45 ಸಾವಿರ ತಲುಪಿದ ಮಾರುತಿ ಎರ್ಟಿಗಾ ಬುಕ್ಕಿಂಗ್

ದೇಶದ ರಸ್ತೆಗೆ ಕಳೆದ ಏಪ್ರಿಲ್ ತಿಂಗಳಲ್ಲಿ ಆಗಮಿಸಿದ ಮಾರುತಿ ಸುಜುಕಿ ಎರ್ಟಿಗಾ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇಲ್ಲಿವರೆಗೆ ದಾಖಲೆಯ ಪ್ರಮಾಣದಲ್ಲಿ ಸುಮಾರು 45 ಸಾವಿರ ಜನರು ಎರ್ಟಿಗಾ ಕಾರನ್ನು ಬುಕ್ಕಿಂಗ್ ಮಾಡಿದ್ದಾರೆ. ಇದರಲ್ಲೂ ಡೀಸೆಲ್ ಆವೃತ್ತಿಯ ಎರ್ಟಿಗಾ ಕಾರು ಬಹುಬೇಡಿಕೆ ಪಡೆದುಕೊಂಡಿದೆ.

ಮಾರುತಿ ಸುಜುಕಿ ಬುಕ್ಕಿಂಗ್ ದಾಖಲೆ ಮಾಹಿತಿಯನ್ನು ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ಬಹಿರಂಗ ಪಡಿಸಿದ್ದಾರೆ. ಇದು ರಸ್ತೆಗಿಳಿದ ಒಂದು ತಿಂಗಳಲ್ಲಿಯೇ ಸುಮಾರು 32 ಸಾವಿರ ಗ್ರಾಹಕರು ಬುಕ್ಕಿಂಗ್ ಮಾಡಿದ್ದರು. ಜಾಗತಿಕ ಮಾರುಕಟ್ಟೆಯಲ್ಲೂ ಈ ಕಾರಿಗೆ ಬಹುಬೇಡಿಕೆಯಿದ್ದು, ಇಂಡೋನೇಷ್ಯಾದಲ್ಲಿ ಅನಾವರಣ ಮಾಡುವ ಮೊದಲೇ 8,500 ಗ್ರಾಹಕರು ಬುಕ್ಕಿಂಗ್ ಮಾಡಿದ್ದಾರೆ.

ಮಾರುತಿ ಸುಜುಕಿ ಕಂಪನಿಯ ಎಂಪಿವಿ ಎರ್ಟಿಗಾ ಜನಪ್ರಿಯತೆಗೆ ಪ್ರಮುಖ ಕಾರಣ ಅದರ ಅಗ್ಗದ ದರ. ಟೊಯೊಟಾ ಇನ್ನೋವಾ, ಮಹೀಂದ್ರ ಕ್ಷೈಲೊ ದರಕ್ಕೆ ಹೋಲಿಸಿದರೆ ಇದರ ದರ ತುಂಬಾ ಕಡಿಮೆಯಾಗಿದೆ. ಎರ್ಟಿಗಾ ಡೀಸೆಲ್ ಎಂಜಿನ್ ಆಯ್ಕೆಯಲ್ಲೂ ದೊರಕುವುದು ಇದರ ಬೇಡಿಕೆ ಹೆಚ್ಚಳಕ್ಕೆ ಕಾರಣವಾಗಿದೆ.

ಆದರೆ ಮಾರುತಿ ಸುಜುಕಿ ಎರ್ಟಿಗಾ ಕಾರಿನ ವೇಟಿಂಗ್ ಪಿರೆಯಿಡ್ ಹೆಚ್ಚಿದೆ. ಡೀಸೆಲ್ ಆವೃತ್ತಿ ಗ್ರಾಹಕರ ಕೈ ಸೇರಲು ಕನಿಷ್ಠವೆಂದರೂ 3-6 ತಿಂಗಳು ಬೇಕಿದೆ. ಇದೀಗ ಕಂಪನಿಯು ಎರ್ಟಿಗಾ ಉತ್ಪಾದನೆಯನ್ನು ಹೆಚ್ಚಿದ್ದು, ಗ್ರಾಹಕರ ಕಾಯುವಿಕೆಯನ್ನು ಕಡಿಮೆ ಮಾಡಲು ಬಯಸಿದೆ.

ಎರ್ಟಿಗಾ ಪೂರ್ಣ ವಿಮರ್ಶೆ ಓದಿ

Most Read Articles

Kannada
English summary
Maruti ertiga bags 45k bookings since launch
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X