ಹೊಸ ಫಿಯೆಸ್ಟಾ ಕಾರಿಗೆ 1.25 ಲಕ್ಷ ರು. ಡಿಸ್ಕೌಂಟ್?!

Rs.1.25L Discount On New Fiesta
ಅಮೆರಿಕದ ಕಾರು ತಯಾರಿಕಾ ಕಂಪನಿಯ ಫೋರ್ಡ್ ಫಿಯೆಸ್ಟಾ ಜಾಗತಿಕವಾಗಿ ಫೇಮಸ್ಸು. ಕಂಪನಿ ಇತ್ತೀಚೆಗೆ ಹೊರತಂದ ನೂತನ ಫಿಯೆಸ್ಟಾ ಮಧ್ಯಮ ಗಾತ್ರದ ಸೆಡಾನ್ ಕಾರು ನಿರೀಕ್ಷಿತ ಮಟ್ಟದಲ್ಲಿ ಮಾರಾಟವಾಗಿಲ್ಲವಂತೆ. ಇದೀಗ ಈ ಫಿಯೆಸ್ಟಾ ಕಾರಿಗೆ ಭಾರಿ ಪ್ರಮಾಣದ ದರ ವಿನಾಯಿತಿ ನೀಡಲು ಕಂಪನಿ ಮುಂದಾಗಿದೆ ಎಂದು ಮೂಲಗಳು ಹೇಳಿವೆ.

ಕಂಪನಿಯ ಅಧಿಕೃತ ಪ್ರಕಟಣೆ ಪ್ರಕಾರ ನೂತನ ಫಿಯೆಸ್ಟಾ ಕಾರಿಗೆ 75 ಸಾವಿರ ರುಪಾಯಿ ದರ ವಿನಾಯಿತಿ ನೀಡಲಾಗುತ್ತದೆ. ಆದರೆ ಒಂದು ಮೂಲದ ಪ್ರಕಾರ ಕಂಪನಿಯು ಸುಮಾರು 1.25 ಲಕ್ಷ ರುಪಾಯಿವರೆಗೆ ಡಿಸ್ಕೌಂಟ್ ನೀಡಲಿದೆಯಂತೆ. ಒಟ್ಟಾರೆ ನೂತನ ಫಿಯೆಸ್ಟಾ ಕಾರಿನ ಮಾರಾಟ ಹೆಚ್ಚಿಸುವುದು ಕಂಪನಿಯ ಪ್ರಮುಖ ಆದ್ಯತೆಯಾಗಿದೆ.

ನೂತನ ಫಿಯೆಸ್ಟಾ ರಸ್ತೆಗಿಳಿದ ನಂತರ ಹಲವು ಬಾರಿ ಕಂಪನಿಯು ದರ ವಿನಾಯಿತಿ ನೀಡಿತ್ತು. ನೂತನ ಫಿಯೆಸ್ಟಾದ ಅತ್ಯಧಿಕ ದರವೇ ಇದರ ಮಾರಾಟ ಕಡಿಮೆಯಾಗಲು ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ. ಆದರೂ ನೂತನ ಫಿಯೆಸ್ಟಾ ತನ್ನ ವಿನ್ಯಾಸದಿಂದ, ಆಕರ್ಷಕ ಇಂಟಿರಿಯರ್, ಫೀಚರುಗಳಿಂದ ಮತ್ತು ಕಾರ್ಯಕ್ಷಮತೆಯಿಂದ ಹಲವು ಗ್ರಾಹಕರನ್ನು ಸೆಳೆದಿದೆ.

ಫಿಯೆಸ್ಟಾ ಕ್ಲಾಸಿಕ್ ಸೇರಿದಂತೆ ನೂತನ ಫಿಯೆಸ್ಟಾ ಕಾರಿಗೆ ಕಂಪನಿಯು ಸುಮಾರು 75 ಸಾವಿರ ರುಪಾಯಿ ದರ ವಿನಾಯಿತಿ ನೀಡಿದೆ. ಫೋರ್ಡ್ ಕಂಪನಿಯ ಫಿಯೆಸ್ಟಾ ಮಾರಾಟಕ್ಕೆ ಹೋಂಡಾ ಸಿಟಿ, ಹ್ಯುಂಡೈ ವೆರ್ನಾ, ಫೋಕ್ಸ್ ವ್ಯಾಗನ್ ವೆಂಟೊ, ಸ್ಕೋಡಾ ರಾಪಿಡ್, ಮಾರುತಿ ಸುಜುಕಿ ಡಿಜೈರ್ ಕಾರುಗಳು ಪೈಪೋಟಿ ನೀಡುತ್ತಿವೆ.

ಈ ಎಲ್ಲಾ ಹಿನ್ನಲೆಯಲ್ಲಿ ಫೋರ್ಡ್ ಡೀಲರುಗಳು ಫಿಯೆಸ್ಟಾ ಮಾರಾಟ ಹೆಚ್ಚಿಸಲು ಶತಾಯಗತಾಯ ಪ್ರಯತ್ನಿಸುತ್ತಿವೆ. ಈಗ ಫಿಯೆಸ್ಟಾ ಕಾರುಗಳಿಗೆ ಫೋರ್ಡ್ ಡೀಲರುಗಳು ಸುಮಾರು 1.25 ಲಕ್ಷ ಡಿಸ್ಕೌಂಟ್ ನೀಡುವುದಾಗಿ ವರದಿಗಳು ಹೇಳಿವೆ. ಆದರೆ ಈ ಕುರಿತು ಕಂಪನಿಯು ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.

ಫೋರ್ಡ್ ಫಿಯೆಸ್ಟಾ ಕಾರು ಈಗ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರಕುತ್ತಿದೆ. ಜೊತೆಗೆ ಇದು ಆಟೋಮ್ಯಾಟಿಕ್ ಮತ್ತು ಮ್ಯಾನುಯಲ್ ಟ್ರಾನ್ಸ್ ಮಿಷನ್ ಆಯ್ಕೆಯಲ್ಲಿ ಲಭ್ಯವಿದೆ.

1.25 ಲಕ್ಷ ರು. ಡಿಸ್ಕೌಂಟ್ ಇರುವುದು ಪೆಟ್ರೋಲ್ ಫಿಯೆಸ್ಟಾ ಆವೃತ್ತಿಗೆ ಮಾತ್ರ ಎಂದು ನಮ್ಮ ಆಟೋ ಗುರು ವರದಿ ಮಾಡಿದ್ದಾರೆ. ಈಗ ಪೆಟ್ರೋಲ್ ಆವೃತ್ತಿ ಫಿಯೆಸ್ಟಾ ದರ ಸುಮಾರು 8.23 ಲಕ್ಷ ರುಪಾಯಿಯಿಂದ 9.42 ಲಕ್ಷ ರು. ಆಸುಪಾಸಿನಲ್ಲಿದೆ. ಡೀಸೆಲ್ ಆವೃತ್ತಿ ದರ ಸುಮಾರು 9.27 ಲಕ್ಷ ರು.ನಿಂದ 10.42 ಲಕ್ಷ ರು.ವರೆಗಿದೆ. (ಕನ್ನಡ ಡ್ರೈವ್ ಸ್ಪಾರ್ಕ್)

More from DriveSpark

Article Published On: Tuesday, December 6, 2011, 12:51 [IST]
English summary
Rs.1.25L Discount On New Fiesta: Unofficial Report. Ford is now trying to rectify this by offering a discount of Rs.75.000 on the Fiesta as well as the Fiesta classic. But the pressure of low sales appears to have hit Ford dealers had too. But Ford dealers are now offering discounts up to Rs.1.25 lakhs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+