ಅಂಬಾಸಡರ್ ಮಾರಾಟ ದ್ವಿಗುಣ: ಹಿಂದೂಸ್ತಾನ್ ಮೋಟರ್ಸ್ ಗುರಿ

Hindustan Motors aims to double its Ambassador sale in 2011
ಚೆನ್ನೈ, ನ.23: ದೇಶದ ಅತಿ ಪುರಾತನ ಸಂಸ್ಥೆ ಹಿಂದೂಸ್ತಾನ್ ಮೋಟಾರ್ಸ್ ನ ಹೆಮ್ಮೆಯ ಅಂಬಾಸಡರ್ ಮಾರಾಟ ಸಂಖ್ಯೆಯನ್ನು ದ್ವಿಗುಣಗೊಳಿಸಲು ಸಕಲ ಸಿದ್ಧತೆ ನಡೆಸಿದೆ. ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು, ಭಾರತದ ದೇಸಿ ಕಾರು ಅಂಬಾಸಡರ್ ಅನ್ನು ಮೂಲೆಗೆ ತಳ್ಳಿ ಸ್ಕೋಡಾ, ಹೋಂಡಾ ಎಂದು ವಿದೇಶಿ ಐಷಾರಾಮಿ ಕಾರುಗಳನ್ನು ಕೊಂಡು ಅಪ್ ಡೇಟ್ ಆದ ಮೇಲೆ, ಅಂಬಾಸಿಡರ್ ಮಾರಾಟ ಇಳಿಮುಖವಾಗಿತ್ತು. ಆದರೆ, ಹೊಸ ವಿನ್ಯಾಸ, ಹೆಚ್ಚಿನ ತಂತ್ರಜ್ಞಾನ ಅಳವಡಿಕೆ ಮೂಲಕ ನಿಧಾನವಾಗಿ ಫಿನಿಕ್ಸ್ ಹಕ್ಕಿಯಂತೆ ಮತ್ತೆ ಮೇಲೆದ್ದಿದೆ. ಹಿಂದೂಸ್ತಾನ್ ಮೋಟಾರ್ಸ್ ಮುಂಬರುವ 15-18 ತಿಂಗಳಲ್ಲಿ ಹೊಸ ವಿನ್ಯಾಸ. ಮಾದರಿಗಳನ್ನು ಹೊರ ತರುತ್ತಿದ್ದು, ವಾರ್ಷಿಕವಾಗಿ 12,000 ವಾಹನಗಳಿಂದ 24,000 ವಾಹನಗಳನ್ನು ತಯಾರಿಸಲಾಗುವುದು ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಹೇಳಿದ್ದಾರೆ.

ಸುಮಾರು 6 ಹೊಸ ಮಾದರಿಗಳನ್ನು ಪರಿಚಯಿಸಲಾಗುತ್ತಿದ್ದು, ಅಂಬಾಸಿಡರ್ ನದ್ದೇ 4 ಹೊಸ ವಿನ್ಯಾಸದ ಮಾದರಿಗಳು ಮಾರುಕಟ್ಟೆ ಪ್ರವೇಶಿಸಲಿದೆ. ಉಳಿದಂತೆ ವಾಣಿಜ್ಯ ಉದ್ದೇಶಿತ ವಾಹನ ಹಾಗೂ ಸಾರ್ವಜನಿಕ ವಾಹನಗಳ ಮಾದರಿಗಳು ಹೊರ ಬರಲಿದೆ. 2011 ರ ಆರ್ಥಿಕ ವರ್ಷದ ಪ್ರಥಮ ತ್ರೈಮಾಸಿಕದಲ್ಲಿ ಈ ಎಲ್ಲಾ ಮಾದರಿಗಳ ತಯಾರಿಕೆ ಆರಂಭವಾಗಲಿದೆ.

ಪಶ್ಚಿಮ ಬಂಗಾಳದ ಘಟಕದಿಂದ ಹೊರ ಬಂದ ಹಿಂದೂಸ್ತಾನ್ ಮೋಟರ್ಸ್ ನ ಅಂಬಾಸಡರ್ ದೇಶದ ನೆಚ್ಚಿನ ಕಾರು ಎನಿಸಿದ್ದು ಈಗ ಇತಿಹಾಸ. ಈಗ ಹೊಸ ತಂತ್ರಜ್ಞಾನದ ಜೊತೆ ಕೈ ಜೋಡಿಸಿರುವ ಎಚ್ ಎಂ ಸಂಸ್ಥೆ ಜಪಾನಿನ ಕಾರು ಉತ್ಪಾದಕ ಸಂಸ್ಥೆ ಮಿಟ್ಸುಭಿಷಿ ಜೊತೆಗೂಡಿ ಚೆನ್ನೈ ಘಟಕದಲ್ಲೂ ತನ್ನ ಹೊಸ ಮಾದರಿಗಳನ್ನು ವಿನ್ಯಾಸಗೊಳಿಸಲಿದೆ. ಮಿಟ್ಸುಭಿಷಿಯ ಲ್ಯಾನ್ಸರ್ ಹಾಗೂ ಪಜೆರೂ ಮಾರುಕಟ್ಟೆಯಲ್ಲಿ ಸುಸ್ಥಿತಿ ಕಾಯ್ದುಕೊಂಡಿದೆ. ಇತ್ತೀಚೆಗೆ ಹಿಂದೂಸ್ತಾನ್ ಮೋಟರ್ಸ್ ನ ಜೊತೆ ಸೇರಿ ಜಂಟಿಯಾಗಿ 49.95ಲಕ್ಷ ರು ಬೆಲೆಯ ಲ್ಯಾನ್ಸರ್ ಎವೊಲ್ಯೂಷನ್ ಎಕ್ಸ್ ಸೆಡಾನ್ ಮಾದರಿ ಹಾಗೂ 38.95 ಲಕ್ಷ ರು ಬೆಲೆಯ ಮಾಂಟೆರೋ SUVಗಳನ್ನು ಪರಿಚಯಿಸಿದೆ. ಅಲ್ಲದೇ ಇದೇ ಘಟಕದಲ್ಲಿ SUV ಮಾದರಿ ಔಟ್ ಲ್ಯಾಂಡರ್ ಕೂಡಾ ಜೋಡಣೆ ಕಾರ್ಯ ಕೂಡಾ ನಡೆಯುತ್ತಿದೆ.

ಹಿಂದೂಸ್ತಾನ್ ಮೋಟರ್ಸ್ ಗೆ ಇದಲ್ಲದೆ ಮಧ್ಯಪ್ರದೇಶ ಹಾಗೂ ಪಶ್ಚಿಮ ಬಂಗಾಳಗಳಲ್ಲಿ ಘಟಕಗಳಿವೆ. ಸಾಲದ ಸುಳಿದಲ್ಲಿ ಸಿಲುಕಿದ್ದ ಮಧ್ಯಪ್ರದೇಶದ ಇಂದೋರ್ ಘಟಕ, ಶೀಘ್ರದಲ್ಲೇ ಸುಸ್ಥಿತಿ ಮರಳಲಿದೆ. ಹೊಸ ಮಾದರಿ ಕಾರುಗಳು ಮಾರುಕಟ್ಟೆ ಪ್ರವೇಶಿಸತೊಡಗಿದಂತೆ, ಪ್ರಗತಿ ಪ್ರಮಾಣ ಗಣನೀಯವಾಗಿ ಹೆಚ್ಚಲಿದೆ. ಆಟೋ ಕಾಂಪೋನೆಂಟ್ ಗಳ ಮಾರಾಟ ಕೂಡಾ ಹೆಚ್ಚಾಗಿದ್ದು ಸುಮಾರು 100 ಟನ್ ಗಳಷ್ಟು ಫೋರ್ಜಿಂಗ್ ಹಾಗೂ ಕ್ಯಾಸ್ಟಿಂಗ್ ಗಳನ್ನು ಮಾರುವ ಸ್ಥಿತಿಯಲ್ಲಿದೆ. 2011ರಲ್ಲಿ ಅಂಬಾಸಡರ್ ಗೆ ಶುಭಕಾಲ ಆರಂಭವಾಗಲಿದೆ. ಭಾರತದ ರಸ್ತೆಗಳಲ್ಲಿ ಮತ್ತೆ ರಾಜನಾಗಿ ಮೆರೆಯುವ ಕಾಲ ಬರಲಿದೆ ಎಂಬ ಆತ್ಮವಿಶ್ವಾಸವನ್ನು ಸಂಸ್ಥೆ ಎಂಡಿ ವ್ಯಕ್ತಪಡಿಸಿದ್ದಾರೆ.

More from DriveSpark

Article Published On: Tuesday, November 23, 2010, 14:04 [IST]
English summary
Hindustan Motors is pinning on the hope to increase its sale of Ambassador cars in India to a double level. By introducing new variants of the car JV with Mitsubishi Motors in another 15-18 months.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+