ಭಾರತೀಯ ಕಾರುಗಳ ವಿಶಿಷ್ಟ ವ್ಯಕ್ತಿತ್ವ; 10 ಕುತೂಹಲಕಾರಿ ಅಂಶ

By Nagaraja

ನಮ್ಮದ್ದು ಬೆಳೆದು ಬರುತ್ತಿರುವ ದೇಶ. ಚಿಕ್ಕವನಿಂದಲೇ ಇದೇ ಮಾತನ್ನು ಆಲಿಸಿಕೊಂಡು ಬಂದಿದ್ದೇವೆ. ಈಗಲೂ ಅದೇ ಮಾತು ಪುನರಾವರ್ತನೆಯಾಗುತ್ತಿದೆ. ಹಾಗೆಂದ ಮಾತ್ರಕ್ಕೆ ಇಲ್ಲಿ ಅಭಿವೃದ್ದಿ ಆಗುತ್ತಿಲ್ಲವೇ? ಖಂಡಿತವಾಗಿಯೂ ಇದೆ ಅಭಿವೃದ್ಧಿ ಎಂಬ ಮಂತ್ರವನ್ನು ಸದಾ ಪಠಿಸಿದ್ದಲ್ಲಿ ಮಾತ್ರ ಗುರಿ ಮುಟ್ಟಲು ಸಾಧ್ಯ.

ಫಾಟಿ ಪ್ರದೇಶದಲ್ಲಿ ಸುರಕ್ಷಿತ ವಾಹನ ಚಾಲನೆ ಹೇಗೆ ?

ಹೌದು, ಭಾರತೀಯರ ಮನೋಸ್ಥಿತಿಯು ಹೆಚ್ಚು ಕಡಿಮೆ ಹಾಗೇನೇ. ಎಲ್ಲವೂ ಕಡಿಮೆ ದರಗಳಿಗೆ ಸಿಗಬೇಕು. ಒಂಥರ 'ಚೀಪ್ ಆಂಡ್ ಬೆಸ್ಟ್' ಪಾಲಿಸಿ. ಇದೇ ಕಾರಣಕ್ಕಾಗಿ ನಮ್ಮ ದೈನಂದಿನ ವಾಹಕವಾಗಿರುವ ಕಾರುಗಳನ್ನು ಆಡಂಬರ ಅಥವಾ ವಿಲಾಸಿ ವಿಭಾಗದಲ್ಲಿ ಸೇರಿಸಿರುತ್ತೇವೆ.

ನಿಮ್ಮ ಕಾರಿನ ಮೈಲೇಜ್ ಹೆಚ್ಚಿಸಲು 15 ಅಮೂಲ್ಯ ಸಲಹೆಗಳು

ಅಂದ ಮಾತ್ರಕ್ಕೆ ಭಾರತೀಯ ಕಾರುಗಳು ಹೇಗಿರುತ್ತವೆ. "ಯಥಾ ರಾಜ ತಥಾ ಪ್ರಜಾ" ಇಲ್ಲಿ ಹೆಚ್ಚು ಅನ್ವಯವಾಗುತ್ತದೆ. ಯಾಕೆ ಅಂತೀರಾ? ಗ್ರಾಹಕರ ಬಯಕೆಗಳಿಗನುಸಾರವಾಗಿ ವಾಹನ ತಯಾರಕ ಸಂಸ್ಥೆಗಳು ಕಡಿಮೆ ಬೆಲೆಯಲ್ಲಿ ಗರಿಷ್ಠ ಗುಣಮಟ್ಟ ನೀಡುವ ಕಸರತ್ತು ಮಾಡುತ್ತದೆ.

ಗೇರ್ ಬದಲಾವಣೆಯ ಒಳಗುಟ್ಟು ಗೊತ್ತೇನು ?

ಸಾಮಾನ್ಯವಾಗಿ ನಮ್ಮವರನ್ನು ವಿಶಾಲ ಹೃದಯದವರು ಎಂದು ನಾವು ಕೊಂಡಾಡುತ್ತೇವೆ. ಟ್ರಾಫಿಕ್‌ನಲ್ಲಿ ಇತರರಿಗೆ ಮಾರ್ಗದರ್ಶನ ನೀಡುವ ನಾವು ಸ್ವಂತ ವಿಚಾರಕ್ಕೆ ಬಂದಾಗ ಈ ನೀತಿಯನ್ನು ಗಾಳಿಗೆ ತೂರುತ್ತೇವೆ. ಯಾಕೆಂದರೆ ನಮ್ಮದ್ದು ಫಾಸ್ಟ್ ಲೈಫ್ ಅಲ್ಲವೆ? ಇದೇ ರೀತಿ ಭಾರತೀಯ ಕಾರುಗಳು ಸಹ ವಿಶೇಷ ವ್ಯಕ್ತಿತ್ವ ಗುಣವನ್ನು ಹೊಂದಿರುತ್ತದೆ. ನೀವು ಸೂಕ್ಷ್ಮವಾಗಿ ಗಮನಿಸಿದ್ದಲ್ಲಿ ನಾವು ಹೇಳದೆಯೇ ನಿಮಗಿದನ್ನು ಅರಿಯಬಹುದು. ಇನ್ನು ಗೊತ್ತಾಗಿಲ್ಲವೇ? ಚಿಂತೆ ಮಾಡಬೇಡಿ ಇಂದಿನ ಈ ಲೇಖನದಲ್ಲಿ ನಾವಿದರ ಬಗ್ಗೆ ಗಂಭೀರವಾಗಿ ಚರ್ಚಿಸಲಿದ್ದೇವೆ.

ಭಾರತೀಯ ಕಾರುಗಳ ವಿಶಿಷ್ಟ ವ್ಯಕ್ತಿತ್ವ; 10 ಕುತೂಹಲಕಾರಿ ಅಂಶ

ಭಾರತೀಯರ ಬೇಡಿಕೆಗಳಿಗೆ ಅನುಸಾರವಾಗಿ ವಾಹನ ತಯಾರಕ ಸಂಸ್ಥೆಗಳು ಸಹ ಕೆಲವೊಂದು ಗಿಮಿಕ್ ಅಥವಾ ಮಾರಾಟ ತಂತ್ರಗಳನ್ನು ಅನುಸರಿಸುತ್ತವೆ. ಯಾಕೆಂದರೆ ಮೇಲೆ ತಿಳಿಸಿದ ರೀತಿಯಲ್ಲೇ ನಮಗೆ ಕಡಿಮೆ ದರಗಳಲ್ಲಿ ಶ್ರೇಷ್ಠ ಗುಣಮಟ್ಟ ನೀಡಬೇಕಲ್ಲವೇ? ಮುಂದಿನ ಪುಟಗಳ ಮೂಲಕ ಭಾರತೀಯ ಕಾರುಗಳ ಬಗ್ಗೆ 10 ಆಸಕ್ತಿದಾಯಕ ವಿಚಾರಗಳ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಿರಿ

1. ನಮ್ಮ ಕಾರುಗಳು ಕಾಂಪಾಕ್ಟ್ ಅಲ್ಲವೇ?

1. ನಮ್ಮ ಕಾರುಗಳು ಕಾಂಪಾಕ್ಟ್ ಅಲ್ಲವೇ?

ನಮ್ಮದ್ದು ಅಚ್ಚುಕಟ್ಟಿನ ಜೀವನ. ಅದೇ ರೀತಿ ಕಾರಿನ ವಿನ್ಯಾಸದ ವಿಚಾರದಲ್ಲೂ ಅದೇ ಶಿಷ್ಟಾಚಾರವನ್ನು ಪಾಲಿಸುತ್ತಿದ್ದೇವೆ. ಭಾರತದಲ್ಲಿ ಕಾರುಗಳನ್ನು ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಉದಾಹರಣೆಗೆ ನಾಲ್ಕು ಮೀಟರ್ ಉದ್ದ ಮಿತಿಯೊಳಗಿದ್ದರೆ ನಿಮಗೆ ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದು. ಇದೇ ಕಾರಣಕ್ಕಾಗಿ ವಾಹನ ತಯಾರಕ ಸಂಸ್ಥೆಗಳು ಬಹಳ ಇಕ್ಕಟ್ಟಿನ ಕಾಂಪಾಕ್ಟ್ ಸೆಡಾನ್ ಕಾರುಗಳನ್ನು ನಿರ್ಮಿಸುತ್ತದೆ. ಅಷ್ಟೇ ಯಾಕೆ ಬಿಗಿಯಾದ ಟ್ರಾಫಿಕ್ ಪರಿಸ್ಥಿತಿಗೂ ನಮ್ಮ ಕಾರು ಹೊಂದಿಕೊಳ್ಳಬೇಕಲ್ಲವೇ? ಇನ್ನೊಂದೆಡೆ ನೀವು ಅಮೆರಿಕವನ್ನು ಹೋಲಿಸಿದರೆ ಅಲ್ಲಿನ ಷೆವರ್ಲೆ ಕ್ರೂಝ್‌ಗಳಂತಹ ಕಾಂಪಾಕ್ಟ್ ಸೆಡಾನ್ ಕಾರುಗಳು ತುಂಬಾನೇ ಸ್ಥಳಾವಕಾಶ ಹೊಂದಿರುತ್ತದೆ. ಇದೇ ಕಾರಣಕ್ಕಾಗಿ ನಮ್ಮ ಹ್ಯುಂಡೈ ಎಕ್ಸ್‌ಸೆಂಟ್‌ಗಳಂತಹ ಕಾರುಗಳು ಬಹುಶ: ರೋಲರ್ ಕಾಸ್ಟರ್‌ಗೆ ಸಮಾನವಾಗಿರುತ್ತದೆ.

2. ಹ್ಯಾಚ್‌ಬ್ಯಾಕ್ ಕಾರುಗಳಿಗೂ ಬೇಕು ಢಿಕ್ಕಿ

2. ಹ್ಯಾಚ್‌ಬ್ಯಾಕ್ ಕಾರುಗಳಿಗೂ ಬೇಕು ಢಿಕ್ಕಿ

ಪ್ರಾರಂಭದಲ್ಲಿ ಹೋಂಡಾ ಬ್ರಿಯೊ ಉತ್ತಮ ವಿನ್ಯಾಸ ಹೊಂದಿರುವ ಹೊರತಾಗಿಯೂ ಭಾರತದಲ್ಲಿ ನಿರೀಕ್ಷಿತ ಮಟ್ಟದ ಯಶ ಸಾಧಿಸಲಿಲ್ಲ. ಆದರೆ ಇದಕ್ಕೆ ಢಿಕ್ಕಿ ಜೋಡಣೆ ಮಾಡಿದಾಗ ಉತ್ತಮ ಮಾರಾಟ ಕಂಡುಕೊಳ್ಳುವಲ್ಲಿ ಸಾಧ್ಯವಾಗಿತ್ತು. ಇದೇ ಕಾರಣಕ್ಕಾಗಿ ಮಾರುತಿ ಸುಜುಕಿ ಡಿಜೈರ್ ಅಥವಾ ಸ್ವಿಫ್ಟ್‌ಗಳಂತಹ ಕಾರುಗಳು ಈಗಲೂ ಅತ್ಯಂತ ಹೆಚ್ಚು ಮಾರಾಟ ಸಾಧಿಸುತ್ತದೆ. ಯಾಕೆಂದರೆ ಭಾರತೀಯ ಮನೋಸ್ಥಿತಿಯೇ ಹಾಗಿರುತ್ತದೆ. ನಮಗೆ ಕಾರು ಸಣ್ಣದಾಗಿದ್ದರೂ ಬೂಟ್ ಸ್ಪೇಸ್ ಬೇಕೇ ಬೇಕು ಅಲ್ಲವೇ?

3. ಮಿನ ಮಿನ ಮಿನಗುವ ಕಾರುಗಳೆಂದರೆ ತುಂಬಾ ಇಷ್ಟ!

3. ಮಿನ ಮಿನ ಮಿನಗುವ ಕಾರುಗಳೆಂದರೆ ತುಂಬಾ ಇಷ್ಟ!

