ಮಾರುತಿ ಸುಜುಕಿ ರಿಟ್ಜ್: ಸಣ್ಣಕಾರಿನ ದೊಡ್ಡಸ್ತಿಕೆ

Maruti Suzuki Ritz Review
ಮಾರುತಿ ಸುಜುಕಿ ಕಂಪನಿಯ ರಿಟ್ಜ್ ಕಾರುಗಳು ರಸ್ತೆಯಲ್ಲಿಂದು ಗಮನಾರ್ಹ ಸಂಖ್ಯೆಯಲ್ಲಿ ಹೆಚ್ಚಾಗುತ್ತಿದೆ. ಸ್ವಿಫ್ಟಿಗೆ ಕಾಯಲಾಗದವರೆಲ್ಲ ಅದರ ಸಹೋದರ ರಿಟ್ಜ್ ಕಡೆ ಆಕರ್ಷಿತರಾಗುತ್ತಿದ್ದಾರೆ. ಇದರ ಇಂಟಿರಿಯರ್ ಮತ್ತು ಎಕ್ಸ್ ಟೀರಿಯರ್ ಆಕರ್ಷಕವಾಗಿದ್ದು, ಹೆಚ್ಚಿನ ಗ್ರಾಹಕರ ಗಮನ ಸೆಳೆಯುತ್ತಿದೆ. ಬಾಡಿ ಗ್ರಾಫಿಕ್ಸ್, ಏರೋ ಡೈನಾಮಿಕ್ ವಿನ್ಯಾಸ, ರೂಫ್ ಲೈನ್, ಹಿಂಭಾಗದ ಬಾಗಿದ ಕಿಟಕಿ ಇತ್ಯಾದಿ ವಿಶೇಷತೆಗಳಿಂದ ರಿಟ್ಜ್ ಗಮನ ಸೆಳೆಯುತ್ತದೆ.

ಸ್ಟೈಲಿಶ್ ಮತ್ತು ಸ್ಪೋರ್ಟಿ ವಿನ್ಯಾಸದ ಈ ಕಾರಿನಲ್ಲಿ ಐದು ಜನರು ಕುಳಿತುಕೊಳ್ಳಬಹುದು. ಇದರ ಇಂಟಿರಿಯರ್ ಹೆಚ್ಚು ಸ್ಥಳಾವಕಾಶ ಹೊಂದಿದ್ದು, ಆರಾಮವಾಗಿ ಪ್ರಯಾಣಿಸಬಹುದಾಗಿದೆ. ಆದರೆ ಇದರ ಹಿಂಭಾಗದ ಸೀಟು ಆಟೋ ಸೀಟಿನಂತೆ ಇದೆ. ಹಿಂಬದಿ ಸವಾರರು ದೂರ ಪ್ರಯಾಣದಲ್ಲಿ ತುಸು ಕಿರಿಕ್ ಅನುಭವಿಸಬಹುದು. ಈ ಕಾರಿನ ಗ್ರೌಂಡ್ ಕ್ಲಿಯರೆನ್ಸ್ 170 ಮಿ.ಮಿ. ಇದೆ.

ಕಾರಿನೊಳಗೆ ಕೆಲವು ಫೀಚರುಗಳು ಗಮನಸೆಳೆಯುತ್ತವೆ. ಅಂದರೆ ಸೀಟಿನ ಹಿಂಭಾಗದ ಪಾಕೆಟ್, ಮುಂಭಾಗದ ಸೀಟಿನ ಕೆಳಭಾಗದಲ್ಲಿ ಟ್ರೇ, ಸ್ಪೀಕರ್ ಜೊತೆಗೆ ರೆಡಿಯೋ ಮತ್ತು ಸಿಡಿ ಕೂಡ ಇದರಲ್ಲಿದೆ. ಸೀಟ್ ಹೊಂದಣಿಕೆ ಮುಂತಾದ ಆರಾಮದಾಯಕತೆಯ ಫೀಚರುಗಳೂ ರಿಟ್ಜ್ ಕಾರಿನಲ್ಲಿವೆ. ಉಳಿದಂತೆ ಕಪ್ ಹೋಲ್ಡರ್, ರಿಮೋಟ್ ಫ್ಯೂಯಲ್ ಲಿಡ್ ಓಪನರ್, ಆಂಟೆನಾ ಇತ್ಯಾದಿ ಸಣ್ಣಪುಟ್ಟ ಫೀಚರುಗಳಿವೆ.

ಮಾರುತಿ ಸುಜುಕಿ ರಿಟ್ಜ್ ಕಾರಿನ ಸ್ಟಿಯರಿಂಗ್ ವೀಲ್ ನಲ್ಲಿಯೇ ಆಡಿಯೋ ಕಂಟ್ರೋಲ್ ಮಾಡಬಹುದು. ಮಾರುತಿ ಸುಜುಕಿ ರಿಟ್ಜ್ ಕಾರು ಎಲ್ಎಕ್ಸ್ಐ, ವಿಎಕ್ಸ್ಐ, ಎಲ್ ಡಿಐ ಮತ್ತು ವಿಡಿಐ ಆವೃತ್ತಿಗಳಲ್ಲಿ ದೊರಕುತ್ತದೆ. ಝಡ್ ಎಕ್ಸ್ ಐ ಮತ್ತು ಝಡ್ ಡಿಐ ರಿಟ್ಜ್ ಆವೃತ್ತಿಗಳು ಅಲಾಯ್ ವೀಲ್ ಹೊಂದಿವೆ. ಅಲಾಯ್ ವೀಲ್ ಇರುವ ರಿಟ್ಜ್ ಸೌಂದರ್ಯ ಇನ್ನಷ್ಟು ಹೆಚ್ಚಾಗಿದೆ.

ಮಾರುತಿ ಸುಜುಕಿ ರಿಟ್ಜ್ ಕಾರಿನ ಸೌಂಡ್ ಓಕೆ. ಜೊತೆಗೆ ಡೈನಾಮಿಕ್ ಬ್ರೇಕಿಂಗ್ ಸಿಸ್ಟಮ್ ಹೊಂದಿದೆ. ಇದರಿಂದಾಗಿ ಹೆಚ್ಚು ಸುರಕ್ಷಿತವಾಗಿ ಪ್ರಯಾಣಿಸಬಹುದು. ಮುಂಭಾಗದ ಚಕ್ರಗಳು ಡಿಸ್ಕ್ ಬ್ರೇಕ್ ಮತ್ತು ಹಿಂಭಾಗಕ್ಕೆ ಡ್ರಮ್ ಬ್ರೇಕ್ ಹೊಂದಿದೆ. ರಿಟ್ಜ್ ಟಾಪ್ ಎಂಡ್ ಆವೃತ್ತಿಯಲ್ಲಿ ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ ಮತ್ತು ಇಬಿಡಿ ಬ್ರೇಕ್ ಅಸಿಸ್ಟ್ ಇತ್ಯಾದಿ ಸ್ಟಾಂಡರ್ಡ್ ಫೀಚರುಗಳಿವೆ.

More from DriveSpark

Article Published On: Thursday, March 29, 2012, 16:07 [IST]
English summary
Maruti Suzuki to launch refreshed Ritz In 2012. Read Ritz Review, Price, Verients, Mileage, Power, colors, Acceleration, Pick-Up, Exterior, Interior, Engine and Performance Review.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+