ನಿಮ್ಮ ಟೇಸ್ಟಿಗೆ ತಕ್ಕಂತೆ ಮಾರುತಿ ಕಾರು ಮಾರ್ಪಾಡಿಸಿಕೊಳ್ಳಿ!!

Maruti Suzuki To Offer Customized Vehicles Soon
ರಸ್ತೆಯಲ್ಲಿ ಕೆಲವು ಕಾರು ಅಥವಾ ಬೈಕುಗಳನ್ನು ನೋಡಿರಬಹುದು. ಯಾವ ಕಂಪನಿಯ ಬ್ರಾಂಡ್ ಅಂತ ಸುಲಭದಲ್ಲಿ ಗುರುತಿಸುವುದು ಸಾಧ್ಯವಿಲ್ಲ. ಅದರ ಬಣ್ಣ, ಅಲಂಕಾರವೇ ಬದಲಾಗಿರುತ್ತದೆ. ಕೆಲವು ಸಾಮಾನ್ಯ ಬೈಕುಗಳ ರೂಪ ಸೂಪರ್ ಬೈಕಿಗಿಂತ ಸೂಪರ್ ಆಗಿರುತ್ತವೆ.

ಇದನ್ನು ವಾಹನ ಮಾರ್ಪಾಡಿಸಿಕೊಳ್ಳುವಿಕೆ ಎನ್ನಲಾಗುತ್ತದೆ. ಇದಕ್ಕಿರುವ ಇಂಗ್ಲಿಷ್ ಪದ Customized Vehicles. ಆದರೆ ಇಂತಹ ಮಾರ್ಪಾಡು, ಬದಲಾವಣೆ, ಪರಿವರ್ತನೆ ಐಷಾರಾಮಿ ಕಾರುಗಳಿಗೆ ಮಾತ್ರ ನೀಡಲಾಗುತ್ತದೆ. ಅಥವಾ ಕೆಲವೊಂದು ಸಾಮಾನ್ಯ ಕಾರುಗಳು ಕೂಡ ಅಸಾಮನ್ಯವಾಗಿ ಬದಲಾಗಿರುತ್ತದೆ.

ಗ್ರಾಹಕರ ಟೇಸ್ಟಿಗೆ ತಕ್ಕಂತೆ ಕಾರುಗಳನ್ನು ಮಾರ್ಪಾಡಿಸಿಕೊಡುವ ಹಲವು ಅಂಗಡಿಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿವೆ. ಮಾಮನ ಮಗನೊಬ್ಬ ತನ್ನ ಬೈಕಿಗೆ ಹೊಸ ರೂಪ ನೀಡಿದ ಸ್ಟೋರಿ ಈಗಾಗಲೇ ಓದಿದ್ದೀರಿ.

ಕೆಲವರು ತಮ್ಮ ಟೇಸ್ಟಿಗೆ ಅನುಗುಣವಾಗಿ ಕಾರುಗಳು ಇರಲು ಇಷ್ಟಪಡುತ್ತಾರೆ. ಬೈಕುಗಳಿಗೂ ಇದು ಅನ್ವಯಿಸುತ್ತದೆ. ಹೆಚ್ಚಿನ ಕಾರುಗಳಿಗೆ ಇಂತಹ ಕಸ್ಟಮೈಜ್ ಅವಕಾಶವಿಲ್ಲ. ರೋಲ್ಸ್ ರಾಯ್ಸ್ ಮತ್ತು ಬೆಂಟ್ಲಿಯಂತಹ ದುಬಾರಿ ಕಾರುಗಳನ್ನು ಕಂಪನಿಗಳು ಗ್ರಾಹಕರಿಗೆ ಬೇಕಾದಂತೆ ಮಾರ್ಪಡಿಸಿಕೊಡುತ್ತವೆ.

