ದೇಶಿ ರಸ್ತೆ ಹೈಜಾಕ್ ಮಾಡಲು ಕಾಂಪ್ಯಾಕ್ಟ್ SUV ಸಜ್ಜು!!

ಸಾಲು ಸಾಲು ಸ್ಪೋರ್ಟ್ ಯುಟಿಲಿಟಿ ವಾಹನಗಳ ಆಗಮನದ ಸುದ್ದಿಗೆ ರಸ್ತೆಗಳು ದಿಗಿಲುಗೊಂಡಿವೆ. ವೇಗದ ಮತ್ತು ಫನ್ ಚಾಲನೆಗೆ ಹವಣಿಸುವ ಯುವಕರ ನರನಾಡಿಗಳು ರೋಮಾಂಚನಗೊಂಡಿವೆ. ಈ ವರ್ಷ ರಸ್ತೆಯಲ್ಲಿ ಸಣ್ಣ ಸ್ಪೋರ್ಟ್ ಕಾರುಗಳ ಪ್ರವಾಹವಾಗುವುದಾಗಿ ವಾಹನ ಜ್ಯೋತಿಷಿಗಳು ಭವಿಷ್ಯ ಹೇಳಿದ್ದಾರೆ.
ಈಗಾಗಲೇ ದೇಶದ ವಾಹನ ಮಾರುಕಟ್ಟೆಯಲ್ಲಿ ಕಾಂಪ್ಯಾಕ್ಟ್ ಎಸ್ ಯುವಿ ಕಾರುಗಳ ಬೇಡಿಕೆ ಕುರಿತು ಕಾರು ಕಂಪನಿಗಳು ಸಾಕಷ್ಟು ಅಧ್ಯಯನ ಮಾಡಿವೆ. ಸ್ಪೋರ್ಟ್ ಯುಟಿಲಿಟಿ ವಾಹನಗಳಿಗೆ ಯುವಕರು ಪ್ರಮುಖ ಗ್ರಾಹಕರಾಗಿದ್ದಾರೆ ಎಂದು ಕಂಪನಿಗಳು ನಂಬಿವೆ.
ಕಾಂಪ್ಯಾಕ್ಟ್ ಎಸ್ ಯುವಿ ಅಂದರೆ SUV ಶಕ್ತಿ, ಸೆಡಾನ್ ಕಾರಿನ ಸ್ಥಳಾವಕಾಶ ಮತ್ತು ಹ್ಯಾಚ್ ಬ್ಯಾಕ್ ಕಾರಿನ ಇಂಧನ ದಕ್ಷತೆಯನ್ನು ಹೊಂದಿದೆ. ಹೆಚ್ಚಿನ ಕಾರು ಕಂಪನಿಗಳು ದೇಶದ ರಸ್ತೆಗೆ ಸಣ್ಣ ಸ್ಪೋರ್ಟ್ ವಾಹನಗಳನ್ನು ಪರಿಚಯಿಸಲು ನಿರ್ಧರಿಸಿವೆ. ಈ ಕಾರುಗಳು ಶಕ್ತಿಶಾಲಿ, ಫನ್ ಡ್ರೈವಿಂಗ್, ಆರಾಮದಾಯಕತೆ ಮತ್ತು ಕೈಗೆಟುಕುವ ದರದೊಂದಿಗೆ ಬರಲಿವೆ.
ಫೋರ್ಡ್ ಇಕೊಸ್ಪೋರ್ಟ್ ಮತ್ತು ಟಾಟಾ ಸಫಾರಿ ಸ್ಟ್ರೋಮ್ ಕಾರು ಈಗಾಗಲೇ ಅನಾವರಣವಾಗಿದ್ದು ರಸ್ತೆಗಿಳಿಯಲು ಸಜ್ಜಾಗಿವೆ. ದೇಶದ ಸಣ್ಣ ಕಾರು ಸ್ಪೆಷಲಿಸ್ಟ್ ಮಾರುತಿ ಸುಜುಕು ಕೂಡ XA Alpha ಕಾನ್ಸೆಪ್ಟ್ ಮೂಲಕ ಕಾಂಪ್ಯಾಕ್ಟ್ ಎಸ್ ಯುವಿ ಮಾರುಕಟ್ಟೆಗೆ ಆಗಮಿಸುವುದನ್ನು ಖಾತ್ರಿ ಪಡಿಸಿದೆ.
ಈ ವರ್ಷ ರಸ್ತೆಗಿಳಿಯಲಿರುವ ಇತರ ಸಣ್ಣ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಗಳೆಂದರೆ ರೆನಾಲ್ಟ್ ಡಸ್ಟರ್ ಮತ್ತು ಮಿನಿ ಕ್ಷೈಲೊ. ಈ ಸಣ್ಣ ಸ್ಪೋರ್ಟ್ ಕಾರುಗಳ ಗತ್ತು, ಠೀವಿ, ಬೆಡಗು, ಬೆರಗು, ಬಿನ್ನಾಣ ನೋಡಲು ಮುಂದಿನ ಪುಟಕ್ಕೆ ಪ್ರಯಾಣ ಬೆಳೆಸಿರಿ. ಇವೆಲ್ಲ 2012ರಲ್ಲಿ ದೇಶದ ರಸ್ತೆಯನ್ನು ಹೈಜಾಕ್ ಮಾಡುವ ಸ್ಪೋರ್ಟ್ ಯುಟಿಲಿಟಿ ವೆಹಿಕಲ್ ಗಳು.
ದೇಶದ ರಸ್ತೆಯಲ್ಲಿ ಬಿರುಗಾಳಿ ಎಬ್ಬಿಸಲಿರುವ ಕಾರು ಮುಂದಿನ ಪುಟದಲ್ಲಿದೆ.


Click it and Unblock the Notifications








