ಎಲೆಕ್ಟ್ರಿಕ್ ವಾಹನಕ್ಕೆ ಸರಕಾರದಿಂದ ಭರ್ಜರಿ ಪ್ಯಾಕೇಜ್

Posted By:
ಪರಿಸರ ಸ್ನೇಹಿ ಎಲೆಕ್ಟ್ರಿಕ್(ಇವಿ) ಮತ್ತು ಹೈಬ್ರಿಡ್ ವಾಹನಗಳ ಉತ್ಪಾದನೆಗೆ ಉತ್ತೇಜನ ನೀಡಲು 23 ಸಾವಿರ ಕೋಟಿ ರು. ನೀಡಲು ಸರಕಾರ ಇಂದು(ಆ 30) ಸಮ್ಮತ್ತಿಸಿದೆ. ಮುಂದಿನ 8 ವರ್ಷಗಳಿಗೆ, ಅಂದರೆ 2020ರ ವೇಳೆಗೆ 60 ಲಕ್ಷ ಇ-ವಾಹನ ಮಾರಾಟ ಮಾಡುವ ಗುರಿಯನ್ನು ವ್ಯಕ್ತಪಡಿಸಿದೆ.

2011ರ ಕೇಂದ್ರ ಬಜೆಟಿನಲ್ಲಿ ಮಾಜಿ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಪ್ರಕಟಿಸಿದ ರಾಷ್ಟ್ರೀಯ ಎಲೆಕ್ಟ್ರಿಕ್ ವಾಹನ ಮಿಷನ್ ನೀತಿಯ ವಿಸ್ತರಣಾ ಯೋಜನೆ ಇದಾಗಿದೆ. ಎಲೆಕ್ಟ್ರಿಕ್ ವಾಹನಗಳ ದರ ಕಡಿಮೆ ಮಾಡಲು ಸಹ ನೂತನ ಯೋಜನೆ ಇದಾಗಿದೆ.

ದೇಶದ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರು ಉತ್ಪಾದನೆ ಹೆಚ್ಚಳಕ್ಕೆ ಮತ್ತು ಪರಿಸರ ಸ್ನೇಹಿ ವಾಹನಗಳನ್ನು ಖರೀದಿಸಲು ಗ್ರಾಹಕರನ್ನು ಪ್ರೋತ್ಸಾಹಿಸಲು ಇದು ಉತ್ತೇಜನ ನೀಡಲಾಗಿದೆ.

"ಅಪ್ಪಟ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳನ್ನು ದೇಶದಲ್ಲಿ ಪ್ರೋತ್ಸಾಹಿಸಲು ಸರಕಾರವು ದೀರ್ಘಕಾಲದ ಕಾರ್ಯತಂತ್ರ ಹೊಂದಿದೆ" ಎಂದು ಬೃಹತ್ ಉದ್ಯಮ ಸಚಿವಾಲಯದ ನಿರ್ದೇಶಕರಾದ ವಿಕ್ರಮ್ ಗುಲಾಟಿ ಹೇಳಿದ್ದಾರೆ.

"ಸರಕಾರವು ಪ್ರಕಟಿಸಿರುವ ನೂತನ ಪ್ಯಾಕೇಜ್ ಮೂಲಸೌಕರ್ಯ ವೆಚ್ಚಕ್ಕೆ, ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗಕ್ಕೆ ಸೇರಿದಂತೆ ಬಳಕೆಯಾಗಲಿದೆ. ಭವಿಷ್ಯದ ಪರಿಸರ ಸ್ನೇಹಿ ತಂತ್ರಜ್ಞಾನಕ್ಕಾಗಿ ಸರಕಾರ ಮತ್ತು ವಾಹನೋದ್ಯಮ ಜೊತೆಜೊತೆಯಾಗಿ ಕೆಲಸ ಮಾಡಲಿದೆ" ಎಂದು ಅವರು ಹೇಳಿದ್ದಾರೆ.

ಓದಿ: ಬೆಂಗ್ಳೂರಲ್ಲಿ ರೇವಾ ಪರಿಸರ ಸ್ನೇಹಿ ಘಟಕ ಉದ್ಘಾಟನೆ

English summary
India extended MNRE scheme and approves 23k crore for electric and hybrid vehicles production. New investment will help to eco-friendly vehicles India.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark