ಐಷಾರಾಮಿ ಕಾರುಗಳಲ್ಲಿ ಆಡಿ ಒಂದು ಕೈ ಮೇಲು!

Posted By:

ದೇಶದಲ್ಲಿನ ಐಷಾರಾಮಿ ಕಾರುಗಳ ಪಟ್ಟಿಯಲ್ಲಿ ಆಡಿ ಹೆಚ್ಚು ಜನಪ್ರಿಯವೆನಿಸಿದೆ. ಈ ಜರ್ಮನಿಯ ಕಾರು ತಯಾರಕ ಕಂಪನಿಯಾದ ಆಡಿ ಶೇಕಡಾ 55ರಷ್ಟು ವೃದ್ಧಿ ದರವನ್ನು ತಲುಪಿದ್ದು, 2012ನೇ ಸಾಲಿನಲ್ಲಿ ಈ ವರೆಗೆ ಒಟ್ಟು 7,267 ಯುನಿಟ್‌ಗಳನ್ನು ಮಾರಾಟ ಮಾಡಿವೆ.

ದೇಶದಲ್ಲಿ ಲಗ್ಷುರಿ ಕಾರು ತಯಾರಕ ಕಂಪನಿಗಳಲ್ಲಿ ಒಂದು ಹೆಜ್ಜೆ ಮುಂದಿಟ್ಟಿರುವ ಆಡಿ ಸದ್ಯದಲ್ಲೇ 8000 ಯುನಿಟ್‌ಗಳನ್ನು ಮಾರಾಟ ಮಾಡುವ ಯೋಜನೆಯನ್ನು ತಲುಪಲಿದೆ. ವಿಶೇಷವೆಂದರೆ ಅಕ್ಟೋಬರ್ ತಿಂಗಳಲ್ಲಿ ಮಾತ್ರವಾಗಿ 850 ಕಾರುಗಳು ಮಾರಾಟವಾಗಿದೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇಕಡಾ 76ರಷ್ಟು ವೃದ್ಧಿಯಾಗಿದೆ.

ಕೆಲವು ಆಕರ್ಷಕ ನೀತಿಗಳನ್ನು ಅನುಸರಿಸಿರುವುದು ಹೊಸ ಗ್ರಾಹಕರನ್ನು ಆಕರ್ಷಿಸಲು ನೆರವಾಗಿದೆ. 'ದಿ ಆಡಿ ವುಮನ್ ಪವರ್ ಡ್ರೈವ್' ಹಾಗೂ ಚೆನ್ನೈನಲ್ಲಿ ಆಡಿ ಸ್ಪೋರ್ಟ್ಸ್‌ಕಾರ್ ಈವೆಂಟ್ ಹಮ್ಮಿಕೊಂಡಿರುವುದು ಗ್ರಾಹಕರು ಮೆಚ್ಚುವಂತೆ ಮಾಡಿದೆ. ಇಂಧನ ದರ ಏರಿಕೆ, ರೂಪಾಯಿ ದರ ಕುಸಿತದ ನಡುವೆಯೂ ಗ್ರಾಹಕರಲ್ಲಿ ಕ್ರೇಜ್ ಸೃಷ್ಟಿ ಮಾಡಲು ಆಡಿ ಇಂಡಿಯಾಕ್ಕೆ ಸಾಧ್ಯವಾಗಿದೆ.

ಇನ್ನು ಜಾಗತಿಕವಾಗಿ ಗಮನಿಸಿದಾಗ ಆಡಿ ಕಂಪನಿಯು ಸೆಪ್ಟೆಂಬರ್ ತಿಂಗಳ ವರೆಗೆ 1,097,540 ಕಾರುಗಳನ್ನು ಮಾರಾಟ ಮಾಡಿವೆ. ಈ ಮೂಲಕ 37.7 ಬಿಲಿಯನ್ ಆದಾಯ ಗಿಟ್ಟಿಸಿಕೊಂಡಿದ್ದು, ಶೇಕಡಾ 16.3ರಷ್ಟು ವೃದ್ಧಿ ದಾಖಲಿಸಿದೆ. 

English summary
The German luxury car maker recorded a 55 percent growth rate by selling 7,267 vehicles from January to October 2012

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark