ಬಿಎಂಡಬ್ಲ್ಯು 'ವಿಶ್ವದ ಅತ್ಯಂತ ಪ್ರಭಾವಶಾಲಿ ಆಟೋ ಬ್ರಾಂಡ್'

ವಿಶ್ವದ ಅತ್ಯಂತ ಪ್ರಭಾವಶಾಲಿ ಆಟೋ ಬ್ರಾಂಡ್ ಎಂಬ ಖ್ಯಾತಿಗೆ ಜರ್ಮನಿಯ ಐಷಾರಾಮಿ ವಾಹನ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಪಾತ್ರವಾಗಿದೆ. ಫೋರ್ಬ್ಸ್ ನಿಯತಕಾಲಿಕ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಇದು ದಾಖಲಾಗಿದೆ. ಒಟ್ಟಾರೆಯಾಗಿ 9ನೇ ಸ್ಥಾನದಲ್ಲಿ ಗುರುತಿಸಿಕೊಂಡಿರುವ ಬಿಎಂಡಬ್ಲ್ಯು ವಾಹನ ಉತ್ಪಾದಕರ ಪೈಕಿ ನಂ.1 ಎನಿಸಿಕೊಂಡಿದೆ.

ಟೊಯೊಟಾ, ಮರ್ಸಿಡಿಸ್ ಬೆಂಝ್, ಹೋಂಡಾ, ಆಡಿ, ಫೋಕ್ಸ್‌ವ್ಯಾಗನ್ ಹಾಗೂ ಫೋರ್ಡ್‌ಗಳಂತಹ ಇತರ ವಾಹನ ತಯಾರಕ ಸಂಸ್ಥೆಗಳು ಸಹ ಪಟ್ಟಿಯಲ್ಲಿ ಸೇರ್ಪಡೆಯಾಗಿವೆ.

1916ನೇ ಇಸವಿಯಲ್ಲಿ Bayerische Motoren Werke (BMW) ಎಂಬವರಿಂದ ಸ್ಥಾಪನೆಯಾದ ಬಿಎಂಡಬ್ಲ್ಯು, ರೋಲ್ಸ್ ರಾಯ್ಸ್ ಮೋಟಾರ್ ಕಾರ್ಸ್ ಹಾಗೂ ಮಿನಿ ಬ್ರಾಂಡ್‌ನ ಪೋಷಕ ಸಂಸ್ಥೆ ಎನಿಸಿಕೊಂಡಿದೆ. ಇದರ ಪ್ರಧಾನ ಕಚೇರಿ ಜರ್ಮನಿಯ ಮುನಿಚ್ ಎಂಬಲ್ಲಿ ಸ್ಥಿತಗೊಂಡಿದೆ.

ಈ ಪೈಕಿ ಟೊಯೊಟಾ 14, ಮರ್ಸಿಡಿಸ್ ಬೆಂಝ್ 16, ಹೋಂಡಾ 19, ಆಡಿ 32, ಫೋಕ್ಸ್‌ವ್ಯಾಗನ್ 45 ಹಾಗೂ ಫೋರ್ಡ್ 59ನೇ ಸ್ಥಾನದಲ್ಲಿದೆ.

Most Read Articles

Kannada
English summary
Forbes list of most powerful brands in the world- BMW is ranked 9th overall and 1st among auto makers. The other automakers to feature in the list include, Toyota, Mercedes Benz, Honda, Audi, VW and Ford.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X