ಪೆಟ್ರೋಲ್ ದರ ಹೆಚ್ಚಳ: ಡೀಸೆಲ್ ಬಳಸುವಿರಾ? ಎಚ್ಚರ!!

Diesel car killer ozone
ನವದೆಹಲಿ, ಸೆ 16: ಪೆಟ್ರೋಲ್ ದರ ಹೆಚ್ಚಳವಾಗಿರುವುದು ಡೀಸೆಲ್ ವಾಹನಗಳ ಬೇಡಿಕೆಯನ್ನು ಇನ್ನಷ್ಟು ಹೆಚ್ಚಿಸಲಿದೆ ಎಂದು ವಿಜ್ಞಾನ ಮತ್ತು ಪರಿಸರ ಎನ್ ಜಿಓ ಕೇಂದ್ರ(ಸಿಎಸ್ಇ) ಅಭಿಪ್ರಾಯಪಟ್ಟಿದೆ. ಇದರಿಂದಾಗಿ ನಗರ ಪ್ರದೇಶದಲ್ಲಿನ ಆರೋಗ್ಯ ಮತ್ತು ಗಾಳಿಯ ಪರಿಶುದ್ಧತೆಗೆ ಇನ್ನಷ್ಟು ಪೆಟ್ಟು ಬೀಳಲಿದೆ ಎಂದು ಸಿಎಸ್ಇ ಆತಂಕ ವ್ಯಕ್ತಪಡಿಸಿದೆ.

"ಸರಕಾರ ಮತ್ತೆ ಪೆಟ್ರೋಲ್ ದರ ಹೆಚ್ಚಿಸಿದೆ. ಸಹಜವಾಗಿಯೇ ಡೀಸೆಲ್ ಬಳಕೆ ಹೆಚ್ಚಳಿದೆ. ಆದರೆ ಇದರಿಂದ ಸಾರ್ವಜನಿಕ ಆರೋಗ್ಯದ ಮೇಲೆ ಉಂಟಾಗುವ ಪರಿಣಾಮವನ್ನು ಸರಕಾರ ಮರೆತಿದೆ. ಇದು ಓಝೋನ್ ಪದರಕ್ಕೂ ಹಾನಿ ಉಂಟು ಮಾಡಲಿದೆ" ಎಂದು ಸಿಎಸ್ಇ ವಾಯುಮಾಲಿನ್ಯ ವಿಭಾಗದ ನಿರ್ದೇಶಕಿ ಅನುಮಿತ ರಾಯ್ ಚೌಧರಿ ಅಭಿಪ್ರಾಯಪಟ್ಟಿದ್ದಾರೆ.

ಮೂರು ತಿಂಗಳ ನಂತರ ಸರಕಾರವು ಪೆಟ್ರೊಲ್ ದರಗಳನ್ನು 3.14 ರುಪಾಯಿಯಷ್ಟು ಹೆಚ್ಚಿಸಿದೆ. ಇದರಿಂದ ಬೆಂಗಳೂರಿನಲ್ಲಿ ಪೆಟ್ರೋಲ್ ದರ 74 ರು. ದಾಟಿದೆ. ಇದೀಗ ದೇಶದ ಒಟ್ಟಾರೆ ಕಾರು ಮಾರುಕಟ್ಟೆಯಲ್ಲಿ ಡೀಸೆಲ್ ಕಾರು ಮಾರಾಟ ಶೇಕಡ 36ರಷ್ಟಿದೆ. ಶೀಘ್ರದಲ್ಲಿ ಇದು ಶೇ. 50ಕ್ಕೆ ತಲುಪುವ ನಿರೀಕ್ಷೆಯಿದೆ.

"ಈಗಾಗಲೇ ಡೀಸೆಲ್ ಕಾರುಗಳ ಪಾಲು ರಸ್ತೆಯಲ್ಲಿ ಹೆಚ್ಚಿದೆ. ಅಗ್ಗದ ಡೀಸೆಲ್ ಕಾರು ಸಾರ್ವಜನಿಕ ಆರೋಗ್ಯ ಮಾತ್ರವಲ್ಲದೇ ಹಲವು ವ್ಯತಿರಿಕ್ತ ಪರಿಣಾಮ ಬೀರಲಿದೆ" ಎಂದು ಅವರು ಹೇಳಿದ್ದಾರೆ.

ದೇಶದ ಒಟ್ಟಾರೆ ಡೀಸೆಲ್ ನಲ್ಲಿ ಶೇಕಡ 15ರಷ್ಟನ್ನು ಕಾರುಗಳು ಬಳಸುತ್ತಿವೆ. ಬಸ್ ಮತ್ತು ಕೃಷಿಗೆ ಬಳಸುವ ಡೀಸೆಲ್ ಪ್ರಮಾಣ ಶೇಕಡ 12ರಷ್ಟು, ಉದ್ಯಮಗಳಿಗೆ ಮತ್ತು ರೈಲ್ವೆಗೆ ತಲಾ ಶೇಕಡ 6ರಷ್ಟು ಡೀಸೆಲ್ ಬಳಸಲಾಗುತ್ತದೆ. ಇಲ್ಲಿ ಕಾರುಗಳು ಹೆಚ್ಚು ಡೀಸೆಲ್ ಬಳಕೆ ಮಾಡುವುದು ಆತಂಕ ತರುವ ವಿಷಯವಾಗಿದೆ" ಎಂದು ಸಿಎಸ್ಇ ಆತಂಕ ವ್ಯಕ್ತಪಡಿಸಿದೆ.

More from DriveSpark

Article Published On: Friday, September 16, 2011, 11:23 [IST]
English summary
Petrol Price hike will push diesel car demands. And don't remember Petrol Price hike will affect environment and Public health. NGO Center for Science and Environment Said.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+