4 ಎಂಪಿವಿ, ಎಸ್‌ಯುವಿ ಅಭಿವೃದ್ಧಿಪಡಿಸಲಿರುವ ಮಹೀಂದ್ರ

By Nagaraja

ಕ್ರೀಡಾ ಬಳಕೆಯ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಧೆಯು, ನಾಲ್ಕು ನೂತನ ಎಸ್‌ಯುವಿ ಹಾಗೂ ಎಂಪಿವಿ ಮಾದರಿಗಳನ್ನು ಅಭಿವೃದ್ಧಿಪಡಿಸುವ ಯೋಜನೆ ಹೊಂದಿದೆ.

ಸ್ಕಾರ್ಪಿಯೊ ಹಾಗೂ ಬೊಲೆರೊಗಳಂತಹ ಐಕಾನಿಕ್ ಕಾರುಗಳನ್ನು ಭಾರತೀಯ ಕಾರು ಜಗತ್ತಿಗೆ ಸನ್ಮಾನಿಸಿರುವ ಮಹೀಂದ್ರ, ನೂತನ ಮಾದರಿಗಳ ಮೂಲಕ ಇದೇ ನಂಬಿಕೆಯನ್ನು ಉಳಿಸಿಕೊಳ್ಳುವ ಭರವಸೆಯಲ್ಲಿದೆ.

 Mahindra

ಈ ನಡುವೆ ಮಾರುತಿ ಎರ್ಟಿಗಾ, ರೆನೊ ಡಸ್ಟರ್ ಹಾಗೂ ಫೋರ್ಡ್ ಇಕೊಸ್ಪೋರ್ಟ್‌ಗಳಂತಹ ಸ್ಪರ್ಧಾತ್ಮಕ ಕಾರುಗಳ ಆಗಮನವೂ ಮಹೀಂದ್ರ ಹಿನ್ನಡೆಗೆ ಕಾರಣವಾಗಿತ್ತು. ಈ ಎಲ್ಲ ಪರಿಸ್ಥಿತಿಯನ್ನು ನಿಭಾಯಿಸುವ ಪ್ರಯತ್ನದಲ್ಲಿರುವ ಮಹೀಂದ್ರ ಸಂಸ್ಥೆ ನೂತನ ಮಾದರಿಗಳನ್ನು ಪ್ರದರ್ಶಿಸಲಿದೆ.

ವರದಿಗಳ ಪ್ರಕಾರ ನೂತನ ಮಹೀಂದ್ರ ಯುಟಿಲಿಟಿ ವಾಹನಗಳು ಹೊಸ ಲುಕ್ ಪಡೆದುಕೊಳ್ಳಲಿದೆ. ಈ ಪೈಕಿ ಮಹೀಂದ್ರ ನೂತನ ಕಾರುಗಳು ಸ್ಯಾಂಗ್ಯೊಂಗ್ ಎಕ್ಸ್100, ಎಕ್ಸ್‌ಯುವಿ500 ಹಾಗೂ ಕ್ಸೈಲೋ ತಲಹದಿಯಲ್ಲಿ ನಿರ್ಮಾಣವಾಗುವ ಸಾಧ್ಯತೆಯಿದೆ. ಹಾಗೆಯೇ 2015-16ರ ಅವಧಿಯಲ್ಲಿ ರಸ್ತೆ ಪ್ರವೇಶಿಸಲಿದೆ.

Most Read Articles

Kannada
English summary
As for the particular new vehicles themselves, one of the MPVs will be built on the Ssangyong X100 platform, while another will be developed on the XUV500's architecture, even as a third will be an extensively updated Xylo.
Story first published: Tuesday, February 18, 2014, 12:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X