಶ್ವಶಕ್ತಿ ಮತ್ತು 200 ಎನ್ಎಂ ಟಾರ್ಕ್ ಪವರ್ ನೀಡುತ್ತದೆ.
ಆಕ್ಸಿಲರೇಷನ್: ಮಾರುತಿ ಸುಜುಕಿ ಎರ್ಟಿಗಾ 5 ಸ್ಪೀಡ್ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿದೆ. ಪೆಟ್ರೋಲ್ ಆವೃತ್ತಿಯಲ್ಲಿ 15 ಸೆಕೆಂಡಿನಲ್ಲಿ ಮತ್ತು ಡೀಸೆಲ್ ಆವೃತ್ತಿಯಲ್ಲಿ 15.5 ಸೆಕೆಂಡಿನಲ್ಲಿ 0-100 kmph ಪಿಕಪ್ ವೇಗ ಪಡೆದುಕೊಳ್ಳಬಹುದಾಗಿದೆ. ಈ ಕಾರಿನಲ್ಲಿ ಪ್ರತಿಗಂಟೆಗೆ ಗರಿಷ್ಠ 155 ಕಿ.ಮೀ. ವೇಗದಲ್ಲಿ ಸಾಗಲು ಹೆಚ್ಚು ಸಮಯಬೇಕಿಲ್ಲ.
ನಿಮಗೆ ಬೇಕಾದ ಎರ್ಟಿಗಾ ಮಾಡೆಲ್ ಹೆಕ್ಕಿಕೊಳ್ಳಿ! ಮುಂದಿನ ಪುಟ ನೋಡಿರಿ


Click it and Unblock the Notifications








