ಫೇಸ್ಬುಕ್ನಲ್ಲಿ ಅಂಗಡಿ ತೆರೆದ ಕಾರು ಕಂಪನಿಗಳು

ನಂಬಿದ್ರೆ ನಂಬಿ, ಇದೀಗ ಕಾರು ಕಂಪನಿಗಳು ಫೇಸ್ಬುಕ್ ಪುಟವನ್ನೇ ಪ್ರಮುಖ ಶೋರೂಂ ಎಂದು ಭಾವಿಸುತ್ತಿವೆ. ಇಲ್ಲಿ ಬಳಕೆದಾರ ಸ್ನೇಹಿ ಮಾಹಿತಿ ವಿನಿಮಯ ಮಾಡುತ್ತವೆ. ಜನರನ್ನು ವಿಭಿನ್ನ ವಿಷಯಗಳಿಂದ ಆಕರ್ಷಿಸುತ್ತವೆ. ಇಲ್ಲಿ ಚರ್ಚೆಗಳು, ಮತಗಳು, ಚಿತ್ರಗಳು, ಸ್ಪರ್ಧೆಗಳು ಇರುತ್ತವೆ.

ನೀವು ಕಾರೊಂದರ ಅಭಿಮಾನಿಯಾಗಿದ್ರೆ ಆ ಕಾರಿನ ಫೇಸ್ಬುಕ್ ಫ್ಯಾನ್ ಪುಟ ಲೈಕ್ ಮಾಡಬಹುದು. ಇದರಿಂದ ಆ ಕಾರು ಕುರಿತಾದ ಮಾಹಿತಿಗಳು, ಅಪ್ ಡೇಟ್ ಗಳು ನಿಮಗೆ ಸಿಗುತ್ತವೆ. ಅಗ್ಗದ ನ್ಯಾನೊ ಕಾರಿನಿಂದ ಹಿಡಿದು, ದುಬಾರಿ ಬೆಂಟ್ಲಿ ರೋಲ್ಸ್ ರಾಯ್ಸ್ ವರೆಗಿನ ಕಾರುಗಳಿಗೂ ಫ್ಯಾನ್ ಪುಟಗಳಿವೆ. ಅಲ್ಲಿ ಸಾವಿರ ಸಾವಿರ, ಲಕ್ಷ ಲಕ್ಷ ಅಭಿಮಾನಿಗಳು ಇದ್ದಾರೆ.

ದುಬಾರಿ ಫೆರಾರಿಗೂ 7 ಲಕ್ಷಕ್ಕಿಂತ ಹೆಚ್ಚು ಅಭಿಮಾನಿಗಳು ಇಲ್ಲಿದ್ದಾರೆ. ಇದ್ರಲ್ಲಿ ಎಷ್ಟು ಜನರು ಫೆರಾರಿ ಖರೀದಿಸ್ತಾರೋ ಗೊತ್ತಿಲ್ಲ. ಆದ್ರೆ ಅಭಿಮಾನ ಪಡುವುದು ತಪ್ಪಲ್ಲವಲ್ಲ. ಅದೇ ರೀತಿ ಕನ್ನಡಕ್ಕೆ ಮೊದಲ ವಾಹನ ತಾಣ ನೀಡಿದ ಒನ್ ಇಂಡಿಯಾದ ಡ್ರೈವ್ ಸ್ಪಾರ್ಕಿಗೂ ಇಲ್ಲಿ ಅಭಿಮಾನಿಗಳಿದ್ದಾರೆ(ನೀವು ಸೇರಿರದಿದ್ರೆ ಈಗ್ಲೇ ಜಾಯಿನ್ ಆಗಿ).

ಡ್ರೈವ್ ಸ್ಪಾರ್ಕ್ ಫ್ಯಾನ್ ಪುಟದಲ್ಲಿ ನಿಮ್ಮ ಪ್ರೀತಿಯ ಕಾರು ಬೈಕುಗಳ ಕುರಿತು ಮಾಹಿತಿ ವಿನಿಮಯ ಮಾಡಿಕೊಳ್ಳಬಹುದು. ಹೊಸ ಕಾರು ಬೈಕ್ ಖರೀದಿಸಿದ್ರೆ ನಮಗೆ ಮಾಹಿತಿ ನೀಡಬಹುದು. ನಾವು ನಿಮ್ಮನ್ನು ಸಂದರ್ಶನ ಮಾಡುತ್ತೇವೆ. ಹೌದು ನಮ್ಗೆ ಗೊತ್ತೇ ಇರ್ಲಿಲ್ಲ ಅಂತಿರಾ, ನಿಮ್ಮಲ್ಲಿರುವ ಹಳೆಯ ಅಥವಾ ಹೊಸ ಬೈಕು ಕುರಿತು ನಮಗೆ ತಿಳಿಸಿದ್ರೆ ಇಂಗ್ಲಿಷ್ ಮಾತ್ರವಲ್ಲದೇ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಲಂ ಭಾಷೆಗಳಲ್ಲೂ ನಿಮ್ಮ ಲೇಖನ ಪ್ರಕಟವಾಗುತ್ತದೆ. (ನಮಗೆ ಇಮೇಲ್ ಕೂಡ ಮಾಡಬಹುದು. ವಿಳಾಸ: [email protected])

ಹೆಚ್ಚು ಜನರು ಇಷ್ಟಪಡುವ ಕಾರು ಕಂಪನಿ ಮತ್ತು ಕಾರುಗಳ ಕುರಿತು ತಿಳಿಯಲು ಮುಂದಿನ ಪುಟಕ್ಕೆ ಲಗ್ಗೆಯಿಡಿ.

More from DriveSpark

Article Published On: Friday, March 9, 2012, 11:58 [IST]
English summary
Facebook Is Our New Showroom - Carmakers. Carmakers have done a great job in Facebook by creating user friendly and interactive tools to attract people. These pages host a number of polls, pictures of recent buyers, contests along with a system where you can book your test drives too.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+