ಫೇಸ್ಬುಕ್ ಅಂಗ್ಡಿಲಿ ನಿನ್ಮೆಲೆ ಪ್ಯಾರ್ ಬಂದ್ಬುಟ್ ಫ್ಯಾನ್ ಆಗ್ಬಿಟ್ಟೆ!
ಮನಸ್ಸು ಮನಸ್ಸುಗಳ ನಡುವಿನ ಗೋಡೆಯನ್ನು ಕೆಡವಲು ಪ್ರಯತ್ನಿಸಿದ್ದು ಮತ್ತೊಂದು ಗೋಡೆ. ಇದೊಂದು ಡಿಫರೆಂಟ್ ಗೋಡೆ. ಇಲ್ಲಿ ಗೋಡೆಯಿದ್ದರೂ ಮಾಹಿತಿಗಳು, ಭಾವನೆಗಳು ಷೇರ್ ಆಗುತ್ತವೆ. ಲೈಕ್ ಆಗುತ್ತವೆ. ಗೋಡೆ ಮೇಲೆ ಬರೆದ್ರೆ ಸ್ಟೇಟಸ್ ಬರುತ್ತದೆ ಅಥವಾ ಹೋಗುತ್ತದೆ.
ಈ ಗೋಡೆಯ ಹೆಸರು ಫೇಸ್ಬುಕ್. ವಿದ್ಯಾರ್ಥಿಗಳು ಸ್ಕೂಲ್ ಬುಕ್ ತೆರೆಯದಿದ್ರೂ ಫೇಸ್ಬುಕ್ ತೆರೆಯಲು ಮರೆಯುವುದಿಲ್ಲ. ಇಂತಹ ಫೇಸ್ಬುಕ್ ಇಂದು ಜಗತ್ತಿನ ಪ್ರಮುಖ ಡಿಜಿಟಲ್ ಮಾಧ್ಯಮ. ಹೆಚ್ಚು ಜನರನ್ನು ಸಮ್ಮೋಹನಗೊಳಿಸಿದ ಸಮೂಹ ಮಾಧ್ಯಮ.
ಫೇಸ್ಬುಕ್ ಪುಟಗಳಿಂದು ಹೆಚ್ಚು ಜನಪ್ರಿಯವಾಗುತ್ತಿವೆ. ಇಲ್ಲಿ ನಿಮ್ಮ ಅಭಿರುಚಿಗೆ ತಕ್ಕಂತೆ ಪುಟಗಳಿವೆ. ಕನ್ನಡ ಅಭಿಮಾನಿಯಾಗಿದ್ರೆ ಸಾಕಷ್ಟು ಕನ್ನಡ ಪುಟಗಳಿವೆ. ಸಿನಿಮಾ ನಟರ ಫ್ಯಾನ್ ಆಗಲು ಫೇಸ್ಬುಕ್ಕಿಗಿಂತ ಸುಲಭ ಮಾಧ್ಯಮ ಬೇರೆಲ್ಲೂ ಸಿಗದು.
ಇದು ಬಿಸಿನೆಸ್ ಹೆಚ್ಚಿಸುವ ಪ್ರಮುಖ ವೇದಿಕೆ ಕೂಡ ಹೌದು. ಪತ್ರಿಕೆಗಳಲ್ಲಿ ಪುಟಗಟ್ಟಲೆ ನೀಡುವ ಜಾಹೀರಾತಿಗಿಂತಲೂ ಇಲ್ಲಿ ಹೆಚ್ಚು ಪ್ರಚಾರ ಪಡೆಯಬಹುದು. ಹೀಗಾಗಿ ಫೇಸ್ಬುಕ್ ಅಂದ್ರೆ ಎಲ್ಲಾ ಕಂಪನಿಗಳಿಗೆ ಮೊದಲ ಜಾಹೀರಾತು ತಾಣ. ಕಾರು ಕಂಪನಿಗಳಿಗೂ ಕೂಡ ಇದೇ ಪ್ರಮುಖ ಶೋರೂಂ. ಫೇಸ್ಬುಕ್ನಲ್ಲಿ ಅಂಗಡಿ ತೆರೆದವರ ಕುರಿತು ಮುಂದಿನ ಪುಟದಲ್ಲಿ ಓದಿ.


Click it and Unblock the Notifications









