ಬ್ರಿಟನ್‌ಗೆ ಇಸುಝು ಡಿಮ್ಯಾಕ್ಸ್ ಬ್ಲೇಡ್ ಆವೃತ್ತಿ

Written By:

ಜಪಾನ್ ಮೂಲದ ಇಸುಝು ಸಂಸ್ಥೆಯು ತನ್ನ ನೂತನ ಪಿಕಪ್ ಮಾದರಿಗಳನ್ನು ದೆಹಲಿಯಲ್ಲಿ ನಡೆದ 2014 ಆಟೋ ಎಕ್ಸ್ ಪೋದಲ್ಲಿ ಪರಿಚಯಿಸಿತ್ತು. ನಿಮ್ಮ ಮಾಹಿತಿಗಾಗಿ, ಇಸುಝು ಜಗತ್ತಿನ ನಂಬಿಕೆಗ್ರಸ್ತ ಪಿಕಪ್ ಟ್ರಕ್ ತಯಾರಕ ಸಂಸ್ಥೆಗಳಲ್ಲಿ ಒಂದಾಗಿದೆ.

ಬ್ರಿಟನ್‌ನಲ್ಲಿ ಭದ್ರ ನೆಲೆ ಹೊಂದಿರುವ ಇಸುಝು, ತನ್ನ ಗ್ರಾಹಕರಿಗೆ ವಿಶೇಷ ಬ್ಲೇಡ್ ಆವೃತ್ತಿ ಪರಿಚಯಿಸಲು ಹೊರಟಿದೆ. ನೂತನ ಆವೃತ್ತಿಯು ಮುಂಭಾಗದಲ್ಲಿ ಮಂಕಾದ ಬೂದು ಬಣ್ಣವನ್ನು ಪಡೆಯಲಿದೆ. ಇದು ಕಪ್ಪು ದೇಹಭಾಷೆಗೆ ಇನ್ನಷ್ಟು ಅಂದತೆ ಪ್ರದಾನ ಮಾಡಲಿದೆ.

Isuzu D-Max Blade Edition

ಅಂದರೆ ಕಾಸ್ಮಿಕ್ ಬ್ಲ್ಯಾಕ್ ಮತ್ತು ಸ್ಲ್ಯಾಶ್ ವೈಟ್ ಬಣ್ಣಗಳಲ್ಲಿ ಇದು ಲಭ್ಯವಾಗಲಿದೆ. ಇನ್ನು ಇಂಟಿರಿಯರ್ ಬಗ್ಗೆ ಮಾತನಾಡುವುದಾದ್ದಲ್ಲಿ, ಕ್ಲೈಮೇಟ್ ಕಂಟ್ರೋಲ್, ಐಷಾರಾಮಿ ಲೆಥರ್ ಸೀಟು, ಡಿಎಬಿ ಡಿಜಿಟರ್ ರೆಡಿಯೋ ಹಾಗೂ ಮನರಂಜನೆಗಾಗಿ 6.1 ಇಂಚು ಟಚ್ ಸ್ಕ್ರೀನ್ ನೇವಿಗೇಷನ್ ಸಿಸ್ಟಂ ಜತೆ ಬ್ಯಾಕಿಂಗ್ ಕ್ಯಾಮೆರಾ ಸೌಲಭ್ಯವಿರಲಿದೆ.

ಅಂತಿಮವಾಗಿ 2.5 ಲೀಟರ್ ಟ್ವಿನ್ ಟರ್ಬೊ ಡೀಸೆಲ್ ಎಂಜಿನ್ ಹೊಂದಿರಲಿದ್ದು, 163 ಪಿಎಸ್ ಪವರ್ (400 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ. ಇನ್ನು ಬ್ರಿಟನ್‌ನಲ್ಲಿ ಎಪ್ರಿಲ್ ತಿಂಗಳಿಂದ ವಿತರಣೆ ಕಾರ್ಯ ಆರಂಭವಾಗಲಿದೆ.

English summary
Isuzu showcased their current portfolio of pickup trucks at the 2014 Auto Expo in Delhi, India. For those who don't know Isuzu is among the trust manufacturers of pickup trucks across the globe.
Story first published: Saturday, March 15, 2014, 14:22 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark