ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಸೀಮಿತ ಆವೃತ್ತಿ ಲಾಂಚ್

Written By:

ದೇಶದ ನಂ.1 ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ತನ್ನ ಜನಪ್ರಿಯ ಸ್ವಿಫ್ಟ್ ಡಿಜೈರ್ ಆವೃತ್ತಿಯ ನೂತನ ಎಲ್‌ಡಿಐಎಕ್ಸ್ ಸೀಮಿತ ಆವೃತ್ತಿಯನ್ನು ಲಾಂಚ್ ಮಾಡಿದೆ.

ಇದು ಡೀಸೆಲ್ ಎಲ್‌ಡಿಐ ಸಾಲಿನಲ್ಲಿ ಗುರುತಿಸಿಕೊಳ್ಳಲಿದೆ. ಅಂದರೆ ನೂತನ ಡೀಸೆಲ್ ಎಲ್‌ಡಿಐಎಕ್ಸ್ ವೆರಿಯಂಟ್ ಪವರ್ ವಿಂಡೋಸ್, ರಿಮೋಟ್ ಸೆಂಟ್ರಲ್ ಲಾಂಕಿಂಗ್, ಡಬಲ್ ಡಿನ್ ಸ್ಟೀರಿಯೋ ಸಿಸ್ಟಂ, ಫ್ರಂಟ್ ಆಂಡ್ ರಿಯರ್ ಸ್ಪೀಕರ್ ಮತ್ತು ಟ್ವೀಟರ್, ದೇಹ ಬಣ್ಣದ ಒಆರ್‌ಎವಿ, ಇಂಟೇಗ್ರೇಟಡ್ ಟರ್ನ್ ಇಂಡಿಕೇಟರ್ ಹಾಗೂ ಫ್ರಂಟ್ ಫಾಗ್ ಲ್ಯಾಂಪ್ ಜತೆಗೆ ಇತರ ಅನೇಕ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ.

To Follow DriveSpark On Facebook, Click The Like Button
Maruti Suzuki Swift DZire

ಇವೆಲ್ಲವೂ ಡಿಜೈರ್ ವಿಡಿಐ ವೆರಿಯಂಟ್‌ಗೆ ಸಮಾನವಾಗಿ ಗುರುತಿಸಲು ಎಲ್‌ಡಿಐಗೆ ನೆರವಾಗಲಿದೆ. ಹಾಗಿದ್ದರೂ ವಿಡಿಐ ವೆರಿಯಂಟ್‌ಗಿಂತಲೂ ಕಡಿಮೆ ದರವಾಗಿರಲಿದೆ. ಅಂದರೆ ನೂತನ ಡಿಜೈರ್ ಎಲ್‌ಡಿಐಎಕ್ಸ್ ವೆರಿಯಂಟ್ ದೆಹಲಿ ಎಕ್ಸ್ ಶೋ ರೂಂ ದರ 6.86 ಲಕ್ಷ ರು.ಗಳಾಗಿರಲಿದೆ. ಈ ಪೈಕಿ ಪ್ಯಾಕೇಜ್‌ಗಾಗಿ ರು. 46,500 ತಗುಲಲಿದೆ.

ಅಷ್ಟೇ ಅಲ್ಲದೆ 2013 ಮಾದರಿಯ ಸ್ವಿಫ್ಟ್ ಡಿಜೈರ್‌ಗೆ ವಿಶೇಷ ರಿಯಾಯಿತಿ ದರವನ್ನು ಮಾರುತಿ ನೀಡುತ್ತಿದೆ. ಅಲ್ಲದೆ 2014 ಮಾದರಿಯು ರು. 15,000 ವರೆಗೆ ಲಾಯಲ್ಟಿ ಹಾಗೂ ಎಕ್ಸ್‌ಚೇಂಜ್ ಬೋನಸ್ ಹಾಗೆಯೇ ರು. 1,500 ವರೆಗೆ ಕಾರ್ಪೋರೇಟ್ ಡಿಸ್ಕೌಂಟ್ ಪಡೆಯಲಿದೆ.

English summary
Maruti Suzuki has launched yet another special edition model. This one is for the Swift DZire compact sedan. To be specific, the special edition is limited to the base diesel LDi variant and is thus named Maruti Swift Dzire LDiX.
Story first published: Saturday, March 8, 2014, 11:24 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark