ಕಾರು ಚಾಲನೆ ವೇಳೆ ಫೇಸ್‌ಬುಕ್ ಲೈವ್- ಅಪಘಾತದಲ್ಲಿ ಮೂವರು ದುರ್ಮರಣ

Written By:

ಇತ್ತೀಚೆಗೆ ಪ್ರತಿಯೊಬ್ಬರು ಫೇಸ್‌ಬುಕ್ ಲೈವ್ ಬಳಕೆ ಮಾಡುತ್ತಿರುವುದು ಸಾಮಾನ್ಯವಾಗುತ್ತಿದೆ. ಆದ್ರೆ ಕಾರು ಚಾಲನೆ ಮಾಡುತ್ತಿದ್ದಾಗ ಫೇಸ್‌ಬುಕ್ ಲೈವ್ ಮಾಡುತ್ತಿದ್ದ ಯುವಕರ ತಂಡವೊಂದು ದುರಂತವಾಗಿ ಸಾನ್ನಪ್ಪಿರುವ ಘಟನೆ ನಡೆದಿದೆ.

ಕಾರು ಚಾಲನೆ ವೇಳೆ ಫೇಸ್‌ಬುಕ್ ಲೈವ್- ಅಪಘಾತದಲ್ಲಿ ಮೂವರು ದುರ್ಮರಣ

ಅವರೆಲ್ಲಾ ಲಾಂಗ್ ರೈಡ್‌ಗೆ ಅಂತಾ ತಮ್ಮ ಸ್ನೇಹಿತರ ಗುಂಪಿನೊಂದಿಗೆ ಕಾರಿನಲ್ಲಿ ಪ್ರಯಣಿಸುತ್ತಿದ್ರು. ಈ ವೇಳೆ ಫೇಸ್‌ಬುಕ್ ಲೈವ್‌ಗೆ ಬಂದ ಯುವಕರ ತಂಡ ತಮ್ಮ ಲಾಂಗ್ ರೈಡ್ ಬಗ್ಗೆ ಖುಷಿ ಹಂಚಿಕೊಳ್ಳುತ್ತಿದ್ದರು. ದುರಂತ ಎಂದ್ರೆ ಲೈವ್‌ನಲ್ಲಿ ಇರುವಾಗಾಲೇ ಅವರೆಲ್ಲಾ ಮಸಣ ಸೇರಿದ್ದಾರೆ.

ಕಾರು ಚಾಲನೆ ವೇಳೆ ಫೇಸ್‌ಬುಕ್ ಲೈವ್- ಅಪಘಾತದಲ್ಲಿ ಮೂವರು ದುರ್ಮರಣ

ಅಂದಹಾಗೆ ಈ ಘಟನೆ ನಡೆದಿರುವುದು ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ. ಫೇಸ್‌ಬುಕ್‌ ಲೈವ್‌ನಲ್ಲಿ ಮಾತನಾಡುವ ಭರದಲ್ಲಿದ್ದ ಮಾರುತಿ 800 ಚಾಲಕ ನಿಯಂತ್ರಣ ತಪ್ಪಿದ ಪರಿಣಾಮ ಹ್ಯುಂಡೈ ಕ್ರೇಟಾ ಕಾರಿಗೆ ಬಲವಾಗಿ ಗುದ್ದಿದ್ದಾನೆ.

ಕಾರು ಚಾಲನೆ ವೇಳೆ ಫೇಸ್‌ಬುಕ್ ಲೈವ್- ಅಪಘಾತದಲ್ಲಿ ಮೂವರು ದುರ್ಮರಣ

ಕ್ರೇಟಾ ಕಾರಿಗೆ ಬಲವಾಗಿ ಗುದ್ದಿದ ಪರಿಣಾಮ ಮಾರುತಿ ಆಲ್ಟೋ 800 ಸಂಪೂರ್ಣ ಜಖಂಗೊಂಡಿದ್ದು, ಮಾರುತಿಯಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದರೇ ಓರ್ವನಿಗೆ ಗಂಭೀರ ಗಾಯಗಳಾಗಿ ಆಸ್ಪತ್ರೆ ಸೇರಿದ್ದಾನೆ.

ಕಾರು ಚಾಲನೆ ವೇಳೆ ಫೇಸ್‌ಬುಕ್ ಲೈವ್- ಅಪಘಾತದಲ್ಲಿ ಮೂವರು ದುರ್ಮರಣ

ಮೃತರನ್ನು ಸ್ಥಳೀಯ ನಿವಾಸಿಗಳೆಂದು ಗುರುತಿಸಲಾಗಿದ್ದು, ಪದವಿ ವಿದ್ಯಾರ್ಥಿಗಳಾಗಿದ್ದರು ಎನ್ನವಾಗಿದೆ. ಆದ್ರೆ ಮೃತರ ಹೆಸರುಗಳು ಬಗೆಗೆ ಯಾವುದೇ ನಿಖರ ಮಾಹಿತಿಗಳು ಮಾತ್ರ ಲಭ್ಯವಾಗಿಲ್ಲ.

ಯುವಕರ ಫೇಸ್‌ಬುಕ್ ಲೈವ್ ಮಾಡುತ್ತಿದ್ದಾಗ ನಡೆದ ಭೀಕರ ಅಪಘಾತದ ವಿಡಿಯೋ ಇಲ್ಲಿದೆ ನೋಡಿ.

ಕಾರು ಚಾಲನೆ ವೇಳೆ ಫೇಸ್‌ಬುಕ್ ಲೈವ್- ಅಪಘಾತದಲ್ಲಿ ಮೂವರು ದುರ್ಮರಣ

ಇನ್ನು ಫೇಸ್‌ಬುಕ್ ಲೈವ್‌‌ನಲ್ಲಿದ್ದಾಗ ನಡೆದ ಅಪಘಾತದ ವಿಡಿಯೋ ಭಾರೀ ಚರ್ಚೆಗೆ ಕಾರಣವಾಗಿದ್ದು, ಚಾಲನೆ ವೇಳೆ ಫೇಸ್‌ಬುಕ್ ಲೈವ್ ದುರಂತಗಳಿಗೆ ಹೇಗೆ ಕಾರಣವಾಗುತ್ತದೆ ಎಂಬುವುದಕ್ಕೆ ಈ ಘಟನೆಯೇ ಸಾಕ್ಷಿ ಎನ್ನುವ ಅಭಿಪ್ರಾಯ ವ್ಯಕ್ತವಾಗಿವೆ.

TVS Jupiter Classic Launched In India | In Kannada - DriveSpark ಕನ್ನಡ
ಕಾರು ಚಾಲನೆ ವೇಳೆ ಫೇಸ್‌ಬುಕ್ ಲೈವ್- ಅಪಘಾತದಲ್ಲಿ ಮೂವರು ದುರ್ಮರಣ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಫೇಸ್‌ಬುಕ್ ಲೈವ್ ಬಳಕೆ ಮಾಡುವ ಸಂದರ್ಭಗಳು ತುಂಬಾ ಮುಖ್ಯವಾಗಿದ್ದು, ಯಾವುದೇ ಕಾರಣಕ್ಕೂ ಪ್ರಾಣಕ್ಕೆ ಅಪಾಯ ತಂದುಕೊಳ್ಳುವಂತಹ ಸಂದರ್ಭಗಳಲ್ಲಿ ಫೇಸ್‌ಬುಕ್ ಲೈವ್ ಬಳಕೆ ಮಾಡಬೇಡಿ. ಜೊತೆಗೆ ಸುರಕ್ಷಿತ ಚಾಲನೆಗೆ ಆದ್ಯತೆ ನೀಡಿ.

English summary
Read in Kannada about Rash Driving While Doing Facebook Live Video- 3 Students Killed.
Story first published: Thursday, August 31, 2017, 13:15 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark