ಪೊಲೊ ದೊಡ್ಡಣ್ಣ ಫೋಕ್ಸ್ ವ್ಯಾಗನ್ ವೆಂಟೊ

Volkswagen Vento
ಜರ್ಮನಿಯ ಕಾರು ಕಂಪನಿ ಫೋಕ್ಸ್ ವ್ಯಾಗನ್ ದುಬಾರಿ ಕಾರುಗಳ ಮೂಲಕ ಭಾರತ ಪ್ರವೇಶಿಸಿತ್ತು. ಆದರೆ ಇಲ್ಲಿನ ಬೃಹತ್ ಮಧ್ಯಮವರ್ಗದ ಬೇಡಿಕೆ ಕಂಡು ಸಣ್ಣ ಕಾರು ಮತ್ತು ಕಾಂಪ್ಯಾಕ್ಟ್ ಕಾರುಗಳನ್ನು ಪರಿಚಯಿಸಿತ್ತು. ಪೊಲೊ ಹ್ಯಾಚ್ ಬ್ಯಾಕ್ ಕಾರು ಹೆಚ್ಚು ಬೇಡಿಕೆಯನ್ನು ಪಡೆದುಕೊಂಡಿತ್ತು. ಜೊತೆಗೆ ಜರ್ಮನಿಯ ಗುಣಮಟ್ಟ ಮತ್ತು ಆಕರ್ಷಕತೆಯ ಫೀಚರುಗಳೊಂದಿಗೆ ಬಂದ ಕಾಂಪ್ಯಾಕ್ಟ್ ವೆಂಟೊ ಕೂಡ ಹೆಚ್ಚಿನವರಿಗೆ ಇಷ್ಟವಾಯಿತು.

ಹೀಗಾಗಿ ಅತ್ಯುತ್ತಮ ಕಾಂಪ್ಯಾಕ್ಟ್ ಕಾರುಗಳಲ್ಲಿ ವೆಂಟೊಗೆ ಸ್ಥಾನ ನೀಡಲೇಬೇಕು. ಪೊಲೊ-ವೆಂಟೊ ಕಥೆ ಸ್ವಿಫ್ಟ್ ಮತ್ತು ಡಿಝೈರ್ ಕಥೆಯಂತೆ ಇದೆ.

ಪೊಲೊ ಕಾರ್ಯಕ್ಷಮತೆ ಕಾರಣದಿಂದ ಹೊಸ ವೆಂಟೊ ರಸ್ತೆಗಿಳಿಯುವ ಮುನ್ನವೇ ಸಾಕಷ್ಟು ಹೈಪ್ ಕ್ರೀಯೆಟ್ ಮಾಡಿತ್ತು. ಕೆಲವು ಕಾಂಪ್ಯಾಕ್ಟ್ ಕಾರುಗಳಲ್ಲಿ ಹಿಂಭಾಗದಲ್ಲಿ ಸ್ಥಳಾವಕಾಶ ಕಡಿಮೆ. ಆದರೆ ವೆಂಟೊದಲ್ಲಿ ಆ ಸಮಸ್ಯೆ ಇಲ್ಲ. ಇದರೊಂದಿಗೆ ಪ್ರೀಮಿಯಂ ಸೆಡಾನ್ ಕಾರುಗಳಲ್ಲಿರುವ ಆಕರ್ಷಕ ಫೀಚರುಗಳೆಲ್ಲ ವೆಂಟೊದಲ್ಲಿ ಇರುವುದು ಕೂಡ ಪ್ಲಸ್ ಪಾಯಿಂಟ್.

ವೆಂಟೊ ರೈಡ್ ಗುಣಮಟ್ಟ ಮತ್ತು ಹ್ಯಾಂಡ್ಲಿಂಗ್ ಅತ್ಯುತ್ತಮವಾಗಿದೆ. ಈ ಕಾರು ಪೆಟ್ರೊಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ದೊರಕುತ್ತದೆ. ಪೆಟ್ರೊಲ್ ವೆಂಟೊ ಆವೃತ್ತಿಗಳ ದರ 8.03 ಲಕ್ಷ ರು.ನಿಂದ 10.48 ಲಕ್ಷ ರು.ವರೆಗಿದೆ. ವೆಂಟೊ ಡೀಸೆಲ್ ದರ 9.38 ಲಕ್ಷ ರು.ನಿಂದ 10.76 ಲಕ್ಷ ರು.ವರೆಗಿದೆ.

ವೆಂಟೊ ಬೇಡವೆಂದು ಭಾವಿಸಿದರೆ ಮುಂದಿನ ಪುಟದ ಕಾರಿನತ್ತ ಕಣ್ಣು ಹಾಯಿಸಬಹುದು.

More from DriveSpark

Article Published On: Saturday, September 10, 2011, 15:02 [IST]
English summary
Best compact sedan Volkswagen Vento. Vento is the availability of both petrol and diesel engines. The petrol variants are priced between Rs.8.03 lakhs and Rs.10.48 lakhs. The diesel variants are a touch expensive at Rs.9.38 lakhs and 10.76 lakhs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+