ಆಟೋ ಎಕ್ಸ್ ಪೋದಲ್ಲಿ ಬಿಎಂಡಬ್ಲ್ಯು 3 ಸಿರೀಸ್ ಲಾಂಚ್

Written By:

ಹಾಗೊಂದು ವೇಳೆ ನೀವು ದೀರ್ಘ ಪಯಣವನ್ನು ಇಷ್ಟಪಡುವುದಾದ್ದಲ್ಲಿ ಅದಕ್ಕಾಗಿ ಸೂಕ್ತ ಗಾಡಿಯೊಂದರ ಹುಡುಕಾಟದಲ್ಲಿದ್ದರೆ ಇದೀಗಷ್ಟೇ ಬಿಡುಗಡೆಯಾಗಿರುವ ಬಿಎಂಡಬ್ಲ್ಯು 3 ಸಿರೀಸ್ ಗ್ರ್ಯಾನ್ ಟುರಿಸ್ಮೊ ಅತ್ಯುತ್ತಮ ಆಯ್ಕೆಯಾಗಿರಲಿದೆ.

ಪ್ರತಿಷ್ಠಿತ 2014 ಆಟೋ ಎಕ್ಸ್ ಪೋದಲ್ಲಿ ಜರ್ಮನಿ ಮೂಲದ ಐಷಾರಾಮಿ ಕಾರು ತಯಾರಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯುನಿಂದ ಮಗದೊಂದು ಅತ್ಯಾಕರ್ಷಕ ಕಾರು ಲಾಂಚ್ ಆಗಿದೆ. ಇದರ ಎಕ್ಸ್ ಶೋ ರೂಂ ದರ 42.75 ಲಕ್ಷ ರು.ಗಳಾಗಿವೆ.

ಅಂದ ಹಾಗೆ ಬಿಎಂಡಬ್ಲ್ಯು 3 ಸಿರೀಸ್ ಜಿಟಿ ಕಾರು ಭಾರತದ ಚೆನ್ನೈ ಘಟಕದಲ್ಲೇ ಸ್ಥಳೀಯವಾಗಿ ಜೋಡಣೆಯಾಗಲಿದೆ. ಅಲ್ಲದೆ ವಿತರಣೆ ಪ್ರಕ್ರಿಯೆಯು ಮಾರ್ಚ್ ತಿಂಗಳಲ್ಲಿ ಆರಂಭವಾಗಲಿದೆ.

ಪ್ರಸ್ತುತ 320ಡಿ ವೆರಿಯಂಟ್ ಮಾತ್ರ ಪರಿಚಯಿಸಲಾಗಿದೆ. ಇದು ಟ್ವಿನ್ ಟರ್ಬೊಚಾರ್ಜ್ಡ್, 2.0 ಲೀಟರ್ ಫೋರ್ ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದ್ದು, 184 ಅಶ್ವಶಕ್ತಿ (380 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಇದು 8 ಸ್ಪೀಡ್ ಸ್ಟೆಪ್‌ಟ್ರಾನಿಕ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಹೊಂದಿದೆ.

BMW 3 Series Gran Turismo

ಬಿಎಂಡಬ್ಲ್ಯು 320ಡಿ ಜಿಟಿ ಕಾರು ಕೇವಲ 7.9 ಸೆಕೆಂಡುಗಳಲ್ಲೇ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಗಂಟೆಗೆ ಗರಿಷ್ಠ 226 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ. ಇದು ಕಂಫರ್ಟ್, ಇಕೊಪ್ರೊ ಮತ್ತು ಸ್ಪೋರ್ಟ್‌ಗಳೆಂಬ ಮೂರು ಚಾಲನಾ ಮೋಡ್‌ಗಳನ್ನು ಹೊಂದಿದೆ.

English summary
Launched during the 2014 Auto Expo, the BMW 3 Series Gran Turismo has been priced at INR 42.75 lakhs (All India, Ex-showroom). The new 3 Series GT will be assembled locally at the automakers Chennai facility and deliveries will begin from March onwards.
Story first published: Saturday, February 15, 2014, 11:40 [IST]
Please Wait while comments are loading...

Latest Photos