ಹೊಸ ಪೆಟ್ರೋಲ್, ಡೀಸೆಲ್ ಎಂಜಿನ್‌ನೊಂದಿಗೆ ಆಡಿ ಎ1 ಅನಾವರಣ

By Nagaraja

ಜರ್ಮನಿಯ ಐಷಾರಾಮಿ ವಾಹನ ತಯಾರಕ ಸಂಸ್ಥೆಯಾಗಿರುವ ಆಡಿ ತನ್ನ ಶ್ರೇಣಿಯ ವಾಹನಗಳಿಗೆ ಇನ್ನೆರಡು ಮಾದರಿಗಳನ್ನು ಸೇರಿಸಿಕೊಂಡಿದೆ. ಅದುವೇ ಆಡಿ ಎ1 ಮತ್ತು ಎ1 ಸ್ಪೋರ್ಟ್ಸ್‌ಬ್ಯಾಕ್. ಅಲ್ಲದೆ ಇದೇ ತಿಂಗಳಿಂದ ನಿಮ್ಮ ನೆಚ್ಚಿನ ಆಡಿ ಕಾರನ್ನು ಮುಗಂಡವಾಗಿ ಕಾಯ್ದಿರಿಸಿಕೊಳ್ಳಬಹುದಾಗಿದೆ.

ಆರಂಭದಲ್ಲಿ ಬ್ರಿಟನ್ ತಲುಪಲಿರುವ ಈ ಮಾದರಿಗಳು ಬಳಿಕ ಇತರ ಜಾಗತಿಕ ಮಾರುಕಟ್ಟೆಯನ್ನು ತಲುಪಲಿದೆ. ಜರ್ಮನಿಯ ಐಷಾರಾಮಿ ಸಂಸ್ಥೆಯು ಎ1 ಹಾಗೂ ಎ1 ಸ್ಪೋರ್ಟ್ಸ್‌ಬ್ಯಾಕ್ ಮಾದರಿಗಳಿಗೆ ಅನುಕ್ರಮವಾಗಿ 14.8 ಹಾಗೂ 20.9 ಲಕ್ಷ ರು.ಗಳನ್ನು ನಿಗದಿಪಡಿಸಿದೆ.


ಹೊಸ ಎ1 ಹಾಗೂ ಎ1 ಸ್ಪೋರ್ಟ್ಸ್‌ಬ್ಯಾಕ್ ಮಾದರಿಯಲ್ಲಿ ಕೆಲವೊಂದು ಕಾಸ್ಮೆಟಿಕ್ ಜೊತೆಗೆ ಎಂಜಿನ್ ಮಾನದಂಡಗಳಲ್ಲೂ ಬದಲಾವಣೆ ತರಲಾಗಿದೆ. ಇದು ಪರಿಷ್ಕೃತ ಗ್ರಿಲ್, ಹೆಡ್ ಲ್ಯಾಂಪ್ ಮತ್ತು ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ. ಎರಡು ಪೆಟ್ರೋಲ್ ಹಾಗೂ ಒಂದು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಇದು ಲಭ್ಯವಿರಲಿದೆ. ಅವುಗಳೆಂದರೆ.

1.0 ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ (95 ಬಿಎಚ್‌ಪಿ)
1.4 ಲೀಟರ್ ತ್ರಿ ಸಿಲಿಂಡರ್ ಡೀಸೆಲ್ ಎಂಜಿನ್ (90 ಬಿಎಚ್‌ಪಿ)

audi a1 sportsback

ಇದರ ಜೊತೆಗೆ ಅತ್ಯಂತ ಶಕ್ತಿಶಾಲಿ ಎಂಜಿನ್ ಆಯ್ಕೆಯನ್ನು ಆಡಿ ನೀಡುತ್ತಿದೆ. ಗ್ರಾಹಕರಿಗೆ 5 ಹಾಗೂ 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆ ಮಾಡುವ ಅವಕಾಶವಿರಲಿದೆ. ಅಲ್ಲದೆ ಐಚ್ಛಿಕ 7 ಸ್ಪೀಡ್ ಎಸ್ ಟ್ರಾನಿಕ್ ಟ್ವಿನ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಇರಲಿದೆ.
Most Read Articles

Kannada
English summary
German luxury automobile manufacturer Audi has been in the news recently for intruding several new products. They have now added two more models to their product range. These are the A1 and A1 Sportback, which will be ready to book from November itself.
Story first published: Saturday, November 15, 2014, 14:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X