ಹೌದು, ಮಿನಗುವ ಕಾರುಗಳನ್ನು ಭಾರತೀಯರು ಹೆಚ್ಚಾಗಿ ಇಷ್ಟಪಡುತ್ತಾರೆ. ಇದೇ ಕಾರಣಕ್ಕಾಗಿ ವಾಹನ ತಯಾರಕ ಸಂಸ್ಥೆಗಳು ಹೆಚ್ಚು ಕ್ರೋಮ್ ಸ್ಪರ್ಶ ನೀಡುತ್ತವೆ. ಯಾಕೆಂದರೆ ಕ್ರೋಮ್ ಟಚ್ ನೀಡಿದರೆ ಕಾರು ಇನ್ನಷ್ಟು ಪ್ರೀಮಿಯಂ ಆಗುತ್ತದೆ ಎಂಬುದು ನಮ್ಮ ನಂಬಿಕೆ. ಇದಕ್ಕೊಂದು ಉತ್ತಮ ಉದಾಹರಣೆಯನ್ನು ನೀವು ಚಿತ್ರದ ಮೂಲಕ ನೋಡಬಹುದು.

4. ಸ್ಪೋರ್ಟಿ ಅಥವಾ ವಿಶೇಷ ಆವೃತ್ತಿಗಳು ಬರಿ ಹೆಸರಿಗಷ್ಟೇ ಸೀಮಿತ

4. ಸ್ಪೋರ್ಟಿ ಅಥವಾ ವಿಶೇಷ ಆವೃತ್ತಿಗಳು ಬರಿ ಹೆಸರಿಗಷ್ಟೇ ಸೀಮಿತ

ಭಾರತದಲ್ಲಿ ಹಾಗೆ ಹೀಗೊಮ್ಮೆ ಹಬ್ಬ ಹರಿದಿನಗಳು ಅಥವಾ ಇನ್ನಿತರ ವಿಶೇಷ ಸಂದರ್ಭಗಳು ಬಂದಾಗ ವಿಶೇಷ ಆವೃತ್ತಿಗಳನ್ನು ಬಿಡುಗಡೆ ಮಾಡುವುದು ವಾಡಿಕೆ. ಇದರಲ್ಲಿ ಮಾರಾಟ ತಂತ್ರಗಾರಿಕೆಯನ್ನು ವಾಹನ ತಯಾರಕ ಸಂಸ್ಥೆಗಳು ಅನುಸರಿಸುತ್ತಿವೆ ಎಂಬುದು ಕಟುಸತ್ಯ. ಆದರೆ ನಿಜವಾಗ್ಲೂ ಇದು ಅತ್ಯುತ್ತಮ ಗುಣಮಟ್ಟವನ್ನು ಹೊಂದಿರುತ್ತದೆಯೇ? ಖಂಡಿತ ಇಲ್ಲ ನಮ್ಮ ಸ್ಪೋರ್ಟಿ ಅಥವಾ ಲಿಮಿಟೆಡ್ ಎಡಿಷನ್‌ಗಳು ತುಂಬಾನೇ ಕಳಪೆ ಮಟ್ಟದಲ್ಲಿರುತ್ತದೆ ಎಂಬುದಕ್ಕೆ ಇದುವೇ ಸಾಕ್ಷಿ. ಅಷ್ಟೇ ಯಾಕೆ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ ಎಂಬುದು ಸಹ ಬೇಸರದ ಸಂಗತಿ.

5. ಪ್ರೀಮಿಯಂ ಕಾರುಗಳಿಗೆ ಮಾತ್ರ ಸೇಫ್ಟಿ ಸಾಕೇ?

5. ಪ್ರೀಮಿಯಂ ಕಾರುಗಳಿಗೆ ಮಾತ್ರ ಸೇಫ್ಟಿ ಸಾಕೇ?

