ಮತ್ತೆ ಬರುತ್ತಿದೆ ಡಸ್ಟರ್; ಈ ಬಾರಿ ನಿಸ್ಸಾನ್ ಕಮಾಲ್

Written By:
ಭಾರತೀಯ ಮಾರುಕಟ್ಟೆಗೆ ಡಸ್ಟರ್ ಹೆಸರಿನ ಮತ್ತೊಂದು ಕಾರು ಸದ್ಯದಲ್ಲೇ ಪಾದರ್ಪಣೆಯಾಗಲಿದೆ. ಜಗತ್ತಿನ ಪ್ರತಿಷ್ಠಿತ ಆಟೋ ಕಂಪನಿಗಳಲ್ಲಿ ಒಂದಾಗಿರುವ ನಿಸ್ಸಾನ್, ದೇಶದ ಮಾರುಕಟ್ಟೆಗೆ ಹೊಸ ಡಸ್ಟರನ್ನು ಪರಿಚಯಿಸಲಿದೆ.

ಮೂಲಗಳ ಪ್ರಕಾರ 'ಎನ್‌ಎಚ್79' ಕೋಡ್ ಹೆಸರು ಪಡೆದುಕೊಂಡಿರುವ ನಿಸ್ಸಾನ್ ಡಸ್ಟರ್ ಅಕ್ಟೋಬರ್ ತಿಂಗಳಲ್ಲಿ ಪ್ರವೇಶಿಸಲಿದೆ. ಇದು ಹಬ್ಬದ ಆವೃತ್ತಿಯಲ್ಲಿ ಇನ್ನಷ್ಟು ಆಕರ್ಷಣೆಗೆ ಕಾರಣವಾಗಲಿದೆ. ಸಂಪೂರ್ಣವಾಗಿಯೂ ನಿಸ್ಸಾನ್ ಶೈಲಿ ಪಡೆದುಕೊಳ್ಳಲಿರುವ ಹೊಸ ಡಸ್ಟರ್ ಸ್ಪೋರ್ಟ್ ಯುಟಿಲಿಟಿ ವಾಹನ ಉತ್ತಮ ಮಾರಾಟ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಿದೆ.

ನೂತನ ಡಸ್ಟರ್ ಮುಂಭಾಗ ಸೇರಿದಂತೆ ಹಿಂಬದಿಯಲ್ಲಿ ಹೊಸ ವಿನ್ಯಾಸ ಪಡೆಯಲಿದ್ದು, ಸೆವೆನ್ ಸೀಟರ್ ಆಯ್ಕೆಯಲ್ಲೂ ಲಭಿಸುವ ನಿರೀಕ್ಷೆಯಿದೆ. ಇನ್ನು ಕಾರಿನ ಒಳಭಾಗವನ್ನು ಪರಿಷ್ಕೃತಗೊಳಿಸಲಾಗಿದೆ. ಇಲ್ಲಿ ನಿಸ್ಸಾನ್ ಶೈಲಿಯ ಸ್ಟೀರಿಂಗ್ ವೀಲ್, ಮ್ಯೂಸಿಕ್ ಸಿಸ್ಟಂ ಹಾಗೂ ಇನ್ಸ್ಟ್ರುಮೆಂಟ್ ಪ್ಯಾನೆಲ್ ದೊರಕಲಿದೆ.

ಅಂತಿಮವಾಗಿ ರೆನೊ ಡಸ್ಟರ್‌ಗಿಂತಲೂ ಕಡಿಮೆ ಸ್ಮರ್ಧಾತ್ಮಕ ದರಗಳಲ್ಲಿ ಲಾಂಚ್ ಮಾಡುವುದು ನಿಸ್ಸಾನ್ ಗುರಿಯಾಗಿರಲಿದೆ. ಹಾಗೆಯೇ ರೆನೊಗಿಂತ ಹೆಚ್ಚು ಪ್ರೀಮಿಯಂ ಲುಕ್ ಪಡೆಯಲಿದೆ.

English summary
Japanese car maker Nissan is planning to launch it's own Duster in Indian market. As per information Nissan will launch Duster by October this year.
Story first published: Saturday, May 25, 2013, 18:06 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark