ಹಳೆ ಕಬ್ಣ ಹೊಸ ಹೆಸರು: ಮಹೀಂದ್ರ ವೆರಿಟೊ

Mahindra Verito
ಭಾರತದ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಸ್ಪೆಷಲಿಷ್ಟ್ ಮಹೀಂದ್ರ ಕಂಪನಿಯು "ಲೊಗಾನ್" ಮೂಲಕ ಸಣ್ಣಕಾರು ಕ್ಷೇತ್ರಕ್ಕೆ ಪದಾರ್ಪಣೆ ಮಾಡಿತ್ತು. ಇದಕ್ಕಾಗಿ ರೆನಾಲ್ಟ್ ಕಂಪನಿಯೊಂದಿಗೆ ಮೈತ್ರಿ ಮಾಡಿತ್ತು.

ಆದರೆ ಕಂಪನಿಯ ನಿರೀಕ್ಷೆಯಂತೆ ಲೊಗಾನ್ ಮಾರಾಟ ಕಾಣಲಿಲ್ಲ. ಕಂಪನಿಯ ಮತ್ತೊಂದು ಕಾರು ಟ್ಯಾಕ್ಸಿಯಾಗಿ ಹೆಸರು ಕೆಡಿಸಿಕೊಂಡಿತ್ತು. ಹಲವು ಕಾರಣಗಳಿಂದ ಮಹೀಂದ್ರ ಮತ್ತು ರೆನಾಲ್ಟ್ ಮೈತ್ರಿ ಕೊನೆಗೊಂಡಿತ್ತು.

ನಂತರ ಕಂಪನಿಯು ವೆರಿಟೊ ಹೆಸರಿನಲ್ಲಿ ಸಣ್ಣಕಾರು ಮಾರಾಟ ಮಾಡಲು ನಿರ್ಧರಿಸಿತು. ಮಹೀಂದ್ರ ವೆರಿಟೊ ಕಾರು ರೆನಾಲ್ಟಿನ 1.5 ಲೀಟರಿನ ಸಿಆರ್ಡಿಐ ಡೀಸೆಲ್ ಎಂಜಿನ್ ಮತ್ತು 1.4 ಲೀಟರಿನ ಪೆಟ್ರೊಲ್ ಡೀಸೆಲ್ ಎಂಜಿನ್ ಉಳಿಸಿಕೊಂಡಿತ್ತು. ಕಂಪನಿ ಈಗಲೂ ಯಾವುದೇ ಹ್ಯಾಚ್ ಬ್ಯಾಕ್ ಹೊರತರುವ ಕುರಿತು ಪ್ರಕಟಿಸಿಲ್ಲ.

ನೂತನ ವೆರಿಟೊ ಕಾರು ಕಂಪನಿಯ ನಿರೀಕ್ಷೆ ಮೀರಿ ಜನಪ್ರಿಯಗೊಂಡಿತ್ತು. ಈ ಕಾರಿನ ಆರಂಭಿಕ ದರ 5.34 ಲಕ್ಷ ರುಪಾಯಿ. ಇದು ಮಹೀಂದ್ರ ಕಂಪನಿಯ ಅಗ್ಗದ ಕಾರು ಕೂಡ ಹೌದು(ರೇವಾ ಹೊರತುಪಡಿಸಿ). ಈ ಕಾರು ಆರಾಮದಾಯಕ ಸೀಟ್ ಮತ್ತು ಆಕರ್ಷಕ ಕ್ಯಾಬಿನ್ ನಿಂದ ಗಮನ ಸೆಳೆಯುತ್ತದೆ. ಹಳೆಯ ಆವೃತ್ತಿಗೆ ಹೋಲಿಸಿದರೆ ಹೆಸರು ಹೊರತು ಪಡಿಸಿ ಹೊಸದೇನು ಕಾಣುವುದಿಲ್ಲ.

ಇದರ ಇಂಧನ ದಕ್ಷತೆ ಅತ್ಯುತ್ತಮವಾಗಿದೆ. ಡೀಸೆಲ್ ಆವೃತ್ತಿ ಪ್ರತಿಲೀಟರ್ ಗೆ 19.3 ಕಿ.ಮೀ. ಮೈಲೇಜ್ ನೀಡುತ್ತದೆ. ಕಂಪನಿಯು ಸಬ್ ಕಾಂಪ್ಯಾಕ್ಟ್ ವೆರಿಟೊ ಕಾರೊಂದನ್ನು ಹೊರತರುವುದಾಗಿಯೂ ಹೇಳಿದೆ. ಜೊತೆಗೆ ದುಬಾರಿ ದರದ ಪ್ರೀಮಿಯಂ ವೆರಿಟೊ ಆವೃತ್ತಿಯನ್ನು ಹೊರತರುವುದಾಗಿಯೂ ಕಂಪನಿ ಹೇಳಿದೆ.

ಮುಂದಿನ ಪುಟದಲ್ಲಿ ಕೆಲವು ಕಾರುಗಳಿವೆ. ಮಿಸ್ ಮಾಡಿಕೊಳ್ಳಬೇಡಿ.

More from DriveSpark

Article Published On: Saturday, September 10, 2011, 16:05 [IST]
English summary
Mahindra Verito: New Name Same Performance. The Verito has had a better than expected run in the market after it was rebranded as a Mahindra. With a starting price of Rs.5.34 lakhs, the Verito is the cheapest model in the Mahindra model line-up.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+