ಹೌದು, ನಮ್ಮ ದೇಶದ ಎಂಟ್ರಿ ಲೆವೆಲ್ ಕಾರುಗಳಲ್ಲಿ ಪಯಣಿಸುವ ಸವಾರರು ಮನುಷ್ಯರಲ್ಲವೇ? ಇದು ಕೇಳಲೇ ಬೇಕಾದ ಪ್ರಶ್ನೆ. ಯಾಕೆಂದರೆ ಇಲ್ಲಿ ಪ್ರೀಮಿಯಂ ವೆರಿಯಂಟ್ ಖರೀದಿಸಿದ್ದಲ್ಲಿ ಮಾತ್ರ ಸುರಕ್ಷತೆ ಲಭ್ಯವಾಗುವುದು. ನಮ್ಮ ಮನೋಸ್ಥಿತಿ ಹೇಗಿರುತ್ತದೆ ಅಂದರೆ ಸೇಫ್ಟಿ ಇಲ್ಲದಿದ್ದರೂ ಪರವಾಗಿಲ್ಲ ಕಾರಿಗೆ ಬ್ಲೂಟೂತ್ ಸಂಪರ್ಕವಿದೆಯೇ? ಎಂದು ತಯಾರಕರನ್ನು ಪ್ರಶ್ನಿಸುತ್ತೇವೆ. ಇಂದಿಗೂ ದೇಶದಲ್ಲಿ ಓಡಾಡುವ ಬಹುತೇಕ ಕಾರುಗಳಲ್ಲಿ ಏರ್ ಬ್ಯಾಗ್, ಎಬಿಎಸ್, ಇಎಸ್‌ಪಿಗಳಂತಹ ಸುರಕ್ಷತಾ ವೈಶಿಷ್ಟ್ಯಗಳು ಕನಿಷ್ಠ ಐಚ್ಛಿಕ ಆಯ್ಕೆಯಾಗಿ ರೂಪದಲ್ಲೂ ಲಭಿಸುತ್ತಿಲ್ಲ. ಇದೇ ಕಾರಣಕ್ಕಾಗಿ ಜಗತ್ತಿನ ಅತ್ಯಂತ ಅಪಾಯಕಾರಿ ರಸ್ತೆಗಳಲ್ಲಿ ಭಾರತವೂ ಕಾಣಿಸಿಕೊಂಡಿರುವುದು.

6. ಕಳಪೆ ಮಟ್ಟದ ಆಕ್ಸೆಸರಿ

6. ಕಳಪೆ ಮಟ್ಟದ ಆಕ್ಸೆಸರಿ

ಅದು ಸ್ಪಾಯ್ಲರ್ ಆಗಿರುಬಹುದು, ಅಥವಾ ಬೋಲ್ಟ್ ಗಾರ್ಡ್, ಬಂಪರ್, ಹೆಚ್ಚುವರಿ ಲೈಟ್ ಹೀಗೆ ಪಟ್ಟಿ ಮಾಡುತ್ತಾ ಸಾಗಿದರೆ ಕಾರಿನ ಎಲ್ಲ ಆಕ್ಸೆಸರಿಗಳು ಕಳಪೆ ಗುಣಮಟ್ಟವನ್ನು ಹೊಂದಿರುತ್ತದೆ. ಇದು ಅಷ್ಟೇ ಅಪಾಯಕಾರಿ ಕೂಡಾ ಹೌದು. ನೀವೇ ಚಿತ್ರದಲ್ಲಿ ನೋಡುತ್ತಿರುವಂತೆಯೇ ಮೂರನೇ ವ್ಯಕ್ತಿಯ ಬಳಿ ಹೋಗುವ ಖರೀದಿಗಾರರು ಸ್ಟೆಡ್ ಸ್ಟೆಪ್‌ಗಳಂತಹ 'ಎಕ್ಸ್‌ಟ್ರಾ ಫಿಟ್ಟಿಂಗ್' ಮಾಡಿಸಿಕೊಳ್ಳುತ್ತಾರೆ. ಇದು ಬಿಡುವಿಲ್ಲದ ಟ್ರಾಫಿಕ್‌ ಅಥವಾ ತಿರುವಿನಲ್ಲಿ ರಸ್ತೆ ಬದಿಯಲ್ಲಿ ನಡೆದಾಡುವ ಪ್ರಯಾಣಿಕರಿಗೆ ಅಥವಾ ಇತರ ವಾಹನಗಳಿಗೆ ಒರೆಸಿಕೊಳ್ಳುವ ಸಾಧ್ಯತೆಯಿದೆ.

7. ಬೀಜ್ ಇಂಟಿರಿಯರ್ ಅಗತ್ಯವಿದೆಯೇ?

7. ಬೀಜ್ ಇಂಟಿರಿಯರ್ ಅಗತ್ಯವಿದೆಯೇ?

ಯುರೋಪ್ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಬೀಜ್ ಇಂಟಿರಿಯರ್ ಭಾರತದಲ್ಲಿ ಅಗತ್ಯವಿದೆಯೇ? ಖಂಡಿತ ಇಲ್ಲ. ಇದು ಕಾರಿಗೆ ಪ್ರೀಮಿಯಂ ಲುಕ್ ನೀಡುವುದಂತೂ ನಿಜ. ಆದರೆ ನಾವು ಹಲವಾರು ಅಗತ್ಯಗಳಿಗಾಗಿ ಕಾರುಗಳನ್ನು ಬಳಕೆ ಮಾಡುತ್ತೇವೆ. ಹಾಗಾಗಿ ಇದರಲ್ಲಿ ಇದರಲ್ಲಿ ತುಂಬಿಕೊಂಡಿರುವ ಕೊಳಕನ್ನು ಶುಚಿಗೊಳಿಸುವುದೇ ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ. ಇನ್ನು ನೀವೇ ಹೇಳಿ ನಮಗೆ ಬೇಕೇ ಬೀಜ್ ಇಂಟಿರಿಯರ್? ಅಷ್ಟಕ್ಕೂ ಬೇಕಿದ್ದರೆ ಕಾರನ್ನು ಶುಚಿಯಾಗಿಡುವುದನ್ನು ಮೊದಲ ಕಲಿಯಿರಿ.

8. ಸ್ಪೋರ್ಟಿ ಕಾರುಗಳು ತುಂಬಾನೇ ವಿರಳ

8. ಸ್ಪೋರ್ಟಿ ಕಾರುಗಳು ತುಂಬಾನೇ ವಿರಳ

ಬಹುಶ: ಇದು ನಮ್ಮ ಒರಟಾದ ರಸ್ತೆಗಳಿಂದಾಗಿರಬಹುದು. ಆದರೆ ನಮ್ಮ ಚಾಲಕರು ಮಾತ್ರ ಕ್ರೀಡಾ ಶೈಲಿಯಲ್ಲಿ ಕಾರು ಓಡಿಸಲು ಮಾತ್ರ ಪ್ರಖ್ಯಾತರು. ನಮ್ಮದ್ದು ಫ್ಯಾಮಿಲಿ ಕಾರು ಅದೇ ಕಾರಣಕ್ಕಾಗಿ ಅಪ್ಪ, ಅಮ್ಮ, ಅಕ್ಕ, ತಮ್ಮ, ಪತ್ನಿ, ಮಕ್ಕಂಳದಿರು ಹೀಗೆ ಎಲ್ಲರೂ ಕೆಲವೊಮ್ಮೆ ಏಕಕಾಲದಲ್ಲಿ ಇವರೆಲ್ಲರನ್ನು ಕೊಂಡೊಯ್ಯಬೇಕಾದ ಕ್ಲಿಷ್ಟಕರ ಪರಿಸ್ಥಿತಿ ಎದುರಾಗುತ್ತದೆ. ಇದರಿಂದಾಗಿ ಕಾರಿನ ಹ್ಯಾಂಡ್ಲಿಂಗ್ ಬಗ್ಗೆ ಮಾತನಾಡದಿರುವುದೇ ಒಳಿತು.

9. ಸಣ್ಣ ಚಕ್ರಗಳ ಬಳಕೆ

9. ಸಣ್ಣ ಚಕ್ರಗಳ ಬಳಕೆ

ಭಾರತೀಯ ಕಾರುಗಳಲ್ಲಿ ವೀಲ್ ಆರ್ಚ್ ದೊಡ್ಡದಿದ್ದರೂ ಆದರೆ ಜೋಡಣೆಯಾಗುವ ಚಕ್ರಗಳ ನಡುವಣ ಅಂತರ ತುಂಬಾನೇ ಜಾಸ್ತಿಯಾಗಿರುತ್ತದೆ. ಇದಕ್ಕಿರುವ ಪ್ರಮುಖ ಕಾರಣ ರಸ್ತೆ ಗುಣಮಟ್ಟ ಚೆನ್ನಾಗಿಲ್ಲ. ಅಲ್ಲದೆ ಏರಿಳಿತ, ಗುಂಡಿ ಅಥವಾ ಹೆಚ್ಚು ಸ್ಪೀಡ್ ಬ್ರೇಕರ್‌ನಿಂದ ಕೂಡಿರುವ ನಮ್ಮ ರಸ್ತೆಯಲ್ಲಿ ಚಕ್ರಗಳು ಕಾರಿನ ಮೇಲ್ಬಾಗಕ್ಕೆ ಒರೆಸಿಕೊಳ್ಳುವ ಸಾಧ್ಯತೆಯಿರುತ್ತದೆ. ಆದರೆ ನಿಧಾನವಾಗಿ ಪರಿಸ್ಥಿತಿ ಬದಲಾಗುತ್ತಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಟಾಟಾ ಜೆಸ್ಟ್‌ನಂತಹ ಕಾರುಗಳು 15 ಅಂಚು ಅಲಾಯ್ ವೀಲ್ ಪಡೆದುಕೊಂಡಿರುವುದು ನಿಜಕ್ಕೂ ಸ್ವಾಗತಾರ್ಹವೇ ಸರಿ.

10. ಕಾರಿನ ಒಳಮೈ

10. ಕಾರಿನ ಒಳಮೈ

ಪ್ರತಿಯೊಂದು ವಾಹನ ತಯಾರಕ ಸಂಸ್ಥೆಗಳು ತಮ್ಮ ಕಾರಿನ ಒಳಗಡೆ ಗರಿಷ್ಠ ಸ್ಥಳಾವಕಾಶವನ್ನು ನೀಡುವ ಪ್ರಯತ್ನ ಮಾಡುತ್ತದೆ. ಯಾಕೆಂದರೆ ನಾವಿದರ ಬಗ್ಗೆ ಯೋಚಿಸುವುದೇ ಇಲ್ಲ. ಅದು ಎಷ್ಟೇ ಚಿಕ್ಕ ಕಾರಾಗಿರಬಹುದು ಐದು, ಆರು, ಏಳು ಹೀಗೆ ಸಾಧ್ಯವಾದಷ್ಟು ಪ್ರಯಾಣಿಕರನ್ನು ತುಂಬಿಸಿಕೊಂಡು ಹೋಗುವುದು ನಮ್ಮ ಫಜೀತಿ ಆಗಿರುತ್ತದೆ. ಏನಂತೀರಾ?

ಭಾರತೀಯ ಕಾರುಗಳ ವಿಶಿಷ್ಟ ವ್ಯಕ್ತಿತ್ವ; 10 ಕುತೂಹಲಕಾರಿ ಅಂಶ

ನಮ್ಮ ಈ ಲೇಖನದಲ್ಲಿ ಭಾರತೀಯ ಕಾರುಗಳ ಬಗ್ಗೆ ಬೊಟ್ಟು ಮಾಡಿರುವ 10 ಅಂಶಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಲು ಮರೆಯದಿರಿ. ಇಲ್ಲಿ ನಾವೇನಾದರೂ ಮಿಸ್ ಮಾಡಿಕೊಂಡಿದ್ದಲ್ಲಿ ನಿಮ್ಮ ಅಮೂಲ್ಯ ಕಾಮೆಂಟ್ಸ್ ಮೂಲಕ ಅದನ್ನು ವ್ಯಕ್ತಪಡಿಸಬಹುದು.


More from DriveSpark

Article Published On: Thursday, September 11, 2014, 11:05 [IST]
English summary
Our cars have their own personalities too. Personal transport in India is serious business, and now cars are increasingly designed specifically for India, or at least homologated very differently to say, their European counterparts. Here is the 10 Things We’ve Noticed About Indian Cars.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+