ಫೋರ್ಡ್ ಇಕೊಸ್ಪೋರ್ಟ್ 50 ರಾಷ್ಟ್ರಗಳಿಗೆ ರಫ್ತು
ಭಾರತದಲ್ಲಿ ಉತ್ಪನ್ನವಾಗಲಿರುವ ಈ ಕಾಂಪಾಕ್ಟ್ ಎಸ್‌ಯುವಿ ಸದ್ಯದಲ್ಲೇ ವಿದೇಶಕ್ಕೆ ರಫ್ತು ಆಗಲಿದೆ. ಅಂದರೆ ದೇಶದಲ್ಲಿ ಫೋರ್ಡ್ ಇಕೊಸ್ಪೋರ್ಟ್ ಸ್ಪರ್ಧಾತ್ಮಕ ದರಗಳಲ್ಲಿ ಲಭ್ಯವಾಗಲಿದೆ ಎಂದು ಆಟೋ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.
ಫಿಗೊ ಹ್ಯಾಚ್‌ಬ್ಯಾಕ್‌ಗೆ ಅನುಸರಿಸಲಾದ ಅದೇ ಯೋಜನೆಯನ್ನು ಹಿಂಬಾಸಲು ಫೋರ್ಡ್ ಗುರಿ ಹೊಂದಿದೆ. ಈ ಹಿಂದೆ ಫಿಗೊ ಹ್ಯಾಚ್‌ಬ್ಯಾಕ್ ಭಾರತದಿಂದ 38 ರಾಷ್ಟ್ರಗಳಿಗೆ ರಫ್ತು ಆಗಿದ್ದವು. ಇದರೊಂದಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ರಫ್ತು ಗುಣಮಟ್ಟ ವರ್ಧಿಸಲಿದೆ. ಬಹುತೇಕ ಎಲ್ಲ ಫೋರ್ಡ್ ಯುನಿಟ್‌ಗಳು ಚೆನ್ನೈನಲ್ಲಿರುವ ಘಟಕದಿಂದ ಸಿದ್ಧಗೊಳ್ಳಲಿದೆ.
ಚೆನ್ನೈ ಹೊರತಾಗಿ ಗುಜರಾತ್‌ನಲ್ಲಿರುವ ಸನಂದ್ ಘಟಕಕ್ಕೆ ಒಂದು ಮಿಲಿಯನ್ ಡಾಲರ್ ಹೂಡಿಕೆ ಮಾಡುವ ಯೋಜನೆ ಫೋರ್ಡ್ ಪರಿಗಣನೆಯಲ್ಲಿದೆ. ಸನಂದ್ ಘಟಕ ವಾರ್ಷಿಕವಾಗಿ 2.7 ಲಕ್ಷ ಎಂಜಿನ್ ಜತೆಗೆ 2.4 ಲಕ್ಷ ವಾಹನಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಚೆನ್ನೈ ಹಾಗೂ ಗುಜರಾತ್ ಘಟಕಗಳು ಒಟ್ಟು ಸೇರಿ ವಾರ್ಷಿಕವಾಗಿ 4.4 ಲಕ್ಷ ವಾಹನ ಹಾಗೂ 6.1 ಲಕ್ಷ ಎಂಜಿನ್ ಸಿದ್ಧಪಡಿಸುವ ಬೃಹತ್ ಯೋಜನೆಯನ್ನು ಫೋರ್ಡ್ ಹೊಂದಿದೆ.
ಅಂದ ಹಾಗೆ ಫೋರ್ಡ್‌ನ ಜನಪ್ರಿಯ ಕಾಂಪಾಕ್ಟ್ ಎಸ್‌ಯುವಿ ಇಕೊಸ್ಪೋರ್ಟ್ ಆವೃತ್ತಿ ಜೂನ್ ವೇಳೆಗೆ ಭಾರತೀಯ ರಸ್ತೆಯನ್ನು ಪ್ರವೇಶಿಸಲಿದೆ.
ಇವನ್ನೂ ಓದಿ: ಆಡಿ ಐಷಾರಾಮಿ ಕಾರು ಲಾಂಚ್‌ಗೆ ತಾರಾ ಮೆರಗು


Click it and Unblock the Notifications
