ಇನ್ನೋವಾ: ಅಬ್ಬಬ್ಬಾ ಎಷ್ಟೊಂದು ಮಾಡೆಲ್ ಇವೆ!
ಇನ್ನೋವಾ ಪೆಟ್ರೋಲ್ ಎಂಪಿವಿ
ಪೆಟ್ರೋಲ್ ಇಂಧನ ಆಯ್ಕೆಯಲ್ಲಿ ಇನ್ನೋವಾ ಕಾರು ದೊರಕುತ್ತದೆ. 2.0 ಎಂಜಿನ್ ಹೊಂದಿರುವ ಇನ್ನೋವಾ ಪೆಟ್ರೋಲ್ ಎಂಪಿವಿ ಜಿ, ಜಿಎಕ್ಸ್ ಮತ್ತು ವಿಎಕ್ಸ್ ಆವೃತ್ತಿಗಳಲ್ಲಿ ದೊರಕುತ್ತವೆ. ಇನ್ನೋವಾ ಜಿ ಬೇಸ್ ಆವೃತ್ತಿಯಲ್ಲಿ ಸ್ಟಾಂಡರ್ಡ್ ಫೀಚರುಗಳು ಇಲ್ಲ. ಜಿಎಕ್ಸ್ ಆವೃತ್ತಿಯಲ್ಲಿ ರಿಯರ್ ವೈಪರ್, ಹಿಂಭಾಗದಲ್ಲಿ ಏರ್ ಕಂಡಿಷನ್ ವೆಂಟ್ ಇತ್ಯಾದಿ ಫೀಚರುಗಳಿವೆ.
ವಿಎಕ್ಸ್ ಟಾಪ್ ಎಂಡ್ ಇನ್ನೋವಾ ಕಾರಾಗಿದ್ದು ಅಲಾಯ್ ವೀಲ್, ಫಾಗ್ ಲ್ಯಾಂಪ್, ಮಲ್ಟಿ ಇನ್ ಫಾರ್ಮೆಷನ್ ಡಿಸ್ ಪ್ಲೇ, ಆರು ಸ್ಪೀಕರ್, ಎಬಿಎಸ್, ಏರ್ ಬ್ಯಾಗ್ ಸೇರಿದಂತೆ ಹತ್ತು ಹಲವು ಫೀಚರುಗಳನ್ನು ಹೊಂದಿದೆ.
ಇನ್ನೋವಾ ಡೀಸೆಲ್ ಎಂಪಿವಿ
ಟೊಯೊಟಾ ಇನ್ನೋವಾ 2.5 ಲೀಟರಿನ ಡೀಸೆಲ್ ಆಯ್ಕೆಗಳಲ್ಲೂ ದೊರಕುತ್ತದೆ. ಏಳು ಮತ್ತು ಎಂಟು ಸೀಟಿನ ಆಯ್ಕೆಗಳಲ್ಲಿ ಹತ್ತಾರು ಆವೃತ್ತಿಗಳಲ್ಲಿ ಇದು ದೊರಕುತ್ತದೆ. ಇ, ಇವಿ, ಜಿ, ಜಿಎಕ್ಸ್, ವಿಎಕ್ಸ್ ಇತ್ಯಾದಿ ಆಯ್ಕೆಗಳಲ್ಲಿ ದೊರಕುತ್ತದೆ.
ಇನ್ನೋವಾ ಜಿ ಎಂಟು ಸೀಟಿನ ಎಂಪಿವಿ ಬೇಸ್ ಆವೃತ್ತಿಯಾಗಿದೆ. ಇದರಲ್ಲಿ ಯಾವುದೇ ಪ್ರಮುಖ ಸ್ಟಾಂಡರ್ಡ್ ಫೀಚರುಗಳಿಲ್ಲ. ಜಿ ಏಳು ಸೀಟಿನ ಆಯ್ಕೆಯಲ್ಲಿ ದೊರಕುತ್ತಿದ್ದು ಕ್ಲಾಕ್, ಟೆಕ್ನೊಮೀಟರ್, ಸಿಗರೇಟ್ ಲೈಟರ್, ಆಡಿಯೋ ಸಿಸ್ಟಮ್, ಎಬಿಎಸ್, ಏರ್ ಬ್ಯಾಗ್ ಇತ್ಯಾದಿ ಪ್ರಮುಖ ಫೀಚರುಗಳನ್ನು ಹೊಂದಿದೆ.
ಟೊಯೊಟಾ ಇನ್ನೋವಾ ಡೀಸೆಲ್ ಇ, ಇವಿ ಕಾರುಗಳಲ್ಲಿ ಹೆಚ್ಚಿನ ಸ್ಟಾಂಡರ್ಡ್ ಫೀಚರುಗಳಿವೆ. 2.5 ಎಂಜಿನ್ ನ ಇನ್ನೋವಾ ವಿಎಕ್ಸ್ 8 ಕೂಡ ಎಂಟು ಮತ್ತು ಏಳು ಸೀಟಿನ ಆಯ್ಕೆಯಲ್ಲಿ ದೊರಕುತ್ತದೆ. ಆಟೋಮ್ಯಾಟಿಕ್ ಏರ್ ಕಂಡಿಷನ್, ಪವರ್ ಡೋರ್ ಲಾಕ್, ಪವರ್ ವಿಂಡೋಸ್, ಪವರ್ ಸ್ಟಿಯರಿಂಗ್, ಕೀಲೆಸ್ ಎಂಟ್ರಿ, ಪಾರ್ಕಿಂಗ್ ಸೆನ್ಸಾರ್ ಇತ್ಯಾದಿ ಪ್ರಮುಖ ಫೀಚರುಗಳು ಇದರಲ್ಲಿವೆ.
ಟೊಯೊಟಾ ಇನ್ನೋವಾ: ಮೈಲೇಜ್, ಬೆಂಗಳೂರು ದರ ಮತ್ತು ಡೀಲರುಗಳ ಮಾಹಿತಿ ಮುಂದಿನ ಪುಟದಲ್ಲಿದೆ>>


Click it and Unblock the Notifications









