ಮಾರುತಿ ಸುಜುಕಿ ಎರ್ಟಿಗಾ: ನೀವು ಸಂಪೂರ್ಣ ವಿಮರ್ಶೆ ಓದಿಲ್ವ?

ದೇಶದ ಬೃಹತ್ ಕಾರು ಕಂಪನಿ ಮಾರುತಿ ಇತ್ತೀಚೆಗೆ ನೂತನ ಎಂಪಿವಿ "ಮಾರುತಿ ಎರ್ಟಿಗಾ"ವನ್ನು ಅನಾವರಣ ಮಾಡಿದೆ. ಈ ಕಾರು ಪ್ರಸಕ್ತ ವರ್ಷದ ಮಧ್ಯಾವದಿಯಲ್ಲಿ ದೇಶದ ರಸ್ತೆಗಿಳಿಯಲಿದೆ. ಈ ಕಾರಿನ ದರ, ಮೈಲೇಜ್, ವಿಶೇಷತೆ, ಇಂಟಿರಿಯರ್, ಎಕ್ಸ್ ಟೀರಿಯರ್ ಸೇರಿದಂತೆ ಸಂಪೂರ್ಣ ವಿಮರ್ಶೆ ಇಲ್ಲಿದೆ. ಇದು ಕನ್ನಡ ಡ್ರೈವ್ ಸ್ಪಾರ್ಕ್ ವಿಶೇಷ.

ಮಾರುತಿ ಸುಜುಕಿ ಎರ್ಟಿಗಾ ರಸ್ತೆಗಿಳಿಯಲು ಕೆಲವು ತಿಂಗಳಿವೆ. ದೇಶದ ಜನರು ಬಹುನಿರೀಕ್ಷೆಯಿಂದ ಇಂತಹ ಎಂಪಿವಿಗಾಗಿ ಕಾಯುತ್ತಿದ್ದರು. ಈ ಏಳು ಸೀಟಿನ ಕಾರು ದೊಡ್ಡದಾದ ವೀಲ್ ಬೇಸ್ ಹೊಂದಿದ್ದು, ಆಕರ್ಷಕವಾಗಿದೆ. ಈ ಕಾರಿನ ದರ ಸುಮಾರು 6-9 ಲಕ್ಷ ರು. ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ.

ಈ ಕಾರಿನ ಮಾರಾಟ ಇನ್ನು ಸುರುವಾಗದ ಕಾರಣ ಈ ಲೇಖನದಲ್ಲಿ ನಿರೀಕ್ಷೆ ಎಂಬ ಪದ ಹೆಚ್ಚಿದೆ. ನೂತನ ಎರ್ಟಿಗಾ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರಕಲಿದೆ. ಪೆಟ್ರೋಲ್ ಕಾರು ಪ್ರತಿಲೀಟರಿಗೆ 16.02 ಕಿ.ಮೀ. ಮೈಲೇಜ್ ನೀಡಿದರೆ, ಡೀಸೆಲ್ ಆವೃತ್ತಿ ಲೀಟರಿಗೆ 20.77 ಕಿ.ಮೀ. ಮೈಲೇಜ್ ನೀಡಲಿದೆ.

ನೂತನ ಕಾರಿನಲ್ಲಿ ಎಬಿಎಸ್, ಅವಳಿ ಏಸಿ, ಬಾಗಿಸಬಹುದಾದ ಸ್ಟಿಯರಿಂಗ್ ಮುಂತಾದ ಫೀಚರುಗಳಿವೆ. ಒಟ್ಟಾರೆ ಈ ಕಾರಿನಲ್ಲಿ ಏನೆಲ್ಲ ಇವೆ, ಏನೆಲ್ಲ ಇಲ್ಲವೆಂಬ ಮಾಹಿತಿ ನಮಗೆ ಲಭಿಸಿದೆ. ನೂತನ ಮಾರುತಿ ಎರ್ಟಿಗಾ ಕಾರಿನ ಚಿತ್ರಗಳು ಮತ್ತು ವಿಮರ್ಶೆಗಾಗಿ ಮುಂದಿನ ಪುಟಗಳಿಗೆ ಸಾಗಲು ಮರೆಯದಿರಿ. ಜೈ ಮಾರುತಿ!!

Most Read Articles

Kannada
English summary
Maruti Suzuki Ertiga Full Review. Read Ertiga MPV Mileage, Colours, Interiors, Specifications, Features and Price.
Story first published: Monday, January 16, 2012, 14:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X