ಮಾರುತಿ ಎರ್ಟಿಗಾ: ಒಳಗಿನ ಮತ್ತು ಹೊರಗಿನ ಕಥೆ

ಇದರ ಇಂಟಿರಿಯರ್ ಇಕೊ ತರಹವಿಲ್ಲ. ಟೊಯೊಟಾದಷ್ಟು ವಿಸ್ತಾರವೂ ಇಲ್ಲ. ಆದರೆ ಇದರ ಇಂಟಿರಿಯರ್ ನಲ್ಲಿ ಮಾರುತಿಯ ಸ್ಟಾಂಡರ್ಡ್ ಗುಣಮಟ್ಟವಿದೆ. ಒಂದು ವರದಿಯ ಪ್ರಕಾರ ಎರ್ಟಿಗಾ ಕಾರಿನ ಹೆಚ್ಚಿನ ಬಿಡಿಭಾಗಗಳು ಸ್ವಿಫ್ಟ್ ಕಾರಿನಿಂದ ಎರವಲು ಪಡೆದದ್ದಂತೆ. ಇದರಲ್ಲಿರುವ ಹಗುರ ಸಲಕರಣೆಗಳು ಕಾರಿಗೆ ಹೆಚ್ಚು ಐಷಾರಾಮಿ ಲುಕ್ ನೀಡಿವೆ.
ಮುಂಭಾಗದ ಸೀಟನ್ನು ನಾಲ್ಕು ಸ್ಟೆಪ್ ಅಡ್ಜೆಸ್ಟ್ ಮೆಂಟ್ ಮಾಡಬಹುದು. ಕಾರಿನ ಬೂಟ್ ಸ್ಥಳಾವಕಾಶ ಹೆಚ್ಚೇನು ಜಾಸ್ತಿಯಿಲ್ಲ. ಹೆಚ್ಚು ಲಗೇಜ್ ಇದ್ದರೆ ಹಿಂಭಾಗದ ಸೀಟನ್ನು ಕೊಂಚ ಮಡುಚಿ ಸ್ಥಳಾವಕಾಶ ಮಾಡಬಹುದು. ಇದರಲ್ಲಿರುವ ಆಕರ್ಷಕ ಏರ್ ಕಂಡಿಷನ್ ವೆಂಟ್ ತಂಪಾದ ಸವಾರಿಗೆ ಸಹಕರಿಸಬಹುದು.
ನೂತನ ಮಾರುತಿ ಸುಜುಕಿ ಎರ್ಟಿಗಾ ಕಾರು 5 ಸ್ಪೀಡ್ ಮ್ಯಾನುಯಲ್ ಗೇರ್ ಬಾಕ್ಸ್, ಪವರ್ ವಿಂಡೋ, ಎಲೆಕ್ಟ್ರಿಕ್ ಮಿರರ್ ಮುಂತಾದ ಫೀಚರ್ ಹೊಂದಿದೆ. ಸ್ಟಿಯರಿಂಗ್ ವೀಲನ್ನು ಮೂರು ಹಂತಕ್ಕೆ ಹೊಂದಾಣಿಕೆ ಮಾಡಿಕೊಳ್ಳಬಹುದು. ಈ ಕಾರಿನ ಹೊರವಿನ್ಯಾಸ ಆಕರ್ಷಕವಾಗಿದೆ. ಈ ಕಾರು ರಿಟ್ಜ್ ನಂತೆ ಕಾಣುತ್ತದೆ. ಈ ಕಾರಿನ ದರ, ಮೈಲೇಜ್ ಮಾಹಿತಿಗಾಗಿ ಮುಂದಿನ ಪುಟ ನೋಡಿ.


Click it and Unblock the Notifications








