ಮಾರುತಿ ಸುಜುಕಿ ರಿಟ್ಜ್: ಸಂಪೂರ್ಣ ವಿಮರ್ಶೆ ಓದಿ

By * ಪ್ರವೀಣ ಚಂದ್ರ

ಮಾರುತಿ ಸುಜುಕಿ ಫ್ಯಾಕ್ಟರಿಯಿಂದ ಬಂದ ರಿಟ್ಜ್ ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆಗಳಲ್ಲಿ ದೊರಕುವ ಡೈನಾಮಿಕ್ ಕಾರು. ಇದು 1197ಸಿಸಿ ನೀಡುವ 1.2 ಲೀಟರ್ ಕೆ12 ಸೀರಿಸ್ ಪೆಟ್ರೋಲ್ ಎಂಜಿನ್ ಹೊಂದಿದೆ. 5 ಸ್ಪೀಡ್ ಮ್ಯಾನುಯಲ್ ಗೇರ್ ಹೊಂದಿರುವ ಇದು ಅತ್ಯುತ್ತಮ ಮೈಲೇಜ್ ಕಾರು ಕೂಡ ಹೌದು. ರಿಟ್ಜ್ ಪೆಟ್ರೋಲ್ ಕಾರು ಸಿಟಿ ರಸ್ತೆಯಲ್ಲಿ ಪ್ರತಿಲೀಟರಿಗೆ 14.1 ಕಿ.ಮೀ ಮತ್ತು ಹೆದ್ದಾರಿಯಲ್ಲಿ 19.1 ಕಿ.ಮೀ. ಮೈಲೇಜ್ ನೀಡುತ್ತದೆ.

ಡೀಸೆಲ್ ಆಯ್ಕೆಯಲ್ಲೂ ರಿಟ್ಜ್ ದೊರಕುತ್ತದೆ. ಇದು 1,248 ಸಿಸಿಯ 1.3 ಲೀಟರ್ ಡಿಡಿಐಎಸ್ ಡೀಸೆಲ್ ಎಂಜಿನ್ ಹೊಂದಿದೆ. ವಿಶ್ವದರ್ಜೆಯ ಡಿಡಿಐಎಸ್ ಎಂಜಿನ್ ಕೂಡ 5 ಸ್ಪೀಡ್ ಮ್ಯಾನುಯಲ್ ಟ್ರಾನ್ಸ್ ಮಿಷನ್ ಗೇರ್ ಬಾಕ್ಸ್ ಹೊಂದಿದೆ. ಬಿಎಸ್4 ಮಾನ್ಯತೆ ಪಡೆದ ಎಂಜಿನ್ ಸಿಟಿ ರಸ್ತೆಯಲ್ಲಿ 17.8 ಕಿ.ಮೀ. ಮತ್ತು ಹೆದ್ದಾರಿಯಲ್ಲಿ 21.2 ಕಿ.ಮೀ. ಮೈಲೇಜ್ ನೀಡುತ್ತದೆ.

ರಿಟ್ಜ್ ಕಾರು ಸಣ್ಣಕಾರುಗಳಲ್ಲಿ ಪವರ್ ಫುಲ್ ಆಗಿದೆ. ಕೆ12 ಎಂಜಿನ್ 6 ಸಾವಿರ ಆವರ್ತನಕ್ಕೆ 85 ಪಿಎಸ್ ಪವರ್ ಮತ್ತು 4,500 ಆವರ್ತನಕ್ಕೆ 113 ಟಾರ್ಕ್ ಪವರ್ ನೀಡುತ್ತದೆ. ಈ ಎಂಜಿನ್ ಮಲ್ಟಿ ಪಾಯಿಂಟ್ ಫ್ಯೂಯಲ್ ಇಂಜೆಕ್ಷನ್ ಹೊಂದಿದ್ದು ಅತ್ಯುತ್ತಮ ಫರ್ಮಾಮೆನ್ಸ್ ನೀಡುತ್ತದೆ. ಡೀಸೆಲ್ ಎಂಜಿನ್ 4 ಸಾವಿರ ಆವರ್ತನಕ್ಕೆ 75 ಪಿಎಸ್ ಪವರ್ ಮತ್ತು 2 ಸಾವಿರ ಆವರ್ತನಕ್ಕೆ 190 ಎನ್ಎಂ ಟಾರ್ಕ್ ಪವರ್ ನೀಡುತ್ತದೆ.

ಪವರ್, ಟಾರ್ಕ್ ಮತ್ತು ಗೇರ್ ಬಾಕ್ಸ್ ಅವಲಂಬಿಸಿ ಮಾರುತಿ ರಿಟ್ಜ್ ಆಕ್ಸಿಲರೇಷನ್ ಮತ್ತು ಪಿಕಪ್ ಇದೆ. ಪೆಟ್ರೋಲ್ ಎಂಜಿನ್ ನಲ್ಲಿ 0-100 ಕಿ.ಮೀ. ವೇಗವನ್ನು ಕೇವಲ 14.71 ಸೆಕೆಂಡಿನಲ್ಲಿ ಪಡೆಯಬಹುದು. ಈ ಕಾರಿನಲ್ಲಿ ಗಂಟೆಗೆ ಗರಿಷ್ಠ 156 ಕಿ.ಮೀ. ವೇಗದಲ್ಲಿ ಸಾಗಬಹುದು.

ಡೀಸೆಲ್ ರಿಟ್ಜ್ ಆವೃತ್ತಿ ಕೂಡ ಅತ್ಯುತ್ತಮ ಪವರ್ ಮತ್ತು ಆಕ್ಸಿಲರೇಷನ್ ನೀಡುತ್ತದೆ. ಇದರಲ್ಲಿ 0-100 ಕಿ.ಮೀ. ವೇಗವನ್ನು ಕೇವಲ 15.43 ಸೆಕೆಂಡಿನಲ್ಲಿ ಪಡೆಯಬಹುದು. ಗಂಟೆಗೆ ಗರಿಷ್ಠ 163 ಕಿ.ಮೀ. ವೇಗದಲ್ಲಿ ಸಾಗಬಹುದಾಗಿದೆ.

More from DriveSpark

Article Published On: Thursday, March 29, 2012, 16:15 [IST]
English summary
Maruti Suzuki to launch refreshed Ritz In 2012. Read Ritz Review, Price, Verients, Mileage, Power, colors, Acceleration, Pick-Up, Exterior, Interior, Engine and Performance Review.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+