ಫೋರ್ಡ್ ಇಕೊಸ್ಪೋರ್ಟ್: SUV ಮಾರುಕಟ್ಟೆಯಲ್ಲಿ ಬಿರುಗಾಳಿ

Ford EcoSport – Compact, Stylish and Affordable
ದೇಶದ ರಸ್ತೆಗೆ ಈ ವರ್ಷ ಹಲವು ಸ್ಪೋರ್ಟ್ ಯುಟಿಲಿಟಿ ವೆಹಿಕಲುಗಳು ಆಗಮಿಸಲಿವೆ. ಇದರಲ್ಲಿ ಫೋರ್ಡ್ ಕಂಪನಿಯ ಇಕೊಸ್ಪೋರ್ಟ್ ಕೂಡ ಪ್ರಮುಖ. ಸದ್ಯ ಲಭ್ಯವಿರುವ ಮಾಹಿತಿಗಳನ್ನು ಜೋಡಿಸಿ ಪುಟ್ಟ ಇಕೊಸ್ಪೋರ್ಟ್ ವಿಮರ್ಶೆ ಇಲ್ಲಿ ನೀಡಲಾಗಿದೆ.

ಫೋರ್ಡ್ ಕಂಪನಿಯು ಇತ್ತೀಚೆಗೆ ದೆಹಲಿ ವಾಹನ ಜಾತ್ರೆಯಲ್ಲಿ ಇಕೊಸ್ಪೋರ್ಟ್ ಎಂಬ ಸಣ್ಣ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಅನಾವರಣ ಮಾಡಿತ್ತು. ಇದು ಜಾಗತಿಕ ಕಾರು ಪ್ಲಾಟ್ ಫಾರ್ಮ್ ನಲ್ಲಿ ಬಂದಿರುವ ಕಂಪನಿಯ ಎರಡನೇ ಕಾರು. ಈ ಕಾರನ್ನು ಭಾರತ ಮತ್ತು ಬ್ರೆಝಿಲ್ ಮುಂತಾದ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗಾಗಿ ಕಂಪನಿ ವಿಶೇಷವಾಗಿ ವಿನ್ಯಾಸ ಮಾಡಿದೆ. ಇದು ಲೈಫ್ ಸ್ಟೈಲ್ ಸ್ಪೋರ್ಟ್ ಯುಟಿಲಿಟಿ ವೆಹಿಕಲ್.

ಫಿಯೆಸ್ಟಾ ಸೆಡಾನ್ ಕಾರು ಪ್ಲಾಟ್ ಫಾರ್ಮ್ ನಲ್ಲಿಯೇ ನೂತನ ಕಾರನ್ನು ಅಭಿವೃದ್ಧಿಪಡಿಸಲಾಗಿದೆ. ಆದರೆ ವಿನ್ಯಾಸ, ಕಾರ್ಯಕ್ಷಮತೆ ಮತ್ತು ಪರ್ಸನಾಲಿಟಿ ವಿಷ್ಯದಲ್ಲಿ ಇವೆರಡು ಕಾರುಗಳ ನಡುವೆ ಸಾಕಷ್ಟು ಭಿನ್ನತೆ ಇದೆ. ಇಕೊಸ್ಪೋರ್ಟ್ ಕಾರನ್ನು ಕೇವಲ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ, ಅಡ್ವಾನ್ಸ್ ಟೆಕ್ನಾಲಜಿಯಲ್ಲಿ ಹೊರತರಲಾಗಿದೆ.

ನೂತನ ಇಕೊಸ್ಪೋರ್ಟ್ ಕಾರು ಟರ್ಬೊಚಾರ್ಜ್ ಮತ್ತು ಡೈರೆಕ್ಟ್ ಇಂಜೆಕ್ಷನ್ ಟೆಕ್ನಾಲಜಿಸ್ ಮೂಲಕ ಬಂದಿದೆ. ಇದು ಶೇಕಡ 20ರಷ್ಟು ಕಡಿಮೆ ಇಂಧನ ಬಳಕೆ ಮಾಡುತ್ತದೆ. ಹಳೆಯ 1.6 ಲೀಟರಿನ ಪೆಟ್ರೋಲ್ ಎಂಜಿನಿನಷ್ಟೇ ಪವರ್ ನೀಡುವ ಡೀಸೆಲ್ ಎಂಜಿನ್ ಇದಾಗಿದೆ ಎಂದು ಕಂಪನಿ ಹೇಳಿದೆ.

ನೂತನ ಇಕೊಸ್ಪೋರ್ಟ್ ದರ ಫಿಯೆಸ್ಟ್ ದರದ ಆಸುಪಾಸಿನಲ್ಲಿರಲಿದೆ. ಇಕೊಸ್ಪೋರ್ಟ್ ಕಾರಿನ ದರ ಸುಮಾರು 10 ಲಕ್ಷ ರು. ಆಸುಪಾಸಿನಲ್ಲಿರುವ ನಿರೀಕ್ಷೆಯನ್ನು ಮೂಲಗಳು ವ್ಯಕ್ತಪಡಿಸಿವೆ. ಹೊಸ ಇಕೊಸ್ಪೋರ್ಟ್ ಕಾರು ನಾಲ್ಕುಮೀಟರಿಗಿಂತ ಕಡಿಮೆ ಉದ್ದದ ಕೆಟಗರಿಯಲ್ಲಿ ಬಂದಿದೆ. ನಾಲ್ಕು ಮೀಟರಿಗಿಂತ ಕಡಿಮೆ ಉದ್ದದ ಕಾರುಗಳಿಗೆ ಕಡಿಮೆ ಸುಂಕವಿರುವುದರಿಂದ ದರ ಕಡಿಮೆ ಇರುವ ನಿರೀಕ್ಷೆಯಿದೆ.

Article Published On: Wednesday, January 18, 2012, 16:36 [IST]
English summary
The Ford EcoSport Compact SUV was unveiled at the Delhi Auto Expo. This is the second product from Ford that has been built on Ford's global car platform. Designed at emerging markets such as India and Brazil, the EcoSport will be marketed as a lifestyle SUV.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+