ವ್ರೋಂ... ಮೈನವಿರೇಳಿಸುವ ಮಾರುತಿ ಸುಜುಕಿ Rally

ವಾಹನ ಸಾಹಸಿಗರು ಬಹುನಿರೀಕ್ಷೆಯಿಂದ ಕಾಯುತ್ತಿರುವ ಮಾರುತಿ ಸುಜುಕಿ ಡೆಸಾರ್ಟ್ ಸ್ಟ್ರೋಮ್ ಕಾರು ರಾಲಿ ಶುರುವಾಗಲು ಕ್ಷಣಗಣನೆ ಆರಂಭವಾಗಿದೆ. ಫೆಬ್ರವರಿ 20ರಿಂದ ಕಂಪನಿಯ ಹತ್ತನೇ ವರ್ಷದ ಡೆಸಾರ್ಟ್ ಸ್ಟ್ರೋಮ್ ನವದೆಹಲಿಯಲ್ಲಿ ಚಾಲನೆ ಪಡೆಯಲಿದೆ.

ಡೆಸಾರ್ಟ್ ಸ್ಟ್ರೋಮ್ ಕಾರು rally ಒಟ್ಟು ಆರು ದಿನಗಳ ಕಾಲ 3,500 ಕಿ.ಮೀ. ಕ್ರಮಿಸಲಿದೆ. ವಿಶೇಷವೆಂದರೆ ರಾಲಿ ರಾತ್ರಿಯೂ ನಡೆಯಲಿದೆ. ರಾಜಸ್ಥಾನ ಮತ್ತು ಗುಜರಾತಿನ ಬಿಸಿಲು, ಧೂಳು, ಒಣ ಪ್ರದೇಶಗಳಲ್ಲೂ ಸಾಹಸಿ ಚಾಲಕರು ತಮ್ಮ ಡ್ರೈವಿಂಗ್ ಸ್ಕಿಲ್ ಪ್ರದರ್ಶಿಸಲಿದ್ದಾರೆ.

ದೆಹಲಿಯಲ್ಲಿ ಹಸಿರು ನಿಶಾನೆ ಪಡೆದು ಆರಂಭವಾಗುವ ಡೆಸಾರ್ಟ್ ಸ್ಟ್ರೋಮ್ ಮೊದಲ ದಿನ ಬಿಕನೆರ, ಪ್ರೊಕನ್ ಮೂಲಕ ಸಾಗಲಿದೆ. ಮೂರನೇ ದಿನ ಜೈಸ್ಮಮರ್ ಮತ್ತು ಬುಜ್ ನ ಒಣ ಪ್ರದೇಶಗಳಲ್ಲಿ ಸಾಗಲಿದೆ. ಮುಂದಿನ ದಿನ ಕಚ್ ನ ಜವುಗು ಪ್ರದೇಶದಲ್ಲಿ ಮುಂದುವರೆಯಲಿದೆ. ಆರನೇ ದಿನ ಅಂತಿಮವಾಗಿ ಅಹಮದಾಬಾದ್ ನಲ್ಲಿ ಸಮಾಪ್ತಿಯಾಗಲಿದೆ.

ಈ ರಾಲಿಯು ರಾಜಸ್ಥಾನ ಮತ್ತು ಗುಜರಾತ್ ಭೂಪ್ರದೇಶಗಳಲ್ಲಿ ನಡೆಯಲಿದೆ. ಒಟ್ಟು 3,500 ಕಿ.ಮೀ. ದೂರದ ಈ ಕಾರು ರಾಲಿಯು ಸುಮಾರು ಆರುದಿನಗಳಲ್ಲಿ ಮುಗಿಯಲಿದೆ. ರಾತ್ರಿ ಕೂಡ ಈ ರಾಲಿ ನಡೆಯಲಿದೆ.

ಮಾರುತಿ ಸುಜುಕಿ ನೌಕರರ ತಂಡ ಕೂಡ rallyಯಲ್ಲಿ ಭಾಗವಹಿಸಲಿದೆ. ಮಹಿಳಾ ತಂಡಗಳು ನೂತನ ಸ್ವಿಫ್ಟ್ ಮೂಲಕ ಸಾಗಲಿದೆ. ಕಂಪನಿ ಆಯೋಜಿಸುವ ಡೆಸಾರ್ಟ್ ಸ್ಟ್ರೋಮ್ ನಲ್ಲಿ ಪ್ರಪ್ರಥಮ ಬಾರಿಗೆ ಟ್ರಕ್ ವಿಭಾಗ ಕೂಡ ಇದೆ. ಎಂಡ್ಯೂರ್ ವಿಭಾಗದಲ್ಲಿ ನಾಲ್ಕು ಎಎಂಡಬ್ಲ್ಯು ಟ್ರಕುಗಳು ಭಾಗವಹಿಸಲಿವೆ. (ಕನ್ನಡ ಡ್ರೈವ್ ಸ್ಪಾರ್ಕ್)

More from DriveSpark

Article Published On: Saturday, February 18, 2012, 11:30 [IST]
English summary
Car market leader Maruti Suzuki is all set to flag off its much awaited annual desert motorsport event Maruti Suzuki Desert Storm on 20th February, 2012 from New Delhi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+