ಫೋರ್ಡ್ ಎಕೊಸ್ಪೋರ್ಟ್: ಇದು ಸಣ್ಣಕಾರಲ್ಲವೋ ಅಣ್ಣಾ...

Posted By:
To Follow DriveSpark On Facebook, Click The Like Button
Ford Ecosport not small car
ಫೋರ್ಡ್ ಫ್ಯಾಮಿಲಿಗೆ ಹೊಸ ಪುಟ್ಟಕಾರೊಂದು ಆಗಮಿಸಲಿದೆ. ಆದರೆ ಇದರ ಉದ್ದ ನಾಲ್ಕು ಮೀಟರಿಗಿಂತ ಕಡಿಮೆ ಇರುವುದಾಗಿ ಈ ಹಿಂದೆ ಅಂದಾಜಿಸಲಾಗಿತ್ತು. ಆದರೆ ಇದೀಗ ಬಂದ ಮಾಹಿತಿಯ ಪ್ರಕಾರ ಇದು ನಾಲ್ಕು ಮೀಟರಿಗಿಂತ ಉದ್ದದ ಕಾರಾಗಿರಲಿದೆ.

ಎಕೊಸ್ಪೋರ್ಟ್ ಕಾರನ್ನು ಸಣ್ಣಕಾರೆಂದು ಉಡಾಫೆಯಿಂದ ನೋಡುವ ಆಗಿಲ್ಲ. ಗುಣಮಟ್ಟದ ನಿರ್ಮಾಣ, ದಕ್ಷತೆ, ಕಾರ್ಯಕ್ಷಮತೆ ವಿಷಯದಲ್ಲಿ ಇದು ಸಣ್ಣಕಾರಲ್ಲ. ಫೋರ್ಡ್ ಎಕೊಸ್ಪೋರ್ಟ್ 1.5 ಲೀಟರಿನ ಡೀಸೆಲ್ ಮತ್ತು 1.0 ಲೀಟರಿನ ಪೆಟ್ರೋಲ್ ಎಂಜಿನ್ ಹೊಂದಿರಲಿದೆ.

"ಇಕೊಸ್ಪೋರ್ಟ್ ಕಾರು ಸುಮಾರು 4.25 ಮೀಟರ್ ಉದ್ದವಿರಲಿದೆ. ಬ್ರೇಝಿಲಿಗೆ ಪರಿಚಯಿಸಲಿರುವ ಇಕೊಸ್ಪೋರ್ಟ್ ನಂತಹ ಕಾರನ್ನು ಭಾರತಕ್ಕೂ ಪರಿಚಯಿಸಲಿದ್ದೇವೆ" ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಮೈಕೆಲ್ ಬೊನಾಮ್ ಹೇಳಿದ್ದಾರೆ.

ಹಾಗಂತ ಇಕೊಸ್ಪೋರ್ಟ್ ಕಾರಿಗೆ ಭಾರತವೇ ಪ್ರಮುಖ ಮಾರುಕಟ್ಟೆಯಲ್ಲ. ಸ್ಪೋರ್ಟ್ ಯುಟಿಲಿಟಿ ವೆಹಿಕಲಿನಲ್ಲಿರುವ ಜಾಗತಿಕ ಸ್ಟಾಂಡರ್ಡ್ ಫೀಚರುಗಳು, ಸ್ಟೈಲ್, ಸ್ಥಳಾವಕಾಶ ಇತ್ಯಾದಿ ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಕಾರು ರಸ್ತೆಗಿಳಿಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ನೂತನ ಎಕೊಸ್ಪೋರ್ಟ್ ಬೇಸ್ ಆವೃತ್ತಿ ದರ ಸುಮಾರು 7 ಲಕ್ಷ ರು.ನಿಂದ ಆರಂಭವಾಗಲಿದೆ. ಟಾಪ್ ಎಂಡ್ ಆವೃತ್ತಿ ದರ ಸುಮಾರು 10 ಲಕ್ಷ ರುಪಾಯಿ ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ. (ಕನ್ನಡ ಡ್ರೈವ್ ಸ್ಪಾರ್ಕ್)

English summary
Ford Ecosport not small car. This Car will not coming with sub-four metre Long. New Ford EcoSport Length is 4,228 mm. Ford Ecosport price between Rs 9 lakh-Rs 12 lakh.
Story first published: Wednesday, February 15, 2012, 10:49 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark