ಹ್ಯುಂಡೈ ಗ್ರಾಂಡ್ ಐ10 ರಸ್ತೆಗಿಳಿಯಲು ಸಿದ್ಧ
ದೇಶದ ವಾಹನ ಪ್ರಿಯರು ಕಾತರದಿಂದ ಕಾಯುತ್ತಿದ್ದ ನೂತನ ಹ್ಯುಂಡೈ ಗ್ರಾಂಡ್ ಐ10 ಹ್ಯಾಚ್‌ಬ್ಯಾಕ್ ಕಾರು ರಸ್ತೆಗಿಳಿಯಲು ಸಜ್ಜಾಗಿ ನಿಂತಿದೆ. ವಾಹನೋದ್ಯಮ ಮಾಹಿತಿಗಳ ಪ್ರಕಾರ ನೂತನ ಗ್ರಾಂಡ್ ಐ10 ಸೆಪ್ಟೆಂಬರ್ 3, ಮಂಗಳವಾರದಂದು ಲಾಂಚ್ ಆಗಲಿದೆ.
ಗ್ರಾಂಡ್ ಐ10 ಅನಧಿಕೃತಿ ಬುಕ್ಕಿಂಗ್ ಈಗಾಗಲೇ ಆರಂಭಗೊಂಡಿರುವ ಬಗ್ಗೆ ಮಾಹಿತಿಯಿದೆ. ಇದರಲ್ಲಿ ಐ10 ಆವೃತ್ತಿಯಲ್ಲಿ ಆಳವಡಿಸಲಾದ 1.2 ಲೀಟರ್ ಕಪ್ಪ ಪೆಟ್ರೋಲ್ ಹಾಗೂ 1.1 ಲೀಟರ್ ಡಿಸೆಲ್ ಎಂಜಿನ್ ಆಳವಡಿಸಲಾಗುತ್ತಿದೆ. ಇದು ಅನುಕ್ರಮವಾಗಿ 82 ಹಾಗೂ 79 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ.
ಪ್ರಮುಖವಾಗಿಯೂ ಗರಿಷ್ಠ ಇಂಧನ ಕ್ಷಮೆತೆಯು ಐ10 ಆವೃತ್ತಿಯ ಸಕರಾತ್ಮಕ ಅಂಶವಾಗಿರಲಿದೆ. ಇದರ ಡೀಸೆಲ್ ಎಂಜಿನ್ ಪ್ರತಿ ಲೀಟರ್‌ಗೆ 24 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ ಒಟ್ಟು ನಾಲ್ಕು ವೆರಿಯಂಟ್‌ಗಳಲ್ಲಿ ಆಗಮನವಾಗುತ್ತಿದ್ದು, ಇರಾ, ಮ್ಯಾಗ್ನಾ, ಸ್ಪೋರ್ಟ್ಸ್ ಮತ್ತು ಆಸ್ಟಾ ಎಂಬ ವೆರಿಯಂಟ್‌ಗಳಿಂದ ಹೆಸರಿಸಲ್ಪಡಲಿದೆ.
ಸಂಪೂರ್ಣವಾಗಿ ನೂತನ ಫ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣವಾಗಿರುವ ಗ್ರಾಂಡ್ ಐ10 ಹ್ಯಾಚ್‌ಬ್ಯಾಕ್ ಕಾರು ಜನಪ್ರಿಯ ಮಾರುತಿ ಸ್ವಿಫ್ಟ್ ಆವೃತ್ತಿಗೆ ಪ್ರತಿಸ್ಪರ್ಧಿ ಎನಿಸಿಕೊಳ್ಳಲಿದೆ. ಹಾಗೆಯೇ 4.4 ಲಕ್ಷ ರು.ಗಳ ಅಸುಪಾಸಿನಲ್ಲಿ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯಿದೆ.


Click it and Unblock the Notifications









