ರಿಲಯೆನ್ಸ್ ಮುಖೇಶ್ ಅಂಬಾನಿ ಮೆಬಾಕ್ ಕಹಾನಿ

Posted By:

Next »

« Previous

ದೇಶದ ಪವರ್ ಫುಲ್ ಅಥವಾ ಶಕ್ತಿಶಾಲಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಲ್ಲಿ ಮುಖೇಶ್ ಅಂಬಾನಿಗೆ ಎರಡನೇ ಸ್ಥಾನ. ರಿಲಯೆನ್ಸ್ ಇಂಡಸ್ಟ್ರಿಸ್ ಚೇರ್ಮನ್, ಸಿಇಒ ಮುಖೇಶ್ ಇತ್ತೀಚೆಗೆ ಕಟ್ಟಿದ ಅರಮನೆಯೇ ಅವರ ಐಷಾರಾಮಿ ಜೀವನಕ್ಕೆ ಸಾಕ್ಷಿ.

ಎರಡು ಶತಕೋಟಿ ಡಾಲರ್ ವೆಚ್ಚದ ಮುಖೇಶ್ ಮನೆಯ ಗ್ಯಾರೇಜಿಗೆ ಅಗ್ಗದ ಕಾರುಗಳು ಹಿಡಿಸುವುದು ಸಾಧ್ಯವೇ? ಸಾಧ್ಯನೇ ಇಲ್ಲ. ಅವರಲ್ಲಿದ್ದರೆ ಕೋಟಿ ಕೋಟಿ ರುಪಾಯಿ ಮೌಲ್ಯದ ಕಾರುಗಳೇ ಇರಬಹುದು ಅಂತ ನೀವು ಊಹಿಸಿದರೆ ನಿಮ್ಮ ಊಹೆ ಸರಿ. ಅವರಿಗೆ ವೇಗದ ಕಾರುಗಳು ಮತ್ತು ಹಾರುವ ಜೆಟ್ ವಿಮಾನಗಳೆಂದರೆ ತುಂಬಾ ಇಷ್ಟವಂತೆ.

ಮುಖೇಶ್ ಬಳಿಯಿರುವ ಕಾರುಗಳಲ್ಲಿ ಮೂರು ಕಾರುಗಳು ಹೆಚ್ಚು ಗಮನ ಸೆಳೆಯುತ್ತವೆ. ಅವರಲ್ಲಿ ಮೆಬಾಕ್ 62 ಎಂಬ ದುಬಾರಿ, ಐಷಾರಾಮಿ, ಅತ್ಯಧಿಕ ಅಶ್ವಶಕ್ತಿಯ ಕಾರಿದೆ. ಜೊತೆಗೆ ಒಂದು ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್ ಕಾರು ಮತ್ತು ಒಂದು ಕಪ್ಪು ಬಣ್ಣದ ಮರ್ಸಿಡಿಸ್ ಬೆಂಝ್ ಎಸ್ಎಲ್500 ಕಾರಿದೆ.

ಸಣ್ಣ ಅರಮನೆ: ಮೆಬಾಕ್ 62 ಎಸ್ ಕಾರನ್ನು ಪುಟ್ಟ ಅರಮನೆ ಎಂದು ಕರೆಯಬಹುದು. ಯಾಕೆಂದರೆ ಅದು ಅಷ್ಟೊಂದು ಐಷಾರಾಮಿ ವಿಶೇಷತೆಗಳಿರುವ ಕಾರು. ಇದರ ಇಂಟಿರಿಯರ್ ವಿನ್ಯಾಸ ಮುಖೇಶ್ ಅಂಬಾನಿಯಂತಹ ಕುಬೇರಿಗಾಗಿ ವಿಶೇಷವಾಗಿ ರೂಪಿಸಲಾಗಿದೆ. ಇದು 612 ಅಶ್ವಶಕ್ತಿ ನೀಡುವ ವಿ12 ಟ್ವಿನ್ ಟರ್ಬೊ ಎಂಜಿನ್ ಹೊಂದಿದೆ.

ಸುನೀಲ್ ಮಿತ್ತಲ್, ಅಜೀಂ ಪ್ರೇಮ್ ಜಿ, ವಿಜಯ್ ಮಲ್ಯ ಬಳಿ ಯಾವೆಲ್ಲ ಕಾರುಗಳಿವೆ ಎಂಬ ಕುತೂಹಲವಿದ್ದರೆ ಮುಂದಿನ ಪುಟಕ್ಕೆ ಪ್ರಯಾಣ ಬೆಳೆಸಿರಿ.

Next »

« Previous

English summary
Indian CEOs and Cars: Mukesh Dhirubhai Ambani is India Inc's Second Most Powerful CEO. Mukesh passionate about driving fast cars. He owned a Maybach 62( Price more then 5 crore), a Mercedes-Benz S Class and a black Mercedes-Benz SL500.
Story first published: Thursday, November 3, 2011, 10:15 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark