ಮಹೀಂದ್ರ ಮತ್ತು ಯಮಹಾ ಜಂಟಿ ಉದ್ಯಮ
ದೇಶದ ವಾಹನ ಮಾರುಕಟ್ಟೆಯಲ್ಲಿ ಹೊಸ ವಾಣಿಜ್ಯ ಒಪ್ಪಂದ ನಡೆದಿದೆ. ಮಹೀಂದ್ರ ಆಂಡ್ ಮಹೀಂದ್ರ ಮತ್ತು ಯಮಹಾ ಕಂಪನಿಗಳು ದೇಶದಲ್ಲಿ ಜಂಟಿ ಉದ್ಯಮ

ಪರಸ್ಪರ ತಂತ್ರಜ್ಞಾನ ವಿನಿಮಯ, ಮಾರಾಟ ಹೆಚ್ಚಳಕ್ಕೆ ನೆರವು ಇವೆಲ್ಲ ಜಂಟಿ ಉದ್ಯಮದಲ್ಲಿನ ಪ್ರಮುಖ ವಿಷಯಗಳು. ನೂತನ ಜಂಟಿ ಉದ್ಯಮದಿಂದ ಮಹೀಂದ್ರ ಕಂಪನಿಗೆ ಯಮಹಾ ತಂತ್ರಜ್ಞಾನ ಪಡೆಯಲು ಸಾಧ್ಯವಾಗಲಿದೆ. ಮಹೀಂದ್ರ ಡೀಲರ್ ನೆಟ್ ವರ್ಕ್ ಮೂಲಕ ಯಮಹಾ ಕಂಪನಿಗೆ ಮಾರಾಟ ಹೆಚ್ಚಿಸಲು ಈ ಮೈತ್ರಿ ನೆರವಾಗಲಿದೆ.
ನೂತನ ಜಂಟಿ ಉದ್ಯಮದಲ್ಲಿ ಮಹೀಂದ್ರ ಶೇಕಡ 51ರಷ್ಟು ಮತ್ತು ಯಮಹಾ ಶೇಕಡ 41ರಷ್ಟು ಪಾಲು ಪಡೆಯಲಿದೆ. ಉಳಿದ ಪಾಲು ಮೂರನೇ ಹೂಡಿಕೆದಾರರ ಪಾಲಾಗಲಿದೆ.
ಮಹೀಂದ್ರ ಕಂಪನಿಯ ಡ್ಯೊರೊ, ರೋಡಿಯೊ ಮತ್ತು ಫ್ಲೈಟ್ ಸ್ಕೂಟರ್ ಮತ್ತು ಸ್ಟಾಲಿಯೊ ಬೈಕ್ ಮಾರಾಟವಾಗುತ್ತಿವೆ. ಜಂಟಿ ಉದ್ಯಮದ ನೆರವಿನಿಂದ ಯಮಹಾ ಕೂಡ ದೇಶದಲ್ಲಿ ತನ್ನ ಸ್ವಂತ ಸ್ಕೂಟರ್ ಗಳನ್ನು ದೇಶದ ಮಾರುಕಟ್ಟೆಗೆ ಪರಿಚಯಿಸುವ ನಿರೀಕ್ಷೆಯಿದೆ.


Click it and Unblock the Notifications








