ಉರಿದು ಹೋದ ನ್ಯಾನೊ ಕಾರುಗಳ ಸಂಪೂರ್ಣ ಮಾಹಿತಿ

Nano Car Catch Fire
ಟಾಟಾ ಮೋಟರ್ಸ್ ಕಂಪನಿಯ ನ್ಯಾನೊ ಕಾರುಗಳು ಜನರಲ್ಲಿ ಬಹುನಿರೀಕ್ಷೆಯನ್ನು ಹುಟ್ಟಿಹಾಕಿತ್ತು. ಆದರೆ ಅದು ತನ್ನ ಫೀಚರ್, ಸಣ್ಣಗಾತ್ರ, ಅಗ್ಗದ ಬೆಲೆಗಿಂತ ಹೆಚ್ಚು ಸುದ್ದಿ ಮಾಡಿದ್ದು ಅದರ ಬೆಂಕಿಯಿಂದ. ನ್ಯಾನೊಗ್ನಿಗೆ ಸಿಲುಕಿ ನ್ಯಾನೊ ಮಾರಾಟ ಕೆಲವು ನೂರಕ್ಕೆ ಇಳಿದಿದೆ.

ಇಲ್ಲಿವರೆಗೆ ಸುಮಾರು ಹತ್ತು ನ್ಯಾನೊ ಕಾರುಗಳಲ್ಲಿ ಬೆಂಕಿ ಕಾಣಿಸಿಕೊಂಡದ್ದು ಸುದ್ದಿಯಾಗಿದೆ. ಅದರಲ್ಲಿ ಒಂದು ಕಾರು ದೇಶದ ಗಡಿದಾಟಿ ಉರಿದಿದೆ. ಇಲ್ಲಿವರೆಗೆ ಎಲ್ಲೆಲ್ಲಿ? ಎಷ್ಟು ನ್ಯಾನೊ ಕಾರುಗಳು ಉರಿದಿವೆ. ಉರಿದ ಹತ್ತು ನ್ಯಾನೊ ಕಾರುಗಳಲ್ಲಿ 7 ಕಾರುಗಳ ಪೋಸ್ಟ್ ಮಾರ್ಟಂ ರಿಪೋರ್ಟ್ ಇಲ್ಲಿದೆ.

* ಕೆಲವು ದಿನದ ಹಿಂದೆ ತಮಿಳುನಾಡಿನ ಚೆನ್ನೈನಲ್ಲಿ ನ್ಯಾನೊ ಕಾರೊಂದು ಉರಿದಿದೆ. ಇದರ ವಿಡಿಯೋ ಯುಟ್ಯೂಬ್ ನಲ್ಲಿ ಹರಿದಾಡುತ್ತಿದೆ. ಬೆಂಕಿ ನ್ಯಾನೊ ಕಾರಿನ ಎಂಜಿನ್ ಭಾಗದಲ್ಲಿ ಕಾಣಿಸಿಕೊಂಡಿತ್ತು. ಸೆಪ್ಟಂಬರ್ 2011ರ ಮೊದಲ ವಾರದಲ್ಲಿ ಈ ಘಟನೆ ಸಂಭವಿಸಿದೆ.

* ಶ್ರೀಲಂಕಾಕ್ಕೆ ರಫ್ತುಗೊಂಡ ನ್ಯಾನೊ ಕಾರೊಂದು ಕೊಲಂಬೊ ಪ್ರದೇಶದಲ್ಲಿ ಉರಿದಿದೆ. ಅಲ್ಲಿ ಇದು ನ್ಯಾನೊ ಟ್ಯಾಕ್ಸಿಯಾಗಿ ಜನಪ್ರಿಯಗೊಂಡಿದೆ. ಟ್ಯಾಕ್ಸಿ ಚಾಲಕ ಕಾರು ಸ್ಟಾರ್ಟ್ ಮಾಡುವ ಸಂದರ್ಭದಲ್ಲಿ ಎಂಜಿನ್ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದು ಕೂಡ ಸೆಪ್ಟಂಬರ್(2011) ತಿಂಗಳ ಮೊದಲ ವಾರದಲ್ಲಿ. ತನಿಖೆಗಾಗಿ ಟಾಟಾ ಅಧಿಕಾರಿಗಳು ಶ್ರೀಲಂಕಾಕ್ಕೆ ಪ್ರಯಾಣ ಬೆಳೆಸಿದ್ದಾರೆ.

