ಕಾಂಪ್ಯಾಕ್ಟ್ ಸೆಡಾನ್ ಬೆಸ್ಟ್ ಕಾರು ಟಾಟಾ ಇಂಡಿಗೊ

ಅದಕ್ಕಾಗಿ ಕಂಪನಿಯು ಟಾಟಾ ಇಂಡಿಗೊ ಎಂಬ ಕಾಂಪ್ಯಾಕ್ಟ್ ಸೆಡಾನ್ ಕಾರನ್ನು ಪರಿಚಯಿಸಿತ್ತು. ಇದು ಭಾರತದಲ್ಲಿ ದೊರಕುವ ಅಗ್ಗದ ಸೆಡಾನ್ ಕಾರಾಗಿದೆ.
ಇದರ ಆರಂಭಿಕ ದರ 4.99 ಲಕ್ಷ ರು. ಅಂದ್ರೆ ಸುಮಾರು 5 ಲಕ್ಷ ರು. ಒಳಗಡೆ ಇಂಡಿಗೊ ಎಂಟ್ರಿ ಲೆವೆಲ್ ಜಿಎಲ್ಎಸ್ ಆವೃತ್ತಿ ದೊರಕುತ್ತದೆ. ಆದರೆ ಇಂಡಿಗೊ ಎಲ್ಎಕ್ಸ್ ಡಿಕೊರ್ ಕಾರಿಗೆ ಸುಮಾರು 6.23 ಲಕ್ಷ ರುಪಾಯಿ ಕೊಡಬೇಕು.
ಕಾರಿನ ದರ ಕಡಿಮೆಯಾದರೂ ಸ್ಥಳಾವಕಾಶದಲ್ಲಿ ಕಡಿಮೆಯಾಗಿಲ್ಲ. ಆದರೆ ಕಂಪನಿಯು ಇಂಟಿರಿಯರ್ ಗುಣಮಟ್ಟ ಹೆಚ್ಚು ಅಭಿವೃದ್ಧಿಪಡಿಸಿಲ್ಲ. ಹಲವು ವರ್ಷಗಳಿಂದ ಒಂದೇ ರೀತಿಯ ಇಂಟಿರಿಯರ್ ವಿನ್ಯಾಸಕ್ಕೆ ಕಂಪನಿ ಅಂಟಿಕೊಂಡಿದೆ ಅನ್ನೋದನ್ನು ಇಂಡಿಗೊ ಸ್ಪಷ್ಟಪಡಿಸುತ್ತದೆ.
ಟಾಟಾ ಇಂಡಿಗೊ ಅತ್ಯುತ್ತಮ ಮೈಲೇಜ್ ನೀಡುವ ಕಾರು ಕೂಡ ಹೌದು. ಇದು ನಗರದ ರಸ್ತೆಗಿಳಲ್ಲಿ ಪ್ರತಿಲೀಟರಿಗೆ 15 ಕಿ.ಮೀ. ಮತ್ತು ಹೆದ್ದಾರಿ ರಸ್ತೆಗಳಲ್ಲಿ ಪ್ರತಿಲೀಟರ್ ಗೆ 20 ಕಿ.ಮೀ. ಮೈಲೇಜ್ ನೀಡುತ್ತದೆ. ಇನ್ಯಾವ ಕಾರಿದೆ? ಮುಂದೆ ನೋಡಿ


Click it and Unblock the Notifications








