ಮಾರುತಿ ಸುಜುಕಿ ಎರ್ಟಿಗಾ ಸವಾರಿ ಎಷ್ಟು ಸುರಕ್ಷಿತ?

ಯಾವುದೇ ತುರ್ತು ಅಪಘಾತದ ಸಮಯದಲ್ಲಿ ರಕ್ಷಿಸಲು ಎರಟು ಏರ್ ಬ್ಯಾಗುಗಳಿವೆ. ಏರ್ ಬ್ಯಾಗುಗಳಲ್ಲಿ ಒಂದು ಡ್ರೈವರ್ ಭಾಗದಲ್ಲಿ ಮತ್ತು ಸಹ ಪ್ರಯಾಣಿಕ ಸೀಟಿನ ಮುಂಭಾಗದಲ್ಲಿದೆ.
ಉಳಿದಂತೆ ಇಬಿಡಿ ಜೊತೆಗೆ ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್(ಎಬಿಎಸ್) ಮತ್ತು ಬ್ರೇಕ್ ಅಸಿಸ್ಟ್ ಫೀಚರುಗಳಿವೆ. ಉಳಿದಂತೆ ಎಂಪಿವಿಗಳಲ್ಲಿರುವ ಸುರಕ್ಷತೆಯ ಫೀಚರುಗಳಾದ ಎಂಜಿನ್ ಇಮೊಬಿಲೈಜರ್ ಮತ್ತು ಹೈ ಟೆನ್ಸಿಲ್ ರೂಫ್ ಕೂಡ ಇದೆ. ನೂತನ ಎರ್ಟಿಗಾ ಕಾರಿನಲ್ಲಿ ಅಡ್ವಾನ್ಸಡ್ ಬ್ರೇಕ್ ಸಿಸ್ಟಮ್ ಇರುವುದರಿಂದ ಆರಾಮವಾಗಿ ಚಲಾಯಿಸಬಹುದಾಗಿದೆ.
ಮ್ಯೂಸಿಕ್ ಮಸ್ತಿಗೆ ಇಷ್ಟವಾಗುವ ಆಡಿಯೋ ಸಿಸ್ಟಮ್ ಗಳು ಎರ್ಟಿಗಾ ಕಾರನಲ್ಲಿವೆ. ಅಂದರೆ ಶಕ್ತಿಶಾಲಿ ಆಡಿಯೋ ಸಿಸ್ಟಮ್, 4+2 ಸ್ಪೀಕರುಗಳು ಮತ್ತು ಯುಎಸ್ ಬಿ ಕನೆಕ್ಟಿವಿಟಿ ಇದೆ. ನಿಪ್ಪೋನ್ ಕೆನ್ ವುಡ್ ಎಂಪಿ3 ಪ್ಲೇಯರ್, ಎಫ್ಎಮ್, ಎಎಂ ಇದರಲ್ಲಿದೆ. ಹಿಂಭಾಗದ ಸವಾರರಿಗೆ ಪ್ರತ್ಯೇಕವಾಗಿ ರಿಮೋಟ್ ಮೂಲಕ ಕಾರ್ಯನಿರ್ವಹಿಸುವ ಸಿಡಿ ಪ್ಲೇಯರ್ ಇದೆ.
ಮಾರುತಿ ಸುಜುಕಿ ಎರ್ಟಿಗಾ ಕಾರಿನ ಇಂಟಿರಿಯರ್ ಮತ್ತು ಎಕ್ಸ್ ಟೀರಿಯರ್ ಕಥೆ ಮುಂದಿನ ಪುಟದಲ್ಲಿದೆ ಓದಿ..


Click it and Unblock the Notifications








