ಆಟೋ ರಿಕ್ಷಾಗಿಂತಲೂ ಹೆಚ್ಚು ಸುರಕ್ಷಿತ ಕ್ವಾಡ್ರಾಸೈಕಲ್
ಇನ್ನೇನು ಕೆಲವು ತಿಂಗಳುಗಳಲ್ಲಿ ನಿರ್ಮಾಣ ಸಜ್ಜುಗೊಂಡಿರುವ ಬಜಾಜ್ ಆರ್‌ಇ60 ನಾಲ್ಕು ಚಕ್ರದ ವಾಹನ ದೇಶದ ರಸ್ತೆ ಪ್ರವೇಶಿಸಲಿದೆ. ಇದರಂತೆ ರಸ್ತೆ ನಿಯಮಗಳಿಂದ ಎದುರಾಗುವ ತೊಡಕುಗಳನ್ನು ಕೇಂದ್ರ ಸರಕಾರ ನಿವಾರಿಸಿದೆ. ಅಂತೆಯೇ ದೇಶದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಯಾಗಿರುವ ಬಜಾಜ್, ತನ್ನ ಬಹುನಿರೀಕ್ಷಿತ ಆರ್‌ಇ60 ಸಿಎನ್‌ಜಿ ವೆರಿಯಂಟ್ ರಸ್ತೆ ಪರೀಕ್ಷೆಯಲ್ಲಿ ತೊಡಗಿಸಿಕೊಂಡಿದೆ. ಇದು ಪ್ರಮುಖವಾಗಿಯೂ ದಶಕಗಳಿಂದಲೂ ದೇಶದ ರಸ್ತೆಯಲ್ಲಿ ಸದ್ದು ಮಾಡುತ್ತಿರುವ ಐಕಾನಿಕ್ ಆಟೋ ರಿಕ್ಷಾಗಳಿಗೆ ಬದಲಿ ವ್ಯವಸ್ಥೆಯಾಗಿರಲಿದೆ.
ಆಟೋ ರಿಕ್ಷಾಗಳ ಯುಗಾಂತ್ಯ..? ಮುಂದೆ ಓದಿ
ಇಲ್ಲಿ ಗಮನಾರ್ಹ ವಿಷಯವೆಂದರೆ ಬಜಾಜ್ ಆರ್‌ಇ60 ನೂತನ ಸೆಗ್ಮೆಂಟ್ (ವಿಭಾಗ) ಕ್ವಾಡ್ರಾಸೈಕಲ್‌ನಲ್ಲಿ (ನಾಲ್ಕು ಚಕ್ರದ ವಾಹನ) ಗುರುತಿಸಿಕೊಳ್ಳಲಿದೆ. ಇದು ಆಟೋ ರಿಕ್ಷಾಗಳಿಗಿಂತ ಸಂಪೂರ್ಣ ಭಿನ್ನವಾಗಿರಲಿದೆ. ಹಾಗಿದ್ದರೂ ಸುರಕ್ಷತೆ ದೃಷ್ಟಿಕೋನದಲ್ಲಿ ವಾಣಿಜ್ಯ ವಿಭಾಗದಲ್ಲಿ ಆಟೋ ರಿಕ್ಷಾಗಳನ್ನು ಹಿಂದಿಕ್ಕುವ ಸಾಧ್ಯತೆಗಳಿದೆ. ಈ ಎಲ್ಲದರ ಮೂಲಕ ಬಜಾಜ್ ತನ್ನ ಸಾನಿಧ್ಯವನ್ನು ಇನ್ನಷ್ಟು ಬಲಪಡಿಸಲಿದೆ.

ಈ ಹಿಂದೆಯೂ ಹಲವು ಬಾರಿ ರಸ್ತೆ ಪರೀಕ್ಷೆ ವೇಳೆ ಬಜಾಜ್ ಆರ್‌ಇ60 ಕ್ಯಾಮೆರಾದ ರಹಸ್ಯ ಕಣ್ಣುಗಳಿಗೆ ಸೆರೆ ಸಿಕಿದ್ದವು. ಆದರೆ ಈ ಬಾರಿ ಪುಣೆಯ ಬಜಾಜ್ ಘಟಕದಲ್ಲಿ ಆರ್‌ಇ60 ಸಿಎನ್‌ಜಿ ವೆರಿಯಂಟ್ ರೋಡ್ ಟೆಸ್ಟಿಂಗ್ ವೇಳೆ ಸೆರೆಸಿಕ್ಕಿದೆ.

ಇತ್ತೀಚೆಗಷ್ಟೇ ಕ್ವಾಡ್ರಾಸೈಕಲ್ ವಿಭಾಗಕ್ಕೆ ಕೇಂದ್ರ ಸರಕಾರ ಹಸಿರು ನಿಶಾನೆ ತೋರಿತ್ತು. ಇದೀಗ ಹೊಸತಾದ ಬಜಾಜ್ ಆರ್‌ಇ60 ಇದೇ ವಿಭಾಗದಲ್ಲಿ ಗುರುತಿಸಿಕೊಳ್ಳಲಿದೆ.

ಈ ಮೂಲಕ ದೇಶದಲ್ಲಿ ಕ್ವಾಡ್ರಾಸೈಕಲ್ ವಿಭಾಗಕ್ಕೆ ಸೇರಿದ ಏಕಮಾತ್ರ ವಾಹನವೆಂಬ ಗೌರವಕ್ಕೆ ಬಜಾಜ್ ಆರ್‌ಇ60 ಪಾತ್ರವಾಗಲಿದೆ. ದೇಶದ ಇತರ ವಾಹನ ತಯಾರಕ ಸಂಸ್ಥೆಗಳು ಇನ್ನಷ್ಟೇ ಈ ವಿಭಾಗದಲ್ಲಿ ವಾಹನಗಳನ್ನು ಲಾಂಚ್ ಮಾಡಬೇಕಾಗಿದೆ.

ಅಂದ ಹಾಗೆ ಕ್ವಾಡ್ರಾಸೈಕಲ್ ವಿಭಾಗಕ್ಕೆ ಸೇರಬೇಕಾದರೆ ಕೆಲವೊಂದು ನಿಬಂಧನೆಗಳನ್ನು ಪಾಲಿಸಬೇಕಾಗಿದೆ. ವಾಹನದ ಮುಂಭಾಗದಲ್ಲಿ ಕ್ವಾಡ್ರಾಸೈಕಲ್ ಗುರುತಿಸಿಕೊಳ್ಳಲು ದೊಡ್ಡದಾದ 'ಕ್ಯೂ' ಸಂಕೇತ ಲಗತ್ತಿಸಬೇಕಾಗಿದೆ. ಅಲ್ಲದೆ ನಾಲ್ಕು ಚಕ್ರ, ಗಟ್ಟಿಯಾದ ಮೇಲ್ಚಾವಣಿ ಜತೆಗೆ ಬಾಗಿಲು ಮತ್ತು ಚಾಲಕ ಸೇರಿದಂತೆ ನಾಲ್ಕು ಜನರಿಗೆ ಕುಳಿತುಕೊಳ್ಳಬಹುದಾದ ವ್ಯವಸ್ಥೆ ಹೊಂದಿರಬೇಕು.

ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ ಬಜಾಜ್ ಆರ್‌ಇ60 ಸಿಎನ್‌ಜಿ ವೆರಿಯಂಟ್ ಪೆಟ್ರೋಲ್‌ಗೆ ಸಮಾನವಾದ 200ಸಿಸಿ ಡಿಟಿಎಸ್‌ಐ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಸಾಧ್ಯತೆಯಿದೆ. ಹಾಗಿದ್ದರೂ ಸದ್ಯದಕ್ಕೆ ಪವರ್ ಹಾಗೂ ಟಾರ್ಕ್ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಿಲ್ಲ.

ಇನ್ನು ಮೈಲೇಜ್ ಬಗ್ಗೆ ಮಾತನಾಡುವುದಾದ್ದಲ್ಲಿ ಕಂಪನಿ ಹೇಳುವ ಪ್ರಕಾರ ಪ್ರತಿ ಲೀಟರ್‌ಗೆ 35 ಕೀ.ಮೀ.ಗಿಂತಲೂ ಹೆಚ್ಚು ಇಂಧನ ಕ್ಷಮತೆ ಹೊಂದಿರಲಿದೆ.


Click it and Unblock the Notifications








