ಬಿಲ್ ಗೇಟ್ಸ್ ಬಂಧನಕ್ಕೆ ಕಾರಣವಾದ ಕಾರು ಹರಾಜಿಗಿದೆ!
ಜಗತ್ತಿನ ಶ್ರೀಮಂತ, ಮೈಕ್ರೊಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಹಳೆಕಾರು ವಿಯೆನ್ನಾದಲ್ಲಿ ನಡೆಯಲಿರುವ ವಿಂಟೇಜ್ ಕಾರು ಮೇಳದಲ್ಲಿ ಶೀಘ್ರದಲ್ಲಿ ಹರಾಜಾಗಲಿದೆ. ಪೋರ್ಷ್ 911 ಹೆಸರಿನ ಈ ವೇಗದ ಕಾರನ್ನು 1979ರಲ್ಲಿ ಬಿಲ್ ಗೇಟ್ಸ್ ಖರೀದಿಸಿದ್ದರು. ಈ ಕಾರಿನ ದೆಸೆಯಿಂದ ಬಿಲ್ ಗೇಟ್ಸ್ ಒಮ್ಮೆ ಬಂಧನಕ್ಕೂ ಒಳಗಾಗಿದ್ದರು.
ಪೌಲ್ ಅಲೆನ್ ಜೊತೆ ಸೇರಿ ಮೈಕ್ರೊಸಾಫ್ಟ್ ಸ್ಥಾಪಿಸಿದ ಕೆಲವು ವರ್ಷಗಳ ನಂತರ ಈ ಕಾರನ್ನು ಬಿಲ್ ಗೇಟ್ಸ್ ಖರೀದಿಸಿದ್ದರು. ಆಸಕ್ತಿದಾಯಕವೆಂದರೆ ಈಗಿನ ಜಗತ್ತಿನ ಶ್ರೀಮಂತ ವ್ಯಕ್ತಿ ಆ ಸಮಯದಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ್ದರು.
ಒಂದೇ ರಾತ್ರಿ ಮೂರು ಬಾರಿ ವೇಗದ ಮಿತಿ ಮೀರಿ ಚಾಲನೆ ಮಾಡಿದಕ್ಕೆ ಟ್ರಾಫಿಕ್ ಪೊಲೀಸರು ಬಿಲ್ ಗೇಟ್ಸ್ ಗೆ ದಂಡ ವಿಧಿಸಿದ್ದರು. ಅಷ್ಟೇ ಅಲ್ಲ ಅರೇಸ್ಟ್ ಕೂಡ ಮಾಡಿದ್ದರು. ಆಮೇಲೆ ಪೌಲ್ ಅಲೆನ್ ಇವರನ್ನು ಬೇಲ್ ಮೂಲಕ ಬಿಡುಗಡೆ ಮಾಡಿಸಿದ್ರಂತೆ!
1990ರಲ್ಲಿ ಈ ಕಾರನ್ನು ಬಿಲ್ ಗೇಟ್ಸ್ ಮಾರಾಟ ಮಾಡಿದ್ದರು. ನಂತರ ಈ ಕಾರು ಆಸ್ಟ್ರೀಯಾದ ನೊಂದಣಿ ಸಂಖ್ಯೆ ಹೊಂದಿದೆ. ಐರೋಪ್ಯ ಒಕ್ಕೂಟದ ಈ ಕಾರಿನಲ್ಲಿ ಈಗಲೂ ಅಮೆರಿಕದ ಕಾರಿನಲ್ಲಿದ್ದ ಫೀಚರುಗಳೇ ಇರುವುದು ವಿಶೇಷ. ಅಂದ ಹಾಗೆ ಈ ಕಾರನ್ನು ಮುಂದಿನ ಜೂನ್ ಆರನೇ ತಾರೀಖು ವಿಯೆನ್ನಾ ವಿಂಟೇಜ್ ಕಾರುಮೇಳದಲ್ಲಿ ಹರಾಜು ಮಾಡಲಾಗುವುದಂತೆ.
ಬಿಲ್ ಗೇಟ್ಸ್ ಪೋರ್ಷ್ 911 ಹಳೆಕಾರಿಗೆ 3.3 ಲೀಟರ್ ಏರ್ ಕೂಲ್ಡ್ ಪ್ಲಾಟ್ ಸಿಕ್ಸ್ ಎಂಜಿನ್ ಅಳವಡಿಸಲಾಗಿದೆ. ಇತ್ತೀಚೆಗೆ ಇದಕ್ಕೆ ಮರು ಪೇಂಟ್ ಮಾಡಲಾಗಿದೆ. ಈ ಕಾರಿನ ಆರಂಭಿಕ ಹರಾಜು ಮೊತ್ತ ಸುಮಾರು 21 ಸಾವಿರ ಯೆನ್ ಇರಲಿದೆ. ಇದು ಸುಮಾರು 55 ಸಾವಿರ ಡಾಲರ್‌ನಿಂದ 71 ಸಾವಿರ ಡಾಲರ್ ಮೊತ್ತಕ್ಕೆ ಹರಾಜಾಗುವ ನಿರೀಕ್ಷೆಯಿದೆ.


Click it and Unblock the Notifications
