ಮಾರುತಿ ಎರ್ಟಿಗಾ ಕಾರಿನ ಆರು ಮಾಡೆಲ್ ನೋಡಿರಿ

ಮಾರುತಿ ಸುಜುಕಿ ಎರ್ಟಿಗಾ ಕಾರು ಆರು ಮಾಡೆಲ್ ಆಯ್ಕೆಯಲ್ಲಿ ದೊರಕುತ್ತವೆ. ಅಂದರೆ ಎರ್ಟಿಗಾ ಎಲ್ಎಕ್ಸ್ಐ, ವಿಎಕ್ಸ್ಐ, ಝಡ್ಎಕ್ಸ್ಐ, ಎಲ್ಡಿಐ, ವಿಡಿಐ ಮತ್ತು ಝಡ್ ಡಿಐ ಆವೃತ್ತಿಗಳಲ್ಲಿ ದೊರಕುತ್ತಿದೆ.

ಮಾರುತಿ ಎರ್ಟಿಗಾ ಎಲ್ಎಕ್ಸ್ಐ: ಇದು ಬೇಸ್ ಪೆಟ್ರೋಲ್ ಆವೃತ್ತಿ. ಕೆ ಸೀರಿಸ್ ನ 1.4 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದರ ದರ ಸುಮಾರು 6 ಲಕ್ಷ ರು. ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ. ಇದರಲ್ಲಿ ಪವರ್ ವಿಂಡೋಸ್, ಪವರ್ ಸ್ಟಿಯರಿಂಗ್, ಬಾಡಿ ಕಲರ್ ಬಂಪರ್ಸ್, ಮ್ಯಾನುಯಲ್ ಒವಿಆರ್ ಎಂ, ಮಲ್ಟಿ ಟ್ರಿಪ್ ಮೀಟರ್ಸ್, ಏಸಿ ಮುಂತಾದ ಫೀಚರುಗಳಿವೆ. ಟಾಪ್ ಎಂಡ್ ಕಾರಿಗೆ ಹೋಲಿಸಿದರೆ ಇದರಲ್ಲಿ ಹಲವು ಫೀಚರುಗಳು ಮಿಸ್ ಆಗಿವೆ.

ಮಾರುತಿ ಎರ್ಟಿಗಾ ವಿಎಕ್ಸ್ಐ: ಇದು ನೂತನ ಎಂಪಿವಿಯಲ್ಲಿ ಮಧ್ಯಮ ಶ್ರೇಣಿಯ ಕಾರು. ಇದು ಕೂಡ ಕೆ14 ಪೆಟ್ರೋಲ್ ಎಂಜಿನ್ ಹೊಂದಿದೆ. ಇದರಲ್ಲಿ ಸೆಂಟ್ರಲ್ ಲಾಕಿಂಗ್, ಎಲೆಕ್ಟ್ರಿಕ್ ಒವಿಆರ್ಎಂ(ರಿಯರ್ ವ್ಯೂ ಮಿರರ್), ಕೀಲೆಸ್ ಎಂಟ್ರಿ, ಹೊಂದಾಣಿಕೆ ಮಾಡಿಕೊಳ್ಳಬಹುದಾದ ಹೆಡ್ ರೆಸ್ಟ್ ಮುಂತಾದ ಹಲವು ಫೀಚರುಗಳಿವೆ. ಪೆಟ್ರೋಲ್ ಆವೃತ್ತಿ ಮೈಲೇಜ್ ಲೀಟರಿಗೆ 16.02 ಕಿ.ಮೀ.

ಮಾರುತಿ ಎರ್ಟಿಗಾ ಝಡ್ಎಕ್ಸ್ಐ: ಪೆಟ್ರೋಲ್ ಆವೃತ್ತಿಗಳಲ್ಲಿ ಇದು ಟಾಪ್ ಎಂಡ್ ಆವೃತ್ತಿ. ಇದರಲ್ಲಿ ಎಬಿಎಸ್, ಇಬಿಡಿ, ಆಪ್ಷನಲ್ ಏರ್ ಬ್ಯಾಗ್, ಚರ್ಮದ ಸೀಟು, ಮ್ಯೂಸಿಕ್ ಸಿಸ್ಟಮ್, ಸ್ಟಿಯರಿಂಗ್ ವೀಲ್ ಗೂ ಚರ್ಮದ ಹೊದಿಕೆ ಮುಂತಾದ ಫೀಚರುಗಳಿವೆ.

ಮಾರುತಿ ಎರ್ಟಿಗಾ ಎಲ್ ಡಿಐ: ಎರ್ಟಿಗಾ ಎಲ್ ಡಿಐ ಡೀಸೆಲ್ ಆಯ್ಕೆಯಲ್ಲಿ ಬೇಸ್ ಆವೃತ್ತಿ. ಇದು 1.3 ಲೀಟರಿನ ಡಿಡಿಐಎಸ್ ಟರ್ಬೊ ಡೀಸೆಲ್ ಮೋಟರ್ ಎಂಜಿನ್ ಹೊಂದಿದೆ. ಈ ಕಾರಿನಲ್ಲಿ ಮಾರುತಿ ಎರ್ಟಿಗಾ ಎಲ್ಎಕ್ಸ್ಐನಲ್ಲಿರುವ ಹೆಚ್ಚಿನ ಫೀಚರುಗಳು ಇರಲಿವೆ. ಕೆಲವು ಬದಲಾವಣೆ ಇರಬಹುದು.

ಮಾರುತಿ ಎರ್ಟಿಗಾ ವಿಡಿಐ: ಎರ್ಟಿಗಾ ವಿಡಿಐ ಕಾರು ಡೀಸೆಲ್ ಆಯ್ಕೆಯಲ್ಲಿ ಮಧ್ಯಮ ಶ್ರೇಣಿಯಲ್ಲಿದೆ. ಎಂಜಿನ್ ಸಿಸ್ಟಮ್ ಹೊರತುಪಡಿಸಿ ಇದರಲ್ಲಿರುವ ಫೀಚರುಗಳು ಎರ್ಟಿಗಾ ವಿಎಕ್ಸ್ಐನಂತೆಯೇ ಇದೆ. ಇದರ ಮೈಲೇಜ್ ಪ್ರತಿಲೀಟರಿಗೆ ಸುಮಾರು 20.77 ಕಿ.ಮೀ. ಇರುವುದಾಗಿ ಕಂಪನಿ ಪ್ರತಿಪಾದಿಸಿದೆ.

ಮಾರುತಿ ಎರ್ಟಿಗಾ ಝಡ್ ಡಿಐ: ಮಾರುತಿ ಸುಜುಕಿ ಎರ್ಟಿಗಾ ಝಡಿಐ ಡೀಸೆಲ್ ಆಯ್ಕೆಯಲ್ಲಿ ಟಾಪ್ ಎಂಡ್ ಆವೃತ್ತಿ. ಇದು ಝಡ್ ಎಕ್ಸ್ಐ ಮಾಡೆಲಿನ ಫೀಚರುಗಳನ್ನು ಹೊಂದಿದೆ. (ಕನ್ನಡ ಡ್ರೈವ್ ಸ್ಪಾರ್ಕ್ )

More from DriveSpark

Article Published On: Friday, January 13, 2012, 12:54 [IST]
English summary
Maruti Suzuki Ertiga Full Review. Ertiga Models: Maruti Ertiga LXI, VXI, ZXI, LDI, VDI, ZDI. Ertiga Models Price and Review.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+