ಅಪಘಾತ ಪರೀಕ್ಷೆಯಲ್ಲಿ ಜರ್ಮನಿಯ ಕಾರುಗಳು ಫೇಲ್
ಆದರೆ ಈ ನಂಬಿಕೆಗೆ ಹೊಡೆತ ನೀಡುವಂತಹ ವರದಿಯೊಂದು ಬಂದಿದೆ. ಜರ್ಮನಿಯ ಪ್ರೀಮಿಯಂ ಕಾರುಗಳು ಅಪಘಾತ ಪರೀಕ್ಷೆಯಲ್ಲಿ ನಪಾಸು ಆಗಿವೆ. ಅವುಗಳ ಮುಂಭಾಗ ಹೆಚ್ಚು ಗಟ್ಟಿಮುಟ್ಟಾಗಿಲ್ಲವೆನ್ನುವುದು ಸಾಬೀತಾಗಿದೆ. ಅಪಘಾತದಂತಹ ಸಂದರ್ಭದಲ್ಲಿ ಕಾರಿನೊಳಗೆ ಮುಂಭಾಗದಲ್ಲಿ ಕುಳಿತವರು ಕಾಲು ಮುರಿದುಕೊಳ್ಳಬೇಕಷ್ಟೇ.
ಅಪಘಾತ ಪರೀಕ್ಷೆ ಅಥವಾ ಕ್ರಾಷ್ ಟೆಸ್ಟ್ ನಲ್ಲಿ ಬಿಎಂಡಬ್ಲ್ಯು 3 ಸೀರಿಸ್, ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್ ಮತ್ತು ಆಡಿ ಎ4 ಕಾರುಗಳು ಫೇಲ್ ಆಗಿವೆ. ಹೆದ್ದಾರಿ ಸುರಕ್ಷತೆಯ ವಿಮಾ ಸಂಸ್ಥೆಯೊಂದು ನಡೆಸಿದ ಕ್ರಾಷ್ ಟೆಸ್ಟಿನಲ್ಲಿ ಜರ್ಮನಿಯ ಪ್ರೀಮಿಯಂ ಕಾರುಗಳು ನಪಾಸಾಗಿವೆ.
ಅಕೂರಾ ಟಿಎಲ್, ಲೆಕ್ಸಾಸ್ ಐಎಸ್, ನಿಸ್ಸಾಣ್ ಇನ್ಫಿನಿಟಿ ಜಿ, ವೊಲ್ವೊ ಎಸ್60 ಮತ್ತು ಫೋರ್ಡ್ ಲಿಂಕೊನ್ ಎಂಕೆಝಡ್ ಕಾರುಗಳು ಕೂಡ ಕ್ರಾಷ್ ಟೆಸ್ಟಿನಲ್ಲಿ ಸುರಕ್ಷತೆಯ ಪರೀಕ್ಷೆಗೆ ಒಳಪಟ್ಟಿದ್ದವು. ಅಪಘಾತ ಪರೀಕ್ಷೆಯಲ್ಲಿ ಹೆಚ್ಚಿನ ಕಾರುಗಳ ಮುಂಭಾಗ ಹೆಚ್ಚು ಸದೃಢವಾಗಿಲ್ಲವೆಂಬ ಅಂಶ ಬೆಳಕಿಗೆ ಬಂದಿದೆ.
ಪ್ರೀಮಿಯಂ ಕಾರುಗಳಲ್ಲಿ ಎಂಟ್ರಿ ಲೆವೆಲ್ ಕಾರುಗಳು ಫೇಲ್ ಆಗಿರುವುದು ಗಮನಿಸಬೇಕಾದ ಅಂಶ. ಐಷಾರಾಮಿ ಕಾರುಗಳನ್ನು ಕಡಿಮೆ ದರಕ್ಕೆ ನೀಡುವ ಭರದಲ್ಲಿ ಇವುಗಳ ಸದೃಢತೆಯನ್ನು ಕಂಪನಿಗಳು ಕಡಿಮೆ ಮಾಡುತ್ತಿವೆಯೇ ಎಂಬ ಸಂಶಯವೂ ಕಾಡದೇ ಇರದು.
ನಮ್ಮ ದೇಶದಲ್ಲಿ ಲಭಿಸಿರುವ ಪ್ರೀಮಿಯಂ ಕಾರುಗಳಲ್ಲಿ ಕ್ರಾಷ್ ಟೆಸ್ಟ್ ನಲ್ಲಿ ಹೆಚ್ಚಿನ ಕಾರುಗಳು ಫೇಲಾಗಿವೆ. ಪಾಸ್ ಆಗಿರುವುದು ಒಂದೇ ಒಂದು ಕಾರು. ಅದು ವೊಲ್ವೊ ಎಸ್60. ವೊಲ್ವೊ ಕಂಪನಿಯು ಸುರಕ್ಷತೆಗೆ ಹೆಚ್ಚಿನ ಗಮನ ನೀಡುವುದು ಇದರಿಂದ ಅರಿವಾಗುತ್ತದೆ.
ಕ್ರಾಷ್ ಟೆಸ್ಟ್ ಅಥವಾ ಅಪಘಾತ ಪರೀಕ್ಷೆ ಕುರಿತು ಈ ಹಿಂದೆ ಕನ್ನಡ ಡ್ರೈವ್ ಸ್ಪಾರ್ಕ್ ಆಸಕ್ತಿದಾಯಕ ಲೇಖನವೊಂದನ್ನು ಬರೆದಿತ್ತು. ಕ್ರಾಷ್ ಟೆಸ್ಟ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸರಳವಾಗಿ ಪಡೆಯಲು ಬಯಸುವರು ಈ ಲಿಂಕ್ ಪ್ರವೇಶಿಸಿ.


Click it and Unblock the Notifications









