ಟೊಯೊಟಾದಲ್ಲಿ 2 ಸಾವಿರ ಉದ್ಯೋಗಾವಕಾಶ

Toyota Kiroskar
ಮುಂಬೈ, ಜೂನ್ 30: ಜಪಾನಿನ ಬೃಹತ್ ವಾಹನ ತಯಾರಿಕಾ ಕಂಪನಿ ಟೊಯೊಟಾ ಕಿರ್ಲೊಸ್ಕರ್ ಈ ವರ್ಷ ದೇಶದಲ್ಲಿ ಸುಮಾರು 2 ಸಾವಿರ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ. ಬಡ್ಡಿದರ ಮತ್ತು ಇಂಧನ ದರಗಳ ಹೆಚ್ಚಳದಿಂದ ಮಾರುತಿ ಮತ್ತು ಹ್ಯುಂಡೈ ಕಾರುಗಳ ಮಾರಾಟ ಇಳಿಕೆ ಕಾಣುತ್ತಿರುವ ಸಮಯದಲ್ಲಿ ಟೊಯೊಟಾ ಅವಕಾಶಗಳನ್ನು ಸಮರ್ಥವಾಗಿ ಬಾಚಿಕೊಳ್ಳಲು ನಿರ್ಧರಿಸಿದೆ.

ಟೊಯೊಟಾ ಕಿರ್ಲೊಸ್ಕರ್ ಕಂಪನಿಯು ಟೊಯೊಟಾ ಮೋಟರ್ ಮತ್ತು ಕಿರ್ಲೊಸ್ಕರ್ ಮೋಟರ್ ನ ಜಂಟಿ ಉದ್ಯಮವಾಗಿದೆ. "ಕಂಪನಿಯ ಹಲವು ವಾಹನಗಳು ರಸ್ತೆಗಿಳಿಯಲು ಸಜ್ಜಾಗಿವೆ. ಇಂತಹ ಸಂದರ್ಭದಲ್ಲಿ ನಮ್ಮ ಮಾನವ ಸಂಪನ್ಮೂಲ ಪ್ರಮಾಣ ಹೆಚ್ಚಿಸಿಕೊಳ್ಳುವುದು ಮುಖ್ಯವಾಗಿದೆ" ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹಿರೋಶಿ ನಕಗವಾ ಹೇಳಿದ್ದಾರೆ.

ಕಂಪನಿಯು ಕಳೆದ ಎರಡು ವರ್ಷಗಳಲ್ಲಿ 2 ಸಾವಿರ ಸಿಬ್ಬಂದಿ ನೇಮಕಾತಿ ಮಾಡಿದೆ. ಈಗ ದೇಶದಲ್ಲಿ ಕಂಪನಿಯ ಉದ್ಯೋಗಿಗಳ ಸಂಖ್ಯೆ 5 ಸಾವಿರಕ್ಕೆ ತಲುಪಿದೆ. ಇದೀಗ ಈ ವರ್ಷ ಮತ್ತಷ್ಟು ಉದ್ಯೋಗದ ಬಾಗಿಲನ್ನು ಕಂಪನಿ ನಿರ್ಧರಿಸಿದೆ. "ಈ ವರ್ಷ ಸುಮಾರು 2 ಸಾವಿರ ಸಿಬ್ಬಂದಿ ನೇಮಕ ಮಾಡಿಕೊಳ್ಳಲಿದ್ದೇವೆ" ಎಂದು ನಕಗವಾ ಹೇಳಿದ್ದಾರೆ.

More from DriveSpark

Article Published On: Thursday, June 30, 2011, 11:54 [IST]
English summary
Toyota will hire 2,000 people in India this year as it revs up to bolster market share by launching small cars.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+