ಮಾರಾಟ ಕುಸಿತ; ಮಹೀಂದ್ರ ಉತ್ಪಾದನೆ ತಾತ್ಕಾಲಿಕ ಸ್ಥಗಿತ

By Nagaraja

ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಕುಸಿತ ಅನುಭವಿಸಿರುವ ಹಿನ್ನಲೆಯಲ್ಲಿ ಜುಲೈ ತಿಂಗಳಲ್ಲಿ ಎಂಟು ದಿನಗಳ ಕಾಲ ಉತ್ಪಾದನೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ದೇಶಿಯ ಮುಂಚೂಣಿಯ ಕಾರು ತಯಾರಕರಾದ ಮಹೀಂದ್ರ ಆಂಡ್ ಮಹೀಂದ್ರ ನಿರ್ಧರಿಸಿದೆ.

ಮಾರುಕಟ್ಟೆ ಅಗತ್ಯಕ್ಕೆ ಅನುಸಾರವಾಗಿ ನಿರ್ಮಾಣ ಒಂದುಗೂಡಿಸುವ ಭಾಗವಾಗಿ ತಾತ್ಕಾಲಿಕವಾಗಿ ಉತ್ಪಾದನೆ ಸ್ಥಗಿತಗೊಳಿಸಲಾಗುತ್ತದೆ ಎಂದು ಕಂಪನಿ ತಿಳಿಸಿದೆ.

ಜೂನ್ ತಿಂಗಳಲ್ಲಿ ಶೇಕಡಾ 7.8ರಷ್ಟು ಕುಸಿತ ಅನುಭವಿಸಿದ್ದ ಮಹೀಂದ್ರ 38,092 ಯುನಿಟ್‌ಗಳನ್ನಷ್ಟೇ ಮಾರಾಟ ಮಾಡುವಲ್ಲಿ ಯಶಸ್ವಿಯಾಗಿತ್ತು. ಹಾಗೆಯೇ ಮಹೀಂದ್ರ ತ್ರಿಚಕ್ರ ವಾಹನಗಳು ಶೇಕಡಾ 11 ಹಾಗೂ ಬಸ್ಸು ಹಾಗೂ ಟ್ರಕುಗಳು ಶೇಕಡಾ 25ರಷ್ಟು ಕುಸಿತ ಅನುಭವಿಸಿದ್ದವು.

ದೇಶದ ಎಸ್‌ಯುವಿ ದೈತ್ಯ ಎನಿಸಿಕೊಂಡಿರುವ ಮಹೀಂದ್ರ ಆಂಡ್ ಮಹೀಂದ್ರ, ಕ್ವಾಂಟೊ, ಎಕ್ಸ್‌ಯುವಿ500, ಸ್ಕಾರ್ಪಿಯೊ ಹಾಗೂ ಬುಲೆರೊ ಆವೃತ್ತಿಗಳ ಮೂಲಕ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿತ್ತು.

ಕಳೆದ ಕೇಂದ್ರ ಬಜೆಟ್‌ನಲ್ಲಿ ಅಬಕಾರಿ ಶುಲ್ಕ ಹೆಚ್ಚಳ ಮಾಡಿರುವುದು ಸಹ ಮಹೀಂದ್ರವನ್ನು ಮಾರಕವಾಗಿ ಬಾಧಿಸಿತ್ತು. ಇದು ಸಹ ಮಾರಾಟ ಕುಸಿತಕ್ಕೆ ಕಾರಣವಾಗಿತ್ತು.

Most Read Articles

Kannada
English summary
India's largest UV manufacturer Mahindra & Mahindra has said it will suspend production of its vehicles in July for as much as eight days at its factories to align with sales requirements.
Story first published: Monday, July 15, 2013, 12:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X