* 2011ರ ಸೆಪ್ಟಂಬರ್ 02 ಅಂದರೆ ಈ ತಿಂಗಳ ಆರಂಭದಲ್ಲಿ ಗುಜರಾತಿನ ಆನಂದ್ ಎಂಬಲ್ಲಿ ನ್ಯಾನೊ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೆಲವೇ ನಿಮಿಷಗಳಲ್ಲಿ ಪೂರ್ತಿ ಕಾರು ಸುಟ್ಟು ಹೋಗಿದೆ. ಇಲ್ಲೂ ಕೂಡ ಎಂಜಿನ್ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಗುಜರಾತಿನ ವಿಮಾ ಉದ್ಯೋಗಿ ಹಪ್ಸಾ ಮೊಹಮ್ಮದ್ ಇಕ್ಬಾಲ್ ಹೆಸರಿನಲ್ಲಿ ರಿಜಿಸ್ಟ್ರೇಶನ್ ಮಾಡಲಾಗಿದೆ. ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಾಗ ಆಕೆ ಚಾಲನೆ ಮಾಡುತ್ತಿರಲಿಲ್ಲ. ಆಕೆಯ ಪತಿ ಡ್ರೈವ್ ಮಾಡುತ್ತಿದ್ದ. ಕಾರಿನಲ್ಲಿ ಒಟ್ಟು 5 ಜನರು ಪ್ರಯಾಣಿಸುತ್ತಿದ್ದರು.

* ಅಹ್ಮದಾಬಾದ್ ನಲ್ಲಿ 2011ರ ಮಾರ್ಚ್ ತಿಂಗಳಲ್ಲಿ ನ್ಯಾನೊ ಕಾರೊಂದು ಬೆಂಕಿಗೆ ಆಹುತಿಯಾಗಿದೆ. ಕಾರಿನ ಮಾಲಿಕ ವಿಪುಲ್ ಜಾನಿ ನ್ಯಾನೊ ಡ್ರೈವ್ ಮಾಡುತ್ತಿದ್ದರು.

* 2010 ಆಗಸ್ಟ್ 27ರಂದು ರಾಜಧಾನಿ ನವದೆಹಲಿಯ ಮುಖ್ಯರಸ್ತೆಯಲ್ಲಿ ನ್ಯಾನೊ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇಲ್ಲೂ ಕೂಡ ಎಂಜಿನ್ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೆಲವೇ ನಿಮಿಷಗಳಲ್ಲಿ ಪೂರ್ತಿ ಕಾರು ಬೆಂಕಿಯಲ್ಲಿ ಸುಟ್ಟು ಹೋಗಿತ್ತು.

* 2010ರ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ವಡೊದರ ರಾಷ್ಟ್ರೀಯ ಹೆದ್ದಾರಿ ಎಂಟರಲ್ಲಿ ಒಂದು ನ್ಯಾನೊ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇಲ್ಲೂ ಎಂಜಿನ್ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

* 2010ರ ಮಾರ್ಚ್ ಕೊನೆಯ ವಾರದಲ್ಲಿ ಮುಂಬೈನಲ್ಲಿ ನ್ಯಾನೊ ಕಾರು ಬೆಂಕಿಗಾಹುತಿಯಾಗಿದೆ. ಇದು ಮೊದಲ ಘಟನೆ. ಗ್ರಾಹಕರೊಬ್ಬರು ಶೋರೂಂನಿಂದ ಮನೆಗೆ ಹೊಸ ನ್ಯಾನೊ ಕಾರನ್ನು ಕೊಂಡೊಯ್ಯುವಾಗ ಈ ಘಟನೆ ನಡೆದಿದೆ. ಬೆಂಕಿ ಕಾರಿನಲ್ಲಿ ಆವರಿಸಿಕೊಂಡಿರುವುದನ್ನು ನೋಡಿ ಚಾಲಕ ಮತ್ತು ಸಹಪ್ರಯಾಣಿಕರು ಕಾರಿನಿಂದ ಜಂಪ್ ಮಾಡಿದ್ದರಂತೆ!

More from DriveSpark

Article Published On: Friday, September 9, 2011, 13:21 [IST]
English summary
It appears to be a very bad week for the Tata Nano. Just after reports of two Nanos catching fire in Anand, Gujarat and in Colombo, Sri Lanka we are getting news about one getting burnt down in Chennai. Do you know how much nano cars catch fire. Here is full details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+