ಯಶ್ ಫಿಲ್ಮ್: ಪಪ್ಪನ ಮಾರುತಿ ಕಾರ್ ಮಿಸ್ಸಾಗಿದೆ!

ಯಶ್ ರಾಜ್ ನೂತನ ಕಾಮಿಡಿ ಫಿಲ್ಮ್ "ಮೇರಾ ಡ್ಯಾಡ್ ಕಿ ಮಾರುತಿ" ಚಿತ್ರಿಕರಣ ಭರದಿಂದ ನಡೆಯುತ್ತಿದೆ. ಅಸೀಮಾ ಚಬ್ಬರ್ ನಿರ್ದೇಶನದಲ್ಲಿ ಚಂಡಿಗಢದ ವೈ ಫಿಲ್ಮ್ ಸ್ಟುಡಿಯೋ ನಿರ್ಮಾಣದ ಈ ಚಿತ್ರದ ಹೆಸರೇ ವಿನೂತನ. ಚಿತ್ರದಲ್ಲಿ ಮಾರುತಿ ಹೆಸರಿರುವ ಕಾರಣದಿಂದ ಕನ್ನಡ ಡ್ರೈವ್ ಸ್ಪಾರ್ಕ್ ಇದರ ಬೆನ್ನು ಬಿದ್ದಿದೆ.

ಸಾದೀಕ್ ಸಲೀಮ್ ನಾಯಕ ನಟನಾಗಿರುವ "ಮೇರಾ ಡ್ಯಾಡ್ ಕಿ ಮಾರುತಿ" ಚಿತ್ರದಲ್ಲಿ ಹಾಸ್ಯದ ಸುರಿಮಳೆಯಿದೆಯಂತೆ. ಕಾಲೇಜಿನಲ್ಲಿ ಹುಡ್ಗಿಯರ ಮುಂದೆ ಪೋಸ್ ನೀಡಲು ತಂದೆಯ ಮಾರುತಿ ಸುಜುಕಿ ಕಾರೊಂದನ್ನು ನಾಯಕ ತರುತ್ತಾನಂತೆ. ಆದ್ರೆ ದುರಾದೃಷ್ಟವಶಾತ್ ಆ ಕಾರು ಕಳ್ಳತನವಾಗುತ್ತದೆ. ನಂತರದ ಕಾರು ಹುಡುಕಾಟದ ಆತನ ಪೇಚಾಟವೇ ಚಿತ್ರದ ಮುಖ್ಯ ವಸ್ತು.

ಈಗ ಬಾಲಿವುಡ್ ಚಲನಚಿತ್ತಗಳಲ್ಲಿ ಕಾರುಗಳಿಗೆ ಪ್ರಮುಖ ಸ್ಥಾನ ನೀಡಲಾಗುತ್ತದೆ. ಕೆಲವು ಚಲನಚಿತ್ತಗಳಲ್ಲಿ ಕಾರುಗಳೇ ಪ್ರಮುಖ ವಿಷಯವಾಗಿರುತ್ತವೆ. ಜನರಿಗಿರುವ ಕಾರು ಕ್ರೇಝಿಗೆ ತಕ್ಕಂತೆ ಚಿತ್ರ ರೂಪಿಸಲಾಗುತ್ತದೆ. ಕನ್ನಡದ ಸಿದ್ಲಿಂಗು ಚಿತ್ರದಲ್ಲೂ ಕಾರೊಂದು ಕಳ್ಳತನವಾಗುತ್ತದೆ.

"ಮೇರಾ ಡ್ಯಾಡ್ ಕಿ ಮಾರುತಿ" ಚಿತ್ರದ ಕುರಿತು ನೆಟ್ ಲೋಕದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅಂದಹಾಗೆ ಈ ಚಿತ್ರದ ಪೋಸ್ಟರಿನಲ್ಲಿ ಮಿಸ್ಸಿಂಗ್ ಅಂತ ಮಾರುತಿ ಸುಜುಕಿ ಎರ್ಟಿಗಾ ಚಿತ್ರ ಬಳಸಲಾಗಿದೆ. ಈ ನೆಪದಲ್ಲಿ ಮಾರುತಿ ಸುಜುಕಿ ಎರ್ಟಿಗಾ ಕಾರಿನ ಬಗ್ಗೆ ಕೊಂಚ ಮಾಹಿತಿ ತಿಳಿದುಕೊಳ್ಳೋಣ.

ಬೆಂಗಳೂರು ಸೇರಿದಂತೆ ಮಾರುತಿ ಸುಜುಕಿ ಎರ್ಟಿಗಾ ಇತ್ತೀಚೆಗೆ ರಸ್ತೆಗಿಳಿದಿತ್ತು. ಉದ್ಯಾನನಗರಿಯಲ್ಲಿ ಇದರ ಆರಂಭಿಕದ ದರ 6.12 ಲಕ್ಷ ರುಪಾಯಿಯಿಂದ 8,72,140 ರು.ವರೆಗಿದೆ. ಎರ್ಟಿಗಾ ಎಂಪಿವಿ ಆರು ಆವೃತ್ತಿಗಳಲ್ಲಿ ದೊರಕುತ್ತದೆ. ಎಲ್‌ಎಕ್ಸ್‌ಐ, ವಿಎಕ್ಸ್‌ಐ, ಝಡ್‌ಎಕ್ಸ್‌‌ಐ, ಎಲ್‌ಡಿಐ, ವಿಡಿಐ ಮತ್ತು ಝಡ್‌ಎಕ್ಸ್ಐ ಆರು ಪ್ರಮುಖ ಆವೃತ್ತಿಗಳಾಗಿವೆ.

ಮಾರುತಿ ಸುಜುಕಿ ಎರ್ಟಿಗಾ ಸಂಪೂರ್ಣ ವಿಮರ್ಶೆ ಓದಿರಿ.

More from DriveSpark

Article Published On: Wednesday, May 16, 2012, 13:19 [IST]
English summary
Bollywood seems to be busy in making films related to cars. Now Yash Raj Films youth films studio 'Y-Films' has began the new film titled Mere Dad Ki Maruti. Maruti Suzuki India's latest MPV Ertiga will play a key in this movie. This film is about a boy, who sneaks his dad’s fancy new car out to impress the college hottie and how all hell breaks loose when he loses it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+