ಟಾಯ್ಲೆಟ್, ಕಿಚನ್ ಇರೋ ವೊಲ್ವೊ ಬಸ್ ಬಗ್ಗೆ ಒಂದಿಷ್ಟು...

ಕೆಲವರಿಗೆ ಬಸ್ ಪ್ರಯಾಣವೆಂದರೆ ಆಗೋದಿಲ್ಲ. ವಿಮಾನದಲ್ಲಿ ಹಸಿವಾದರೆ ತಿಂಡಿತೀರ್ಥ ಲಭ್ಯವಿದೆ. ರೈಲಿನಲ್ಲಿ ಟಾಯ್ಲೆಟ್ ಇರೋ ಕಾರಣ ಒಂದೆರಡು ಪ್ರಾಬ್ಲಂ ಇರೋದಿಲ್ಲ. ವಿಮಾನ, ಹಡಗು, ರೈಲಿಗೆ ಸೀಮಿತವಾಗಿದ್ದ ಟಾಯ್ಲೆಟ್, ಕಿಚನ್ ಕಾನ್ಸೆಪ್ಟನ್ನು ಇನ್ಮುಂದೆ ರಾಜ್ಯದ ಜನರು ಬಸ್‌ನಲ್ಲೂ ನೋಡಬಹುದು. ಸುದ್ದಿಗಾಗಿ ಕನ್ನಡ ಒನ್ಇಂಡಿಯಾಕ್ಕೆ ಭೇಟಿ ನೀಡಿರಿ.

ದೂರದ ಊರುಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗುವಂತಹ ಶೌಚಾಲಯ ಮತ್ತು ಅಡುಗೆ ಮನೆ ಸೌಲಭ್ಯವಿರುವ ನೂತನ ಬಸ್‌ನ್ನು ರಾಜ್ಯಕ್ಕೆ ಪರಿಚಯಿಸಲು ನಿರ್ಧರಿಸಿದ್ದೇವೆ ಎಂದು ಸಾರಿಗೆ ಸಚಿವ ಆರ್. ಅಶೋಕ ಹೇಳಿದ್ದಾರೆ. ಇಂತಹ 25 ಬಸ್ ಖರೀದಿಸುವ ಯೋಜನೆ ಸರಕಾರಕ್ಕಿದೆ ಎಂದರು.

ಹೆಚ್ಚಿನ ಜನರಿಗೆ ಬಸ್‌ನಲ್ಲಿ ದೂರ ಪ್ರಯಾಣವೆಂದರೆ ಅಲರ್ಜಿ. ಅದರಲ್ಲಿ ಶೌಚಾಲಯ ಇಲ್ಲಿದಿರುವುದು ಇದಕ್ಕೆ ಪ್ರಮುಖ ಕಾರಣ. ನೂತನ ವೊಲ್ವೊ ಟಾಯ್ಲೆಟ್, ಕಿಚನ್ ಬಸ್ ಯೋಜನೆ ರಾಜ್ಯದಲ್ಲಿ ಯಶಸ್ವಿಯಾದರೆ ದೂರ ಪ್ರಯಾಣ ಇಂತವರಿಗೆ ತ್ರಾಸವಾಗದು. ಈ ಬಸ್‌ನಲ್ಲಿ ಪುಟ್ಟ ಅಡುಗೆ ಮನೆ ಇರಲಿದೆ. ಇಲ್ಲಿ ಚಹಾ, ಕಾಫಿ, ಸ್ನಾಕ್ಸ್ ಇತ್ಯಾದಿಗಳು ಇರಲಿವೆ.

ನೂತನ ವೊಲ್ವೊ ಬಸ್ ಮಲ್ಟಿ ಆಕ್ಸೆಲ್ ಸೌಲಭ್ಯ ಹೊಂದಿದೆ. ತಂತ್ರಜ್ಞಾನ ದೃಷ್ಟಿಯಿಂದ ಅಂತಹ ಮಹತ್ವದ ಬದಲಾವಣೆ ಇಲ್ಲಿಲ್ಲ. ಆದರೆ ಬಸ್ ಹಿಂಭಾಗದ ನಾಲ್ಕು ಸೀಟುಗಳಲ್ಲಿ ಪುಟ್ಟ ಅಡುಗೆ ಮನೆ ಇರಲಿದೆ. ಅಲ್ಲೇ ಬದಿಯಲ್ಲಿ ಪುಟ್ಟ ಟಾಯ್ಲೆಟ್ ಕೊಠಡಿ ಇರಲಿದೆ. ಈ ಬಸ್ ದರ ಸುಮಾರು 80 ಲಕ್ಷ ರುಪಾಯಿ.

ಕೆಎಸ್‌ಆರ್‌ಟಿಸಿ ಅಥವಾ ಬಿಎಂಟಿಸಿ ಬಸ್‌ಗಳ ಕೆಲವು ಚಾಲಕರು ಕುಡಿದು ವಾಹನ ಚಲಾಯಿಸುತ್ತಾರೆ ಎಂಬ ದೂರಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಬಸ್‌ಗಳಿಗೆ ಆಲ್ಕೋ ಮೀಟರ್ ಕೂಡ ಅಳವಡಿಸಲು ನಿರ್ಧರಿಸಲಾಗಿದೆ ಎಂದು ಸಾರಿಗೆ ಸಚಿವರು ಹೇಳಿದ್ದಾರೆ. ಚಾಲಕ ಕುಡಿದರೆ ಬಸ್ ಎಂಜಿನ್ ಸ್ಟಾರ್ಟ್ ಆಗದ ವ್ಯವಸ್ಥೆ ಇದಾಗಿದೆ.

ವೊಲ್ವೊ ಬಸ್ ದೇಶಕ್ಕೆ ಆಗಮಿಸಿ ಸುಮಾರು ಹತ್ತು ವರ್ಷ ಕಳೆದಿದೆ. ಬೆಂಗಳೂರಿನ ಹೊಸ ಕೋಟೆಯಲ್ಲಿ ಕಂಪನಿಯ ಘಟಕವಿರುವುದು ವಿಶೇಷ. ದೇಶದ ಹನ್ನೆರಡು ನಗರಗಳಲ್ಲಿ ಈಗ ವೊಲ್ವೊ ಬಸ್ ಸೇವೆ ಲಭ್ಯವಿದೆ.

Most Read Articles

Kannada
English summary
Karnataka State Road Transport Corporation will purchase 25 buses. These buses having toilet and kitchen facility. These multi-axle bus manufactured by Volvo. These Volvo bus price around Rs 80 lakh.
Story first published: Friday, April 20, 2012, 11:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X