ಬೆಂಗಳೂರಿನಲ್ಲಿ ಪೊಲೊ ಕಾರಿನ ದರವೆಷ್ಟು?
ಫೋಕ್ಸ್ ವ್ಯಾಗನ್ ಪೊಲೊ ಕಾರು ಏಳು ಆವೃತ್ತಿಗಳು ಮತ್ತು 6 ಬಣ್ಣಗಳ ಆಯ್ಕೆಗಳಲ್ಲಿ ದೊರಕುತ್ತದೆ. ಇದು 1.6 ಲೀಟರಿನ 4 ಸಿಲಿಂಡರ್ ಎಂಜಿನ್ ಹೊಂದಿದೆ. ವಿಂಡೋ ಮತ್ತು ಡೋರುಗಳನ್ನು ರಿಮೋಟ್ ಕಂಟ್ರೋಲ್ ಮೂಲಕ ತೆರೆಯಲು ಸಾಧ್ಯವಾಗಿರುವುದು ಇದರ ಪ್ರಮುಖ ಜನಮನಸೆಳೆದ ವಿಶೇಷತೆ.
ಫೋಕ್ಸ್ ವ್ಯಾಗನ್ ಪೊಲೊ ಕಾರು ಡೀಸೆಲ್ ಮತ್ತು ಪೆಟ್ರೋಲ್ ಆಯ್ಕೆಯಲ್ಲಿ ದೊರಕುತ್ತದೆ. ಪೊಲೊ ಪ್ರತಿಲೀಟರ್ ಡೀಸೆಲಿಗೆ ಸುಮಾರು 22.07 ಕಿ.ಮೀ. ಮೈಲೇಜ್ ಮತ್ತು ಪ್ರತಿಲೀಟರ್ ಪೆಟ್ರೋಲಿಗೆ 17.2 ಕಿ.ಮೀ. ಮೈಲೇಜ್ ನೀಡುತ್ತದೆ.
ಬೆಂಗಳೂರಿನಲ್ಲಿ ಫೋಕ್ಸ್ ವ್ಯಾಗನ್ ಪೊಲೊ ಆರಂಭಿಕ ದರ 4,65323 ರುಪಾಯಿ. ಇದು ಕಂಪನಿ ಪರಿಚಯಿಸಿದ ಕಾರುಗಳಲ್ಲೇ ಅಗ್ಗದ ಆವೃತ್ತಿ. ಪೊಲೊ ಕಾರಿನ ಎಲ್ಲಾ ಆವೃತ್ತಿಗಳ ದರ ಈ ಕೆಳಗಿನಂತೆ ಇದೆ.
| ಆವೃತ್ತಿ | ಎಂಜಿನ್ | ದರ(ಬೆಂಗಳೂರು ಎಕ್ಸ್ ಶೋರೂಂ) |
| ಪೊಲೊ ಡೀಸೆಲ್ ಕಂಫರ್ಟ್ ಲೈನ್ | 1.2 ಲೀಟರ್ | 6,39,413 ರು. |
| ಪೊಲೊ ಡೀಸೆಲ್ ಹೈ ಲೈನ್ | 1.2 ಲೀಟರ್ | 7,33,147 ರು. |
| ಪೊಲೊ ಡೀಸೆಲ್ ಟ್ರೆಂಡ್ ಲೈನ್ | 1.2 ಲೀಟರ್ | 7,6,790 ರು. |
| ಪೊಲೊ ಪೆಟ್ರೋಲ್ ಕಂಫರ್ಟ್ ಲೈನ್ | 1.2 ಲೀಟರ್ | 5,27,947 ರು. |
| ಪೊಲೊ ಪೆಟ್ರೋಲ್ ಹೈಲೈನ್ | 1.2 ಲೀಟರ್ | 6,21,782 ರು. |
| ಪೊಲೊ ಪೆಟ್ರೋಲ್ ಟ್ರೆಂಡ್ ಲೈನ್ | 1.6 ಲೀಟರ್ | 6,56,741 ರು. |
| ಪೊಲೊ ಪೆಟ್ರೋಲ್ ಟ್ರೆಂಡ್ ಲೈನ್ | 1.2 ಲೀಟರ್ | 4,65,323 ರು. |
ನಿಮಗಿಷ್ಟವಾಗಬಹುದಾದ ಐದು ಬೆಸ್ಟ್ ಕಾಂಪ್ಯಾಕ್ಟ್ ಕಾರುಗಳು>>


Click it and Unblock the Notifications