ಆದರೆ ಇದೀಗ ಮಾರುತಿ ಸುಜುಕಿ ಕೂಡ ಇಂತಹ ಅಂಗಡಿಗಳನ್ನು ಗ್ರಾಹಕ ಸ್ನೇಹಿಯಾಗಿ ತೆರೆಯಲಿದೆ ಎಂಬ ಶುಭಸುದ್ದಿ ಬಂದಿದೆ. ಮಾರುತಿ ದೇಶದ ಜನರ ವಿಶ್ವಾಸನೀಯ ಬ್ರಾಂಡ್ ಅಂತ ಈಗಾಗಲೇ ಮೊಹರು ಬಿದ್ದಿದೆ.

"ಗ್ರಾಹಕರ ಆಯ್ಕೆಗೆ ತಕ್ಕಂತೆ ಕಾರುಗಳನ್ನು ಪರಿವರ್ತಿಸಿಕೊಳ್ಳುವ ಅವಕಾಶ ನೀಡುವ ಕುರಿತು ಯೋಜನೆ ರೂಪಿಸಿದ್ದೇವೆ. ಕೆಲವು ಗ್ರಾಹಕರು ವಿಶೇಷ ಫೀಚರುಗಳನ್ನು ಬಯಸುತ್ತಾರೆ. ಅದನ್ನು ತಕ್ಷಣ ಅಳವಡಿಸಿಕೊಡಲಾಗುವುದು. ಇದಕ್ಕಾಗಿ ನಾವು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ" ಎಂದು ಕಂಪನಿಯ ಎಂಜಿನಿಯರಿಂಗ್ ವಿಭಾಗದ ನಿರ್ದೇಶಕರಾದ ಆರ್ ದಯಾಲ್ ಹೇಳಿದ್ದಾರೆ.

ಕಸ್ಟಮೈಜ್ಡ್ ಕಾರುಗಳನ್ನು ಕಂಪನಿ ಯಾವ ರೀತಿ ನೀಡುತ್ತದೆ? ಕಾರೊಂದನ್ನು ಮೋಡಿಫೈ ಅಥವಾ ಮಾರ್ಪಡಿಸಲು ಬೇಕಾದ ಸಲಕರಣೆಗಳನ್ನು ಹೊಂದಿರುವ ಐದು ಲಾಜಿಸ್ಟಿಕ್ ಹಬ್ ನ್ನು ಕಂಪನಿ ಆರಂಭದಲ್ಲಿ ತೆರೆಯಲು ಮಾರುತಿ ಸುಜುಕಿ ನಿರ್ಧರಿಸಿದೆಯಂತೆ.

ಯಾವೆಲ್ಲ ಫೀಚರುಗಳನ್ನು ಮತ್ತು ವಿಶೇಷತೆಗಳನ್ನು ಗ್ರಾಹಕರು ಇಷ್ಟಪಡುತ್ತಾರೆಯೋ ಅದನ್ನು ಕಂಪನಿಯು ಅಳವಡಿಸಿಕೊಡಲಿದೆ. ಈ ಯೋಜನೆಯನ್ನು ಹೆಚ್ಚು ಗ್ರಾಹಕ ಸ್ನೇಹಿಯಾಗಿಸಲು ಕಂಪನಿ ನಿರ್ಧರಿಸಿದೆ. ದಯಾಲ್ ಹೇಳುವ ಪ್ರಕಾರ ಈ ಕಸ್ಟಮೈಜ್ಡ್ ಪ್ರಕ್ರಿಯೆಗೆ ಹೆಚ್ಚೆಂದರೆ 24 ಗಂಟೆ ಸಾಕಂತೆ. ಹೀಗಾಗಿ ಗ್ರಾಹಕರು ಶೋರೂಂನಿಂದ ಕಾರು ಪಡೆಯಲು ಕೇವಲ ಒಂದು ದಿನ ಕಾದರೆ ಸಾಕು.

Most Read Articles

Kannada
English summary
Maruti Suzuki To Offer Customized Vehicles Soon. Maruti Suzuki, India's leading carmaker will soon offer a wide variety of options to its buyers to customize its models.
Story first published: Thursday, January 19, 2012, 12